ನೀಟ್​ ಪ್ರತಿಭಟನೆಯಲ್ಲಿ ಪ್ರೀತಿ, ದೇವಸ್ಥಾನದಲ್ಲಿ ಮದುವೆ: 'ಜಂತರ್​-ಮಂತರ್​​' ಜೋಡಿಯ ಅಸಲಿಯತ್ತೇನು? Jantar Mantar Couple

ನೀಟ್ (NEET) ಪ್ರತಿಭಟನೆಯ ವೇಳೆ ಹುಟ್ಟಿಕೊಂಡ ಪ್ರೀತಿ; ದೇವಸ್ಥಾನದಲ್ಲಿ ಮದುವೆ
ನೀಟ್ (NEET) ಪ್ರತಿಭಟನೆಯ ವೇಳೆ ಹುಟ್ಟಿಕೊಂಡ ಪ್ರೀತಿ; ದೇವಸ್ಥಾನದಲ್ಲಿ ಮದುವೆ
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿಯಲ್ಲಿ ನಡೆದಿದ್ದ ನೀಟ್​ ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ
  • ನೀಟ್ (NEET) ಪ್ರತಿಭಟನೆಯ ವೇಳೆ ಹುಟ್ಟಿಕೊಂಡ ಪ್ರೀತಿ; ದೇವಸ್ಥಾನದಲ್ಲಿ ಮದುವೆ
  • ಜಂತರ್​ ಮಂತರ್​ ಜೋಡಿ ಎಂದು ಖ್ಯಾತಿ ಗಳಿಸಿದ ಬಿಹಾರ್​ ಮೂಲದ ಯುವಕ
ಬಿಹಾರ​: ಕಳೆದೊಂದು ತಿಂಗಳಿನಿಂದ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್​-ಮಂತರ್​ನಲ್ಲಿ ನೀಟ್​ ಪರೀಕ್ಷಾ ಅಕ್ರಮವನ್ನು ವಿರೋಧಿಸಿ ಕಾಕ್ರೋಚ್​​ ಜನತಾ ಪಾರ್ಟಿ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಹೋರಾಟದ ಕಾವು ದೇಶಾದ್ಯಂತ ವಿಸ್ತಿರಿಸಿದ ಹಿನ್ನಲೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಾಗೆಯೇ ಕೇಂದ್ರ ಸರ್ಕಾರ ಕೂಡ ಪ್ರರೀಕ್ಷಾ ಅಕ್ರಮವನ್ನು ತಡೆಯಲು ಮಸೂದೆಯನ್ನು ರಚಿಸಿ, ಚರ್ಚೆ ಆರಂಭಿಸಿದೆ.
ಆದರೆ, ಈ ನೀಟ್​ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಬಿಹಾರದ ಯುವಕ-ಯುವತಿಯೊಬ್ಬರು ಪ್ರತಿಭಟನೆ ಸಂದರ್ಭದಲ್ಲಿ ಪ್ರೇಮಜಾಲಕ್ಕೆ ಸಿಲುಕಿ, ಮದುವೆಯಾಗಿದ್ದ (Jantar Mantar Couple) ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಈಗ ಈ ಘಟನೆಯ ಸತ್ಯಾಸತ್ಯತೆ ಬಯಲಾಗಿದೆ.

ಹೋರಾಟಕ್ಕೆ ಹೋದರು ಮದುವೆಯಾದರು!

ಕಳೆದ ಕೆಲ ದಿನಗಳಿಂದ ಬಿಹಾರದ ಮೋಹನ್​ ಎಂಬ ಯುವಕ ನೀಟ್​ ವಿರೋಧಿ ಆಂದೋಲನದಲ್ಲಿ ಭಾಗವಹಿಸಲು ಜಂತರ್​-ಮಂತರ್​ಗೆ ತೆರಳಿದ್ದಾನೆ. ಅಲ್ಲಿ ಅವನಿಗೆ ವಿಡಿಯೋನಲ್ಲಿರುವ ಈ ಯುವತಿ ಪರಿಚಯವಾಗಿದ್ದಾಳೆ.
ಮೋಹನ್​ ವಿಡಿಯೋನಲ್ಲಿ ಹೇಳುವಂತೆ, ನಾನು ಸುಮಾರು 15 ದಿನಗಳ ವರೆಗೆ ಜಂತರ್​-ಮಂತರ್​ನಲ್ಲಿದ್ದೆ. ಅಲ್ಲಿ ಸರಿಯಾಗಿ ಊಟ ಹಾಗೂ ನೀರು ದೊರೆಯುತ್ತಿರಲಿಲ್ಲ. ಆಗ ಈ ಯುವತಿ ನನಗೆ ಪ್ರತಿದಿನ ತಿಂಡಿ-ಊಟದ ವ್ಯವಸ್ಥೆ ಮಾಡಿದ್ದರು.
ಒಂದು ದಿನ ಪೊಲೀಸ್​ ಲಾಠಿ ಚಾರ್ಜ್​ನಲ್ಲಿ ನನ್ನ ತಲೆಗೆ ಏಟುಬಿದ್ದಿತು. ಅಂದೆ ಈಕೆಯೇ ನನ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದಳು. ಅಂದಿ ಇವಳು ನನ್ನನ್ನು ಪ್ರೀತಿಸುತ್ತೇನೆಂದು ಹೇಳಿದಳು. ನನಗೂ ಇವಳು ಇಷ್ಟವಾಗಿದ್ದ ಕಾರಣ ಅಲ್ಲಿಯೇ ಹತ್ತಿರದಲ್ಲಿದ್ದ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡವು ಎಂದು ಮೋಹನ್​ ವಿಡಿಯೋನಲ್ಲಿ ಹೇಳಿದ್ದಾನೆ.
ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಭಾರಿ ವೈರಲ್​ ಆಗದ್ದು, ಇದು ಇಲ್ಲಿವರೆರೆ ಸುಮಾರು 28 ಮಿಲಿಯನ್​ (28 ಕೋಟಿ) ಗೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.

ಈ ವಿಡಿಯೋ ನಿಜವೇ?

ಆದರೆ, ಇಲ್ಲೊಂದು ಟ್ವಿಸ್ಟ್​ಇದೆ, ಅಸಲಿಗೆ ಈ ವಿಡಿಯೋ ನಿಜವಲ್ಲವಂತೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಸಚಿನ್​ ಎನ್ನುವ ಕಂಟೆಂಟ್​ ಕ್ರಿಯೆಟರ್​ ಪ್ರಕಾರ, ಇವರು ಇದೇ ರೀತಿಯ ಹಾಸ್ಯಾತ್ಮಕ ವಿಡಿಯೋಗಳನ್ನು ಸೃಷ್ಟಿಸುತ್ತಾರೆ. ಆದ್ದರಿಂದ ಈ ಜಂತರ್​​-ಮಂತರ್​ ವಿವಾಹದ ವಿಡಿಯೋ ಕೂಡ ಕೇವಲ ಕಾಲ್ಪನಿಕವಷ್ಟೇ ಎಂದು ಮಾದ್ಯಮವೊಂದಕ್ಕೆ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಈ ವಿಡಿಯೋನ ಚರ್ಚೆ ದೇಶದ ತುಂಬೆಲ್ಲಾ ಹರಡಿದೆ ಎಂದರೆ ಮಾತ್ರ ಸುಳ್ಳಲ್ಲ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net