ನನಗೆ ವೈಭವ್​ನಲ್ಲಿ ಡಾನ್​ ಬ್ರಾಡ್​​ಮನ್​ ಕಾಣಿಸುತ್ತಾರೆ: ಇಬ್ಬರಲ್ಲಿ 'ಆ' ಒಂದು ಸಾಮ್ಯತೆಯಿದೆ; ವಂಡರ್​​ ಕಿಡ್​​ ಬಗ್ಗೆ ರಾಬಿನ್​ ಉತ್ತಪ್ಪ ಹೇಳಿದ್ದೇನು? Robin Uthappa on Vaibhav Suryavanshi

ವೈಭವ್ ಸೂರ್ಯವಂಶಿಯಲ್ಲಿ ದಂತಕಥೆ ಡಾನ್ ಬ್ರಾಡ್‌ಮನ್ ಅವರ ಛಾಯೆ ಕಾಣಿಸುತ್ತಿದೆ: ರಾಬಿನ್ ಉತ್ತಪ್ಪ
ವೈಭವ್ ಸೂರ್ಯವಂಶಿಯಲ್ಲಿ ದಂತಕಥೆ ಡಾನ್ ಬ್ರಾಡ್‌ಮನ್ ಅವರ ಛಾಯೆ ಕಾಣಿಸುತ್ತಿದೆ: ರಾಬಿನ್ ಉತ್ತಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ವೈಭವ್ ಸೂರ್ಯವಂಶಿಯಲ್ಲಿ ದಂತಕಥೆ ಡಾನ್ ಬ್ರಾಡ್‌ಮನ್ ಅವರ ಛಾಯೆ ಕಾಣಿಸುತ್ತಿದೆ: ರಾಬಿನ್ ಉತ್ತಪ್ಪ
  • ವಂಡರ್ ಕಿಡ್​ನನ್ನು ಕ್ರಿಕೆಟ್​ ದಂತಕಥೆಗೆ ಹೋಲಿಸಿದ ರಾಬಿನ್​ ಉತ್ತಪ್ಪ
  • ಇಬ್ಬರು ಎಲ್​ಬಿಡ್ಲ್ಯೂ ಔಟ್​ ಆಗಿದ್ದು ಕಡಿಮೆ ಎಂದ ಮಾಜಿ ಕ್ರಿಕೆಟಿಗ
ಕ್ರಿಕೆಟ್​​: ಈ ಬಾರಿಯ ಐಪಿಎಲ್​ನಲ್ಲಿ ಸಕ್ಕತ್​ ಸೌಂಡ್​ ಮಾಡಿದ ಹೆಸರೆಂದರೆ ಅದು 15 ವರ್ಷದ ಪೋರ ವೈಭವ್​ ಸೂರ್ಯವಂಶಿಯದ್ದಾಗಿದೆ. ಎದುರಿಗೆ ಬಂದ ಎಲ್ಲಾ ಬೌಲರ್​​ಗಳ ಬಾಲ್​​ಗಳನ್ನು ಬೌಂಡರಿಗಟ್ಟಿ ಟೀಂ ಇಂಡಿಯಾದ ಟಿ-20 ತಂಡಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಕೀರ್ತಿಗೆ ಸಹ ಪಾತ್ರನಾಗಿದ್ದಾನೆ.
ಈಗ ಇವರ ಆಟವನ್ನು ವಿಶ್ವ ಕ್ರಿಕೆಟ್​​ನ ದಂತಕಥೆ ಎಂದೇ ಕರೆಯಲ್ಪಡುವ ಡಾನ್​ ಬ್ರಾಡ್​ಮನ್​ (ಸರ್​​, ಡೊನಾಲ್ಡ್​​ ಬ್ರಾಡ್​ಮನ್​) ಗೆ ಹೋಲಿಸಿ ಭಾರತ ತಂಡದ ಮಾಜಿ ಆಟಗಾರ ರಾಬಿನ್​ ಉತ್ತಪ್ಪ (Robin Uthappa on Vaibhav Suryavanshi) ನೀಡಿರುವ ಹೇಳಿಕೆ ಎಲ್ಲಡೆ ವೈರಲ್​ ಆಗುತ್ತಿದೆ.

ಬ್ರಾಡ್​ಮನ್​​ ಮತ್ತು ಸೂರ್ಯವಂಶಿ ಒಂದೇ ರೀತಿಯಲ್ಲಿದ್ದಾರೆ!

ಈಗ ಇಡೀ ದೇಶದಲ್ಲಿ ಹಾಗೆಯೇ ಪ್ರಪಂಚದಲ್ಲಿ ಕೂಡ, ವೈಭವ್​ ಸೂರ್ಯವಂಶಿ ಬ್ಯಾಟಿಂಗ್​ ಬಗ್ಗೆ ಚರ್ಚೆ ನಡೆಯುತ್ತಿದೆ. ನಾವು ಈಗಲೇ ಈ ಬಗ್ಗೆ ನಿರ್ಧಾರಕ್ಕೆ ಬರಲಾಗದಿದ್ದರೂ, ನನಗೆ ವೈಭವ್​ ಮತ್ತು ಡಾನ್​ ಬ್ರಾಡ್​ಮನ್​ ಅವರ ಆಟದ ಪರಿಯಲ್ಲಿ ಸಾಮ್ಯತೆ ಕಾಣಿಸುತ್ತದೆ. ಡಾನ್​ ಬ್ರಾಡ್​ಮನ್​ ಎಲ್​ಬಿಡ್ಲ್ಯೂ ಆಗಿ ಔಟ್​ ಆಗಿದ್ದು ಬಹಳ ಕಡಿಮೆ. ಹಾಗೆಯೇ ವೈಭವ್​ ಕೂಡ ಎಲ್​ಬಿಡ್ಲ್ಯೂ ಆಗಿ ಔಟ್​ ಆಗಿರುದನ್ನು ನಾನು ಗಮನಿಸಿಲ್ಲ.
ನಾನು ಮೊದಲೇ ಹೇಳಿದಂತೆ ಇದು ಕೇವಲ ಒಂದು ಮುನ್ನೋಟವಷ್ಟೇ, ವೈಭವ್​ಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇನ್ನೂ ಅನುಭವ ಬೇಕು. ಕಡಿಮೆ ವಯಸ್ಸಿನಲ್ಲಿ ಟೀಂ ಇಂಡಿಯಾ ಸೇರಿರುವ ಕಾರಣ, ಬೇಗ ಎಲ್ಲವನ್ನು ಕಲಿತುಕೊಂಡರೆ ಹೆಚ್ಚಿನ ಸಮಯ ತಂಡದಲ್ಲಿ ಮುಂದುವರಿಯಬಹುದು ಎಂದು ರಾಬಿನ್​ ಉತ್ತಪ್ಪ, ಯೂಟ್ಯೂಬ್​​ ಚಾನೆಲ್​​ವೊಂದರಲ್ಲಿ ಮಾತನಾಡಿದ್ದಾರೆ.

ನೂತನ ದಾಖಲೆ ಬರೆದ ವೈಭವ್​!

ಗುರುವಾರ (ಜು.23) ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ವಂಡರ್​ ಕಿಡ್​​ ಖ್ಯಾತಿಯ ವೈಭವ್​ ಸೂರ್ಯವಂಶಿ ತಮ್ಮ ಚೊಚ್ಚಲ ಅರ್ಧಶತಕವನ್ನು ಸಿಡಿಸುವ ಮೂಲಕ ನೂತನ ದಾಖಲೆಯೊಂದನ್ನು ಬರೆದಿದ್ದಾರೆ.
ಅತಿ ಚಿಕ್ಕ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಅರ್ಧಶತಕವನ್ನು ಗಳಿಸಿದ ದಾಖಲೆ ಈಗ ವೈಭವ್​ ಸೂರ್ಯವಂಶಿಯದ್ದಾಗಿದೆ. ಕೇವಲ 15 ವರ್ಷ 118 ದಿನಗಳಲ್ಲಿ ಅಂತಾರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಅರ್ಧ ಶತಕವನ್ನು ಸಿಡಿಸುವ ಮೂಲಕ ಈ ಸಾಧನೆಯನ್ನು ಮಾಡಿದ ಜಗತ್ತಿನ ಅತಿ ಕಡಿಮೆ ವಯಸ್ಸಿನ ಬ್ಯಾಟರ್​ ಎಂಬ ದಾಖಲೆ ನಿರ್ಮಿಸಿದ್ದಾನೆ.
ಈ ಮೊದಲು ನೇಪಾಳದ ಕುಶಾಲ್​ ಮಲ್ಲಾ, 15 ವರ್ಷ 340 ದಿನಗಳಲ್ಲಿ ಅರ್ಧ ಶತಕವನ್ನು ಬಾರಿಸಿ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಸ್ಥಾಪಿಸಿದ್ದರು. ವೈಭವ್​ಗೂ ಮೊದಲು, ಭಾರತದ ಪರ ಕ್ರಿಕೆಟ್​ ದೇವರು ಸಚಿನ್​ ತೆಂಡೂಲಕ್ಕರ್​ 16 ವರ್ಷ 213 ದಿನಗಳನ್ನು ಹೊಂದಿದ್ದಾಗ ಈ ಸಾಧನೆಯನ್ನು ಮಾಡಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net