ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ಆಟಗಾರರಲ್ಲಿ ಒತ್ತಡ ಮತ್ತು ಭಾವನೆಗಳು ಅತ್ಯಂತ ಹೆಚ್ಚಿನ ಮಟ್ಟದಲ್ಲಿರುತ್ತವೆ. ಪಂದ್ಯದ ಆರಂಭದಲ್ಲಿ ಆಟಗಾರರ ಮೇಲೆ ಅತಿಯಾದ ಒತ್ತಡ ಇರುತ್ತದೆಯಾದರೂ, ಆಟ ಮುಂದುವರಿದಂತೆ ಆ ಒತ್ತಡ ಕ್ರಮೇಣ ಕಡಿಮೆಯಾಗುತ್ತದೆ ಎಂದಿರುವ ಖುಷ್ದಿಲ್, ನಮ್ಮ ಕಾಲದಲ್ಲೂ ಭಾರತವನ್ನು ಸೋಲಿಸಿ ಉತ್ತಮ ಪಂದ್ಯಗಳನ್ನು ಆಡಿದ್ದೇವೆ ಎಂದು ನೆನಪಿಸಿಕೊಂಡರು. ಪಾಕಿಸ್ತಾನ ತಂಡವು ಭಾರತವನ್ನು ಸೋಲಿಸಿದರೆ ಆ ಗೆಲುವಿನ ಪ್ರಾಮುಖ್ಯತೆಯೇ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕಿಸ್ತಾನ ಜಯ ಸಾಧಿಸಿದರೆ, ಆ ಗೆಲುವಿನಿಂದ ಸಿಗುವ ಆನಂದ ಮತ್ತು ಸಂಭ್ರಮವೇ ಬೇರೆ ಮಟ್ಟದಲ್ಲಿರುತ್ತದೆ ಎಂದು ಖುಷ್ದಿಲ್ ಹೇಳಿದ್ದಾರೆ.