ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಎದುರಾಳಿ ತಂಡ ತನ್ನ ಸ್ಪಿನ್ ಬಲದಿಂದ ಬಲಿಷ್ಠವಾಗಿ ಕಾಣುತ್ತದೆ. ಇಂಗ್ಲೆಂಡ್ ತಂಡದಲ್ಲಿ ಆದಿಲ್ ರಶೀದ್, ವಿಲ್ ಜಾಕ್ಸ್, ರೆಹಾನ್ ಅಹ್ಮದ್, ಲಿಯಾಮ್ ಡಾಸನ್ ಮತ್ತು ಜಾಕೋಬ್ ಬೆಥೆಲ್ ಅವರಂತಹ ಐದು ಸ್ಪಿನ್ನರ್‌ಗಳಿದ್ದಾರೆ. ಹೀಗಾಗಿ, ಭಾರತ ತಂಡ ಸ್ಪಿನ್ ಬೌಲರ್ಗಳಿಗೆ ಎಡವುತ್ತಿರುವ ಲಾಭವನ್ನು ಇಂಗ್ಲೆಂಡ್ ತಂಡ ಪಡೆದುಕೊಳ್ಳಲಿದೆ. ಒಂದು ವೇಳೆ ಪಿಚ್ ಸ್ಪಿನ್‌ಗೆ ಅನುಕೂಲಕರವಾಗಿದ್ದರೆ, ಭಾರತಕ್ಕೆ ಕಠಿಣ ಪರೀಕ್ಷೆಯಾಗುವ ಸಾಧ್ಯತೆಯಿದೆ.