ಅಂದಹಾಗೆ, ಶ್ರೇಯಸ್ ಅಯ್ಯರ್ ಅವರು 2024ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (KKR) ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಆ ನಂತರ ಪಂಜಾಬ್ ಕಿಂಗ್ಸ್ ತಂಡದ ಸಾರಥ್ಯ ವಹಿಸಿಕೊಂಡು, 2025ರ ಸೀಸನ್‌ನಲ್ಲಿ ಆ ತಂಡವನ್ನೂ ಫೈನಲ್‌ವರೆಗೂ ಮುನ್ನಡೆಸಿದ್ದರು. ಅಲ್ಲದೆ, ಇತ್ತೀಚೆಗೆ ಮುಕ್ತಾಯವಾದ 19ನೇ ಆವೃತ್ತಿಯಲ್ಲೂ ಉತ್ತಮ ನಾಯಕತ್ವದೊಂದಿಗೆ ಅಯ್ಯರ್ ಗಮನ ಸೆಳೆದರು. ನಾಯಕತ್ವ ಮಾತ್ರವಲ್ಲ, ಬ್ಯಾಟಿಂಗ್ನಲ್ಲೂ ತಮ್ಮ ಸಾಮರ್ಥ್ಯವನ್ನು ಅಯ್ಯರ್ ಸಾಬೀತು ಮಾಡಿದರು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಅವರು ಐಪಿಎಲ್‌ನಲ್ಲಿ ರನ್ ಗಳಿಸಲು ಪರದಾಡಿದರು. ಇದನ್ನೆಲ್ಲ ಪರಿಗಣಿಸಿದ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗಾಗಿ ಸೂರ್ಯಕುಮಾರ್ ಅವರ ಜಾಗಕ್ಕೆ ಶ್ರೇಯಸ್ ಅವರನ್ನು ಆಯ್ಕೆ ಮಾಡಿದ್ದಲ್ಲದೆ, ತಂಡದ ನಾಯಕತ್ವದ ಜವಾಬ್ದಾರಿಯನ್ನೂ ನೀಡಿದೆ.