ಏನಿದು ‘ಹ್ಯೂಮನ್ ಕಾಂಪೋಸ್ಟಿಂಗ್‌’? ಮಾನವ ದೇಹವನ್ನು ಗೊಬ್ಬರವಾಗಿಸುವ ಹೊಸ ವಿಧಾನಕ್ಕೆ ಆಸ್ಟ್ರೇಲಿಯಾ ಸಜ್ಜು | Human Composting

ಸತ್ತ ವ್ಯಕ್ತಿಯ ದೇಹವನ್ನೇ ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸುವ ಆಸ್ಟ್ರೇಲಿಯಾ ವಿಧಾನವೊಂದು ಈಗ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ.
Human Composting
ಏನಿದು ‘ಹ್ಯೂಮನ್ ಕಾಂಪೋಸ್ಟಿಂಗ್‌’? ಮಾನವ ದೇಹವನ್ನು ಗೊಬ್ಬರವಾಗಿಸುವ ಹೊಸ ವಿಧಾನಕ್ಕೆ ಆಸ್ಟ್ರೇಲಿಯಾ ಸಜ್ಜು | Human Composting
Published on: 

Human Composting: ನಮ್ಮಲ್ಲಿ ಮನುಷ್ಯ ಮೃತಪಟ್ಟ ಬಳಿಕ ಅವರ ದೇಹವನ್ನು ಅಂತ್ಯಸಂಸ್ಕಾರ ಮಾಡುವುದು ಸಾಮಾನ್ಯ ಪದ್ಧತಿ. ಕೆಲವೆಡೆ ಹೂಳಿದರೆ, ಇನ್ನೂ ಕೆಲವೆಡೆ ಅಗ್ನಿಸ್ಪರ್ಶಿಸುವ ಮೂಲಕ ಸುಡುತ್ತಾರೆ. ಆದರೆ, ಭೂಮಿಗೆ ಹೂಳಿದ ದೇಹದ ಮಾಂಸ, ಮೂಳೆ ಎಲ್ಲವೂ ಕೊಳೆತು, ಆ ಮಣ್ಣಿನಲ್ಲಿ ಬೆರೆತು ಹೋಗುತ್ತವೆ. ಇದನ್ನೇ ಹೊಸ ಹಾಗೂ ವಿನೂತನ ಪ್ರಯೋಗದಡಿಯಲ್ಲಿ ಯಾಕೆ ಒಳ್ಳೆ ಕಾರ್ಯಕ್ಕೆ ಬಳಸಿಕೊಳ್ಳಬಾರದು ಎಂಬ ಆಸ್ಟ್ರೇಲಿಯಾದ ಮಹತ್ವದ ಹೆಜ್ಜೆ ಇದೀಗ ಜಾಗತಿಕವಾಗಿ ಹಲವರ ಕುತೂಹಲಕ್ಕೆ ಕಾರಣವಾಗಿದೆ.

ಸತ್ತ ವ್ಯಕ್ತಿಯ ದೇಹವನ್ನೇ ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸುವ ಆಸ್ಟ್ರೇಲಿಯಾ ವಿಧಾನವೊಂದು ಈಗ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಪರಿಸರ ಸ್ನೇಹಿ ಅಂತ್ಯಸಂಸ್ಕಾರದ ಪರ್ಯಾಯವಾಗಿ ಗುರುತಿಸಿಕೊಂಡಿರುವ ಈ ‘ಹ್ಯೂಮನ್ ಕಾಂಪೋಸ್ಟಿಂಗ್‌’ ಪದ್ಧತಿಗೆ ದೇಶವು ಅನುಮತಿ ನೀಡಲು ಮುಂದಾಗಿದೆ. ಹಾಗಾದರೆ, ಮನುಷ್ಯನ ದೇಹವನ್ನು ಗೊಬ್ಬರವಾಗಿ ಪರಿವರ್ತಿಸುವ ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇದರ ಹಿಂದಿರುವ ಮೂಲ ಉದ್ದೇಶವೇನು? ಈ ಹೊಸ ಪದ್ಧತಿ ಪರಿಸರಕ್ಕೆ ನಿಜಕ್ಕೂ ಹೇಗೆ ನೆರವಾಗಬಹುದು? ಎಂಬುದರ ವಿವರ ಹೀಗಿದೆ ಗಮನಿಸಿ.

'ಹ್ಯೂಮನ್ ಕಾಂಪೋಸ್ಟಿಂಗ್'

ನ್ಯೂ ಸೌತ್ ವೇಲ್ಸ್, ಆಸ್ಟ್ರೇಲಿಯಾ, ಸಾಂಪ್ರದಾಯಿಕ ಸಮಾಧಿ ಮತ್ತು ದಹನದ ಜತೆಗೆ ಮರಣೋತ್ತರ ಸಮಾಧಿಯ ಮತ್ತೊಂದು ವಿಧಾನವನ್ನು ಕಾನೂನುಬದ್ಧಗೊಳಿಸಲು ಮುಂದಾಗಿದೆ. 'ಹ್ಯೂಮನ್ ಕಾಂಪೋಸ್ಟಿಂಗ್' ಅಥವಾ 'ಟೆರಮೇಶನ್' ಎಂದು ಕರೆಯಲ್ಪಡುವ ಈ ವಿಧಾನವು ನಿಯಂತ್ರಿತ ಜೈವಿಕ ಪ್ರಕ್ರಿಯೆಯ ಮೂಲಕ ಮಾನವ ದೇಹಗಳನ್ನು ಮಣ್ಣಿನಂತಹ ವಸ್ತುವಾಗಿ ಪರಿವರ್ತಿಸುವುದನ್ನು ಒಳಗೊಂಡಿರುತ್ತದೆ ಎನ್ನಲಾಗಿದೆ.

ಈ ಪ್ರಕ್ರಿಯೆಯನ್ನು ವಿಶೇಷ ಸೌಲಭ್ಯಗಳಲ್ಲಿ ನಡೆಸಲಾಗುತ್ತದೆ. ಸಾಂಪ್ರದಾಯಿಕ ಅಂತ್ಯಸಂಸ್ಕಾರಕ್ಕೆ ಹೋಲಿಕೆ ಮಾಡಿದರೆ, ಇದರಿಂದ ಜಾಗ ಮತ್ತು ಶಕ್ತಿಯ ಬಳಕೆ ಕಡಿಮೆಯಾಗುತ್ತದೆ ಎಂದು ಇದನ್ನು ಬೆಂಬಲಿಸುವವರು ಅಭಿಪ್ರಾಯಿಸಿದ್ದಾರೆ. ಪರಿಸರಕ್ಕೆ ಹಾನಿ ಕಡಿಮೆ ಮಾಡುವ ಅಂತ್ಯಸಂಸ್ಕಾರ ವಿಧಾನವನ್ನು ಬಯಸುವವರಲ್ಲಿ ಈ ಪದ್ಧತಿ ಜನಪ್ರಿಯವಾಗುತ್ತಿದೆ ಎಂದು ವಿವರಿಸಲಾಗಿದೆ.

ಸ್ಮಾರಕ ಮರ

ಪ್ರಕ್ರಿಯು ಪೂರ್ಣಗೊಂಡ ಬಳಿಕ ಸಿಗುವ ಸಾವಯವ ವಸ್ತುವನ್ನು ಆಯಾ ಮೃತರ ಕುಟುಂಬಕ್ಕೆ ನೀಡಬಹುದು. ಕಾನೂನು ಅನುಮತಿ ಇದ್ದರೆ, ಅದನ್ನು ತೋಟಗಳಲ್ಲಿ ಬಳಸಬಹುದು ಅಥವಾ ಮೃತರ ನೆನಪಿಗಾಗಿ ಸ್ಮಾರಕ ಮರಗಳನ್ನು ಬೆಳೆಸಲು ಉಪಯೋಗಿಸಬಹುದು. ಆದರೆ, ಈ ವಸ್ತುವನ್ನು ಸಾಮಾನ್ಯ ಮಣ್ಣಿನಂತೆ ಬಳಸಲು ಸಾಧ್ಯವಿಲ್ಲ. ಇದನ್ನು ಎಲ್ಲಿ ಮತ್ತು ಹೇಗೆ ಬಳಸಬೇಕು ಎಂಬುದಕ್ಕೆ ಕೆಲವು ನಿಯಮಗಳಿವೆ. ಅದನ್ನು ಅನುಸರಿಸಬೇಕಿದೆ. ಅಲ್ಲದೆ, ಈ ವಿಧಾನದಲ್ಲಿ ಅಂತ್ಯಸಂಸ್ಕಾರ ಮಾಡಲು ಅಗತ್ಯವಾದ ಅನುಮತಿ ಮತ್ತು ಕಾನೂನು ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎನ್ನಲಾಗಿದೆ.

Also Read
ಕಥೆ, ಪಾತ್ರ ಯಾವುದೂ ಹೊಸತಲ್ಲ! ಇಷ್ಟಾದ್ರೂ 'ಪ್ರೇಮದ ಊರಲಿ' ಹೌಸ್​ಫುಲ್​ ಶೋಗಳ ಹಿಂದಿದೆ​​ ಈ ಸೀಕ್ರೆಟ್​ | Premada Oorali
Human Composting

ಅಮೆರಿಕದ ಕೆಲವು ರಾಜ್ಯಗಳಲ್ಲಿ ಈಗಾಗಲೇ ಈ ವಿಧಾನಕ್ಕೆ ಕಾನೂನು ಅನುಮತಿ ನೀಡಲಾಗಿದೆ. ಇದರಿಂದ ಪರಿಸರಕ್ಕೆ ಉಂಟಾಗುವ ಹಾನಿ ಕಡಿಮೆಯಾಗುತ್ತದೆ ಮತ್ತು ಅಂತ್ಯಸಂಸ್ಕಾರಕ್ಕೆ ಜನರಿಗೆ ಮತ್ತೊಂದು ಆಯ್ಕೆ ಸಿಗುತ್ತದೆ ಎಂದು ಇದಕ್ಕೆ ಪರವಿರುವ ಮಂದಿ ಅಭಿಪ್ರಾಯಿಸಿದ್ದಾರೆ. ಈ ಹೊಸ ವಿಧಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನ್ಯೂ ಸೌತ್ ವೇಲ್ಸ್​ನಲ್ಲಿ ಇದಕ್ಕೆ ಕಾನೂನು ಮಾನ್ಯತೆ ಸಿಗಲಿದೆಯೇ ಮತ್ತು ಸಮಾಜ ಎಷ್ಟರಮಟ್ಟಿಗೆ ಈ ಪ್ರಕ್ರಿಯೆಯನ್ನು ಒಪ್ಪಿಕೊಳ್ಳಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net