ILT 20: ಸಾಮಾನ್ಯವಾಗಿ ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ ಕ್ರೀಸ್ ದಾಟಿದರೆ ಸಾಕು ತಕ್ಷಣ ವಿಕೆಟ್ ಕೀಪರ್ ಸ್ಟಂಪ್ ಮಾಡುವುದನ್ನು ನಾವು ನೋಡುತ್ತೇವೆ. ಆದರೆ, ವೆಸ್ಟ್ ಇಂಡೀಸ್ ಸ್ಟಾರ್ ಆಟಗಾರ ಮತ್ತು ವಿಕೆಟ್ ಕೀಪರ್ ನಿಕೋಲಸ್ ಪೂರನ್ ಅವರು ಅಂತಹ ಅವಕಾಶ ಸಿಕ್ಕರೂ ಸ್ಟಂಪ್ ಮಾಡಲಿಲ್ಲ ಅನ್ನೋದೆ ಅಚ್ಚರಿಯ ಸಂಗತಿ. ಅಂದಹಾಗೆ, ಇಲ್ಲಿ ನಿಕೋಲಸ್ ಅವರ ಪ್ಲಾನ್ ಬೇರೆಯೇ ಇತ್ತು. ಆದರೆ, ಅದನ್ನು ಅರಿತುಕೊಂಡ ಎದುರಾಳಿ ತಂಡ ತಕ್ಷಣ ತಮ್ಮ ಪ್ಲಾನ್ ಕೂಡ ಬದಲಿಸಿತು. ಈ ಅಪರೂಪದ ಪ್ರಸಂಗ ಅಂತಾರಾಷ್ಟ್ರೀಯ ಲೀಗ್ ಟಿ20 ಪಂದ್ಯಾವಳಿಯಲ್ಲಿ ನಡೆದಿದೆ.