ರಸ್ಕ್​, ಕೇಕ್​ ಪ್ರೀಯರೇ ಎಚ್ಚರ..! ಹೈದರಾಬಾದ್​ನಲ್ಲಿ 2.7 ಲಕ್ಷದ ಅಕ್ರಮ ಬೇಕರಿ ಐಟ್ಸ್ಂ ಜಪ್ತಿ! Illegal Bakery

ಅನೈರ್ಮಲ್ಯದಿಂದ ಕೂಡಿದ್ದ 'ಚಾಂದ್ ಬೇಕರಿ' ಮೇಲೆ ಪೊಲೀಸ್ ದಾಳಿ
ಅನೈರ್ಮಲ್ಯದಿಂದ ಕೂಡಿದ್ದ 'ಚಾಂದ್ ಬೇಕರಿ' ಮೇಲೆ ಪೊಲೀಸ್ ದಾಳಿ
Published on

ಪ್ರಮುಖ ಮುಖ್ಯಾಂಶಗಳು

  • ಅನೈರ್ಮಲ್ಯದಿಂದ ಕೂಡಿದ್ದ 'ಚಾಂದ್ ಬೇಕರಿ' ಮೇಲೆ ಪೊಲೀಸ್ ದಾಳಿ
  • ಹೈದರಾಬಾದ್‌ನ ಟಪ್ಪಾಚಬುತ್ರದಲ್ಲಿ ನಡೆದ ಘಟನೆ
  • ಪರವಾನಗಿ ಇಲ್ಲದೆ ರಸ್ಕ್, ತಿಂಡಿ ತಯಾರಿಸುತ್ತಿದ್ದ ಮಾಲೀಕ ಸೈಯದ್ ಖಾದೀರ್ ಬಂಧನ
ಹೈದರಾಬಾದ್: ಭಾರತದಲ್ಲಿ ದೊರೆಯುವ ಪ್ಯಾಕೆಜ್ಡ್​ ತಿಂಡಿಗಳ ಗುಣಮಟ್ಟ ಕುಂಟಿತಗೊಳ್ಳುತ್ತಿದ್ದು, ಪ್ರತಿದಿನ ಒಂದಲ್ಲ ಒಂದು ಸ್ಥಳದಲ್ಲಿ ಕಳಪೆ ಆಹಾರಗಳ ತಯಾರಿಕಾ ಘಟಕಗಳ ಮೇಲೆ ರೈಡ್​ ನಡೆಯುತ್ತಿದೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಆಹಾರ ಸುರಕ್ಷತಾ ದಾಳಿಯ ದೃಶ್ಯಗಳನ್ನು ನೋಡಿದರೆ, ನೀವು ಹೊರಗಿನ ಬೇಕರಿ (Illegal Bakery) ತಿಂಡಿಗಳನ್ನು ತಿನ್ನುವುದು ಹಾಳಾಗಲಿ ಮುಟ್ಟಲು ನೂರು ಸಲ ಯೋಚಿಸುವುದು ಗ್ಯಾರಂಟಿ.

ನೈರ್ಮಲ್ಯದ ಹೆಸರೇ ಇಲ್ಲದ 'ಚಾಂದ್ ಬೇಕರಿ' ಮೇಲೆ ದಾಳಿ

ಗೋಲ್ಕೊಂಡ ವಲಯದ ಟಪ್ಪಾಚಬುತ್ರ ಪ್ರದೇಶದಲ್ಲಿರುವ ಚಾಂದ್ ಬೇಕರಿ ಮೇಲೆ ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದಾಗ ಅಲ್ಲಿನ ಪರಿಸ್ಥಿತಿ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಅತ್ಯಂತ ಕೊಳಕು ಮತ್ತು ಅನೈರ್ಮಲ್ಯದ ವಾತಾವರಣದಲ್ಲಿ ಬೇಕರಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. ಈ ಕಾರ್ಯಾಚರಣೆಯಲ್ಲಿ ಸುಮಾರು 2,77,630 ರೂಪಾಯಿ ಮೌಲ್ಯದ ಕಳಪೆ ಗುಣಮಟ್ಟದ ಬೇಕರಿ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬೇಕರಿ ಮಾಲೀಕ 42 ವರ್ಷದ ಸೈಯದ್ ಖಾದೀರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ ಪೊಲೀಸರು ತಮ್ಮ ಅಧಿಕೃತ 'X' (ಟ್ವಿಟರ್) ಖಾತೆಯಲ್ಲಿ ಈ ದಾಳಿಯ ವಿಡಿಯೋವನ್ನು ಹಂಚಿಕೊಂಡಿದ್ದು, ಅದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಲೈಸೆನ್ಸ್ ಇಲ್ಲ, ಅಗ್ನಿ ಸುರಕ್ಷತೆಯೂ ಇಲ್ಲ

ತನಿಖೆಯ ವೇಳೆ ಬಯಲಾದ ಸತ್ಯವೇನೆಂದರೆ, ಈ ಬೇಕರಿ ನಡೆಸಲು ಯಾವುದೇ ಅಧಿಕೃತ ಆಹಾರ ಪರವಾನಗಿ (FSSAI), ವ್ಯಾಪಾರ ಪರವಾನಗಿ ಅಥವಾ ಕಾರ್ಮಿಕ ಇಲಾಖೆಯ ಅನುಮತಿ ಇರಲಿಲ್ಲ. ಇಷ್ಟೇ ಅಲ್ಲದೆ, ಅಡುಗೆ ಮಾಡುವ ಜಾಗದಲ್ಲಿ ಕನಿಷ್ಠ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಕೂಡ ಪಾಲಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಇಲ್ಲಿ ತಯಾರಾದ ರಸ್ಕ್ ಮತ್ತು ಇತರ ತಿಂಡಿಗಳನ್ನು ನಗರದಾದ್ಯಂತ ಇರುವ ಸಣ್ಣ ಕಿರಾಣಿ ಅಂಗಡಿಗಳು, ಹೋಟೆಲ್ ಮತ್ತು ಕೆಫೆಗಳಿಗೆ ಅಕ್ರಮವಾಗಿ ಸರಬರಾಜು ಮಾಡಲಾಗುತ್ತಿತ್ತು. ಅಂದರೆ, ನೀವು ಯಾವುದೋ ಹೋಟೆಲ್‌ನಲ್ಲಿ ಕುಳಿತು ತಿನ್ನುವ ತಿಂಡಿ ಇಂತಹ ಕೊಳಕು ಜಾಗದಿಂದ ಬಂದಿರುವ ಸಾಧ್ಯತೆ ದಟ್ಟವಾಗಿದೆ.

ಕಾನೂನು ಕ್ರಮ ಜಾರಿ

ಎಸಿಪಿ ಆಂಡೆ ಶ್ರೀನಿವಾಸ ರಾವ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಟಪ್ಪಾಚಬುತ್ರ ಪೊಲೀಸರು ಸೈಯದ್ ಖಾದೀರ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 274, 275 ಮತ್ತು 318(4) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net