ಬರೀ ಹಣದ ವಿಷಯದಲ್ಲಿ ಮಾತ್ರವಲ್ಲ, ಮೈದಾನದ ಪ್ರದರ್ಶನದಲ್ಲೂ ಕೊಹ್ಲಿ ನಂಬರ್ 1 ಆಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 8,000 ರನ್ಗಳ ಮೈಲಿಗಲ್ಲು ದಾಟಿದ ವಿಶ್ವದ ಮೊದಲ ಮತ್ತು ಏಕೈಕ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಒಟ್ಟು 268 ಪಂದ್ಯಗಳಲ್ಲಿ ಮೈದಾನಕ್ಕಿಳಿದಿರುವ ವಿರಾಟ್ ಇಲ್ಲಿವರೆಗೆ ಸುಮಾರು 8,730 ರನ್ಗಳನ್ನು ಬಾರಿಸಿದ್ದಾರೆ. ಇದರಲ್ಲಿ 8 ಶತಕಗಳು ಮತ್ತು 64 ಅರ್ಧಶತಕಗಳು ಕೂಡಿವೆ.