ನಾಯಿಗಿಂತ ಕಡೆಯಾದ್ರಾ ಪಾಕ್​ ಕ್ರಿಕೆಟಿಗರು? ವಿಶ್ವ ಕ್ರಿಕೆಟ್​ನಲ್ಲಿ ಇಂಥಾ ಅಪಮಾನ ಯಾರಿಗೂ ಆಗಿಲ್ಲ, ಇನ್ನಾದ್ರು ಬುದ್ಧಿ ಕಲಿಯಲಿ! Pakistani Cricketers

ಪಾಕಿಸ್ತಾನ​ ಕ್ರಿಕೆಟಿಗರು
ಪಾಕಿಸ್ತಾನ​ ಕ್ರಿಕೆಟಿಗರು
Published on

ಪ್ರಮುಖ ಮುಖ್ಯಾಂಶಗಳು

  • ಉಗ್ರರ ಸ್ವರ್ಗವಾಗಿರುವ ಪಾಕಿಸ್ತಾನ, ವಿಶ್ವದ ಭೂಪಟದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಗುರುತಿಸಿಕೊಂಡಿದೆ
  • ಇಡೀ ವಿಶ್ವ ಪಾಕಿಸ್ತಾನವನ್ನು ಯಾವ ಸ್ಥಾನದಲ್ಲಿ ಇಟ್ಟಿದೆ ಅನ್ನೋದಕ್ಕೆ ಬಿಗ್​ ಬ್ಯಾಷ್​ ಲೀಗ್​ ಸಾಕ್ಷಿ
  • ಪಾಕಿಸ್ತಾನದ ಸ್ಟಾರ್ ಆಟಗಾರರಿಗೆ ಬಿಗ್ ಬ್ಯಾಷ್ ಲೀಗ್​ನಲ್ಲಿ ಅವಮಾನ
  • ಬಾಬರ್ ಅಜಾಮ್​, ಮೊಹಮ್ಮದ್ ರಿಝ್ವಾನ್ ಮತ್ತು ಶಾಹೀನ್ ಶಾ ಅಫ್ರಿದಿಗೆ ಮುಜುಗರ
Pakistani Cricketers : ಆಗಾಗ ತನ್ನ ನರಿಬುದ್ಧಿಯನ್ನು ತೋರಿಸುವ ಮೂಲಕ ಜಾಗತಿಕವಾಗಿ ಅಪನಂಬಿಕೆಗೆ ಗುರಿಯಾಗಿರುವ ಪಾಕಿಸ್ತಾನಕ್ಕೆ ಎಲ್ಲಿಯೂ ಗೌರವ ಇಲ್ಲ ಎನ್ನುವುದು ಹೊಸ ಮಾತೇನಲ್ಲ. ಉಗ್ರರ ಸ್ವರ್ಗವಾಗಿರುವ ಪಾಕಿಸ್ತಾನ, ವಿಶ್ವದ ಭೂಪಟದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಗುರುತಿಸಿಕೊಂಡಿದೆ. ಮತಾಂಧ ಮನಸ್ಸುಗಳಿಂದಲೇ ಪಾಕ್​ ಕುಖ್ಯಾತಿ ಗಳಿಸಿದೆ. ತಮ್ಮ ದೇಶದಲ್ಲಿನ ಪರಿಸ್ಥಿತಿ ಹೀನಾಯವಾಗಿದ್ದರೂ ನೆರೆಯ ರಾಷ್ಟ್ರಗಳ ವಿರುದ್ಧ ಸಂಘರ್ಷಕ್ಕೆ ಹಪಹಪಿಸುವ ಪಾಕ್​, ಪಾಪಿಗಳ ಲೋಕ ಎಂದು ಹೇಳಿದರೆ ತಪ್ಪಾಗಲಾರದು. ಇಡೀ ವಿಶ್ವ ಪಾಕಿಸ್ತಾನವನ್ನು ಯಾವ ಸ್ಥಾನದಲ್ಲಿ ಇಟ್ಟಿದೆ ಅನ್ನೋದಕ್ಕೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠತ ಬಿಗ್​ ಬ್ಯಾಷ್​ ಲೀಗ್​ ಟೂರ್ನಿಯಲ್ಲಿ ನಡೆದ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಹೌದು, ಬಿಗ್ ಬ್ಯಾಷ್ ಲೀಗ್ (BBL) 2025-26ನೇ ಆವೃತ್ತಿಯಲ್ಲಿ ಪಾಕಿಸ್ತಾನದ ಸ್ಟಾರ್ ಆಟಗಾರರಾದ ಬಾಬರ್ ಅಜಾಮ್​, ಮೊಹಮ್ಮದ್ ರಿಝ್ವಾನ್ ಮತ್ತು ಶಾಹೀನ್ ಶಾ ಅಫ್ರಿದಿ ಅವರು ತುಂಬಾ ಮುಜುಗುರ ಮತ್ತು ಟೀಕೆಗಳನ್ನು ಎದುರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪಾಕ್​ ಆಟಗಾರರ ಹೀನಾಯ ಪ್ರದರ್ಶನಗಳ ಬಗ್ಗೆ ಭಾರಿ ವ್ಯಂಗ್ಯ ವ್ಯಕ್ತವಾಗುತ್ತಿದೆ. ಟೂರ್ನಿಯಲ್ಲಿ ಪಾಕ್​ ಆಟಗಾರರನ್ನು ನಡೆಸಿಕೊಂಡ ರೀತಿ, ಪಾಕ್ ಆಟಗಾರರಿಗೆ ಅವಮಾನ ಎಂಬ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಟೂರ್ನಿಯಲ್ಲಿ ಏನಾಯ್ತು ಅನ್ನೋದನ್ನು ನಾವೀಗ ಸಮಗ್ರವಾಗಿ ತಿಳಿದುಕೊಳ್ಳೋಣ.

ಬಾಬರ್​ ಅಜಾಮ್​ಗೆ ಅವಮಾನ

ಬಿಬಿಎಲ್​ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಆಡುತ್ತಿರುವ ಬಾಬರ್ ಅಜಾಮ್​, ಸಿಡ್ನಿ ಥಂಡರ್ ವಿರುದ್ಧ ನಡೆದ ಪಂದ್ಯದಲ್ಲಿ ತಮ್ಮದೇ ತಂಡದ ಸಹ ಆಟಗಾರ ಸ್ಟೀವ್ ಸ್ಮಿತ್ ಮೇಲೆ ಅಸಮಾಧಾನಗೊಂಡರು. ಬಾಬರ್ ಅವರು 47 ರನ್ ಗಳಿಸಿ ಆಡುತ್ತಿದ್ದಾಗ, ಸುಲಭವಾಗಿ ಓಡಬಹುದಾದ ರನ್ ತೆಗೆದುಕೊಳ್ಳಕಲು ಸ್ಮಿತ್ ನಿರಾಕರಿಸಿದರು. ಅರ್ಧ ಪಿಚ್‌ವರೆಗೆ ಓಡಿಬಂದಿದ್ದ ಬಾಬರ್​, ಮತ್ತೆ ವಾಪಸ್ ಹೋಗಬೇಕಾಯಿತು. ಸ್ಮಿತ್​ ಈ ರೀತಿ ಮಾಡಲು ಒಂದು ಕಾರಣವೂ ಇದೆ. ಅದೇನೆಂದರೆ, ಬಾಬರ್​ ಅವರು ನಿಧಾನಗತಿಯಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದರು. ಅವರಿಗೆ ಕ್ರಿಸ್​ ಬಿಟ್ಟುಕೊಟ್ಟರೆ ರನ್​ ಕಡಿಮೆಯಾಗಬಹುದು ಅನ್ನೋ ಕಾರಣಕ್ಕೆ ಸ್ಮಿತ್​ ತಾವೇ ಕ್ರೀಸ್​ ಉಳಿಸಿಕೊಂಡರು. ಈ ದೃಶ್ಯವನ್ನು ನೋಡಿ, ಕಾಮೆಂಟ್ರಿ ಬಾಕ್ಸ್‌ನಲ್ಲಿದ್ದ ಮಾರ್ಕ್ ವಾ, ಬಾಬರ್, ದಾರಿಯಿಂದ ಪಕ್ಕಕ್ಕೆ ಸರಿಯಾಗಿ ನಿಲ್ಲು ಎಂದು ಹಾಸ್ಯ ಮಾಡಿದರು. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಬಾಬರ್ ಔಟ್ ಆದಾಗ, ಸಿಟ್ಟಿನಿಂದ ಬೌಂಡರಿ ಲೈನ್‌ ಬಳಿ ಇದ್ದ ಕುಶನ್ ಅನ್ನು ಬ್ಯಾಟ್‌ನಿಂದ ಹೊಡೆದು ತಮ್ಮ ಅಸಮಾಧಾನ ಹೊರಹಾಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ಬಾಬರ್​ ವಿರುದ್ಧ ಟೀಕೆಗಳ ಸುರಿಮಳೆ ಹರಿದುಬರುತ್ತಿದೆ. ಇನ್ನು ಇದೇ ಪಂದ್ಯದಲ್ಲಿ ಸ್ಮಿತ್​ ಅವರು ಅಬ್ಬರದ ಆಟವಾಡಿದರು. ಬಾಬರ್​ ಸರಿಯಾಗಿ ಬ್ಯಾಟಿಂಗ್​ ಮಾಡಿದ್ದರೆ ಈ ಸನ್ನಿವೇಶ ಎದುರಾಗುತ್ತಿರಲಿಲ್ಲ.

ಮೊಹಮ್ಮದ್ ರಿಝ್ವಾನ್ 'ರಿಟೈರ್ಡ್ ಔಟ್'

ಇದೇ ಟೂರ್ನಿಯಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡುತ್ತಿರುವ ಮೊಹಮ್ಮದ್ ರಿಝ್ವಾನ್, ತಮ್ಮ ನಿಧಾನಗತಿಯ ಬ್ಯಾಟಿಂಗ್​ನಿಂದಾಗಿ ಮುಜುಗರ ಅನುಭವಿಸಬೇಕಾಯಿತು. ಟಿ20 ಮಾದರಿ ಪಂದ್ಯದಲ್ಲಿ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕಾರಣ, ತಂಡದ ಮ್ಯಾನೇಜ್‌ಮೆಂಟ್ ರಿಜ್ವಾನ್​ ಅವರನ್ನು ಅರ್ಧದಲ್ಲೇ ಮೈದಾನದಿಂದ ವಾಪಸ್ ಕರೆಸಿಕೊಂಡಿತು. ಒಬ್ಬ ಸ್ಟಾರ್ ಆಟಗಾರನನ್ನು ಪಂದ್ಯದ ಮಧ್ಯದಲ್ಲೇ ಹೊರಹಾಕಿದ್ದು ರಿಜ್ವಾನ್​ ಅವರಿಗೆ ದೊಡ್ಡ ಮುಜುಗುರ ತಂದಿತು. ಆದರೆ, ಟಿ20 ಅಂತಾ ಬಂದಾಗ ಅಲ್ಲಿ ಸ್ಫೋಟಕ ಬ್ಯಾಟಿಂಗ್​ಗೆ ಮೊದಲ ಆದ್ಯತೆ ಇರಬೇಕು. ಅದನ್ನು ಬಿಟ್ಟು ಟೆಸ್ಟ್​ ಅಥವಾ ಏಕದಿನ ಮಾದರಿಯಲ್ಲಿ ಬ್ಯಾಟ್​ ಬೀಸಬಾರದು. ಇದರಲ್ಲಿ ತಪ್ಪು ರಿಜ್ವಾನ್​ ಅವರದ್ದೇ ಎಂಬ ಅಭಿಪ್ರಾಯಗಳು ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.

ಶಾಹೀನ್ ಅಫ್ರಿದಿಗೂ ಅವಮಾನ

ಬ್ರಿಸ್ಬೇನ್ ಹೀಟ್ ಪರ ಪದಾರ್ಪಣೆ ಮಾಡಿದ ಶಾಹೀನ್ ಅಫ್ರಿದಿ ಅವರಿಗೂ ಆರಂಭದಲ್ಲೇ ಅವಮಾನವಾಯಿತು. ಪಂದ್ಯದ ವೇಳೆ ಒಂದೇ ಓವರ್‌ನಲ್ಲಿ ಎರಡು ಬಾರಿ 'ಬೀಮರ್' (ಸೊಂಟದ ಮೇಲಿನ ಎಸೆತ) ಎಸೆದ ಕಾರಣ, ಅಂಪೈರ್ ಅವರನ್ನು ಓವರ್ ಪೂರ್ಣಗೊಳಿಸಲು ಬಿಡದೆ ಬೌಲಿಂಗ್‌ನಿಂದ ತಡೆದರು. ಇಲ್ಲಿಯು ಶಾಹೀನ್​ ಅವರದ್ದೇ ತಪ್ಪು. ನಿಯಮಕ್ಕೆ ವಿರುದ್ಧವಾಗಿ ಬೌಲಿಂಗ್​​ ಮಾಡಿದರು. ವಿಶ್ವದ ಅಗ್ರಮಾನ್ಯ ಬೌಲರ್ ಒಬ್ಬರಿಗೆ ಓವರ್ ಮಧ್ಯದಲ್ಲೇ ಬೌಲಿಂಗ್ ನಿಲ್ಲಿಸುವಂತೆ ಹೇಳಿದ್ದು ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು. ಆದರೆ, ಪಾಕ್​ ಆಟಗಾರರು ತಾವು ತೆಗೆದುಕೊಂಡ ಹಣಕ್ಕೆ ನ್ಯಾಯ ಒದಗಿಸುವ ರೀತಿಯಲ್ಲಿ ಆಡಬೇಕು. ಅದನ್ನು ಬಿಟ್ಟು ಬೇಕಾಬಿಟ್ಟಿ ಆಡಿದರೆ, ಈ ರೀತಿಯ ಮುಜುಗರ ತಪ್ಪಿದ್ದಲ್ಲ.

ಕಳಪೆ ಫೀಲ್ಡಿಂಗ್

ಪಾಕ್ ಆಟಗಾರರು ಬಿಬಿಎಲ್​ನಲ್ಲಿ ಬೇಕಾಬಿಟ್ಟಿ ಆಡುತ್ತಿದ್ದಾರೆ ಎನ್ನುವುದಕ್ಕೆ ಹಸನ್ ಅಲಿ ಮತ್ತು ಹ್ಯಾರಿಸ್ ರೌಫ್ ಅವರ ಪ್ರದರ್ಶನವೂ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾದ ಕ್ರೀಡಾಭಿಮಾನಿಗಳು ಪಾಕ್​ ಆಟಗಾರರ ಫೀಲ್ಡಿಂಗ್ ಲೋಪಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್ ಮಾಡುತ್ತಿದ್ದಾರೆ. ಪಾಕ್​ ಆಟಗಾರರು ತಮ್ಮ ಆಟಕ್ಕೆ ನ್ಯಾಯ ಒದಗಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಇನ್ನು ಪಾಕಿಸ್ತಾನದ ಮಾಧ್ಯಮಗಳು ತಮ್ಮ ಆಟಗಾರರನ್ನು ಸಮರ್ಥಿಸಿಕೊಳ್ಳುತ್ತಿವೆ. ತಮ್ಮ ಆಟಗಾರರನ್ನು ಆಸ್ಟ್ರೇಲಿಯಾದಲ್ಲಿ ನಡೆಸಿಕೊಳ್ಳುತ್ತಿರುವ ರೀತಿಯನ್ನು ಟೀಕಿಸುತ್ತಿವೆ.
ಬಿಬಿಎಲ್​ನಲ್ಲಿ ಆಡಲು ಹರಾಜಿನ ಮೂಲಕ ಹಣ ಕೊಟ್ಟ ಆಟಗಾರರನ್ನು ಖರೀದಿ ಮಾಡಲಾಗಿರುತ್ತದೆ. ಆದರೆ, ತೆಗೆದುಕೊಂಡ ಹಣಕ್ಕೆ ನ್ಯಾಯವನ್ನು ದೊರಕಿಸಿಕೊಡುವ ರೀತಿಯಲ್ಲಿ ಆಟವಾಡಬೇಕು. ಅದನ್ನು ಬಿಟ್ಟು ನಿಧಾನಗತಿಯ ಬ್ಯಾಟಿಂಗ್​ ಮಾಡುವುದು ಮತ್ತು ಅತಿ ಕಳಪೆ ಫೀಲ್ಡಿಂಗ್​ ಮಾಡುವುದನ್ನು ಮಾಡಿದರೆ, ಇಂತಹ ಅವಮಾನಗಳು ಸಹಜ. ಆಟ ಎಂದ ಮೇಲೆ ಇದೆಲ್ಲ ಸಹಜ ತಾನೇ ಎನ್ನಬಹುದು. ಆದರೆ, ಪಾಕ್​ ವಿಶ್ವ ಭೂಪಟದಲ್ಲಿ ತನ್ನ ಗೌರವವನ್ನು ಯಾವ ಮಟ್ಟದಲ್ಲಿ ಕಾಪಾಡಿಕೊಂಡಿದೆ ಎನ್ನುವುದು ಕೂಡ ಆ ದೇಶದ ಆಟಗಾರರ ಗೌರವವನ್ನು ಪ್ರತಿಬಿಂಬಿಸುತ್ತದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net