ರೊಮ್ಯಾನ್ಸ್​ ಮಾಡಲ್ಲ ಎಂದಿದ್ದಕ್ಕೆ ಎಲ್ಲರ ಮುಂದೆಯೇ ಈ ಸ್ಟಾರ್​ ನಟ ಅವಮಾನಿಸಿದ! ತಮನ್ನಾ ಹೇಳಿಕೆ ವೈರಲ್​...Tamannaah Bhatia

ನಟಿ ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ
Published on

ಪ್ರಮುಖ ಮುಖ್ಯಾಂಶಗಳು

  • ಸಿನಿಮಾ ರಂಗದಲ್ಲಿ ಬರೋಬ್ಬರಿ 20 ವರ್ಷ ಪೂರೈಸಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ
  • ಹಿಂದಿ, ತೆಲುಗು, ತಮಿಳು ಮತ್ತು ಇತರ ಭಾಷೆಗಳಲ್ಲಿ ನಟಿಸಿ ಬಹುಭಾಷೆ ತಾರೆಯಾದ ತಮನ್ನಾ
  • ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡು ಸ್ಟಾರ್​ ನಟಿಯರಲ್ಲಿ ಒಬ್ಬರೆನೆಸಿಕೊಂಡಿದ್ದಾರೆ
  • ತಮನ್ನಾ ಅವರ ಸಿನಿಮಾ ಹಾದಿ ಅಷ್ಟು ಸುಲಭವಾಗಿರಲಿಲ್ಲ, ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ
ಮುಂಬೈ : ಚಿತ್ರರಂಗದಲ್ಲಿ ನಾಯಕಿಯರ ವೃತ್ತಿಜೀವನ ಬಹಳ ಅಲ್ಪಕಾಲಿಕ ಎಂಬುದು ಸಾರ್ವಕಾಲಿಕ ಸತ್ಯ. ಅದರಲ್ಲೂ ನಟಿಯರು ಮದುವೆಯಾದರೆ ಸಾಕು ಅವರ ಸಿನಿ ಪ್ರಯಾಣ ಅಲ್ಲಿಗೆ ಮುಗಿದಂತೆ. ಆದರೆ, ಕೆಲವೇ ಕೆಲವು ನಟಿಯರು ಮಾತ್ರ ಸುದೀರ್ಘ ವೃತ್ತಿಜೀವನದ ಅನುಭವ ಪಡೆಯುತ್ತಾರೆ. ಆ ಸಾಲಿಗೆ ನಟಿ ತಮನ್ನಾ ಭಾಟಿಯಾ ( Tamannaah Bhatia ​) ಕೂಡ ಸೇರಿಕೊಳ್ಳುತ್ತಾರೆ.
ಸಿನಿಮಾ ರಂಗದಲ್ಲಿ ಬರೋಬ್ಬರಿ 20 ವರ್ಷ ಪೂರೈಸಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ, ಇಂದಿಗೂ ಸ್ಟಾರ್​ ನಟಿಯರಲ್ಲಿ ಒಬ್ಬರೆನೆಸಿಕೊಂಡಿದ್ದಾರೆ. ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿರುವ ತಮನ್ನಾ, ಹಿಂದಿ, ತೆಲುಗು, ತಮಿಳು ಮತ್ತು ಇತರ ಭಾಷೆಗಳಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದು, ಬಹುಭಾಷಾ ನಾಯಕಿ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಚಿತ್ರದಲ್ಲಿ ನಟನೆ ಮಾಡದಿದ್ದರೂ ನಿಖಿಲ್​ ಕುಮಾರಸ್ವಾಮಿ ನಟನೆಯ ಮೊದಲ ಸಿನಿಮಾ ಜಾಗ್ವಾರ್​ ಮತ್ತು ಯಶ್​ ನಟನೆಯ ಕೆಜಿಎಫ್​ 1 ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಅಂದಹಾಗೆ, ತಮನ್ನಾ ಅವರ ಸಿನಿಮಾ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಇಂದು ಯಶಸ್ಸಿನ ಉತ್ತುಂಗದಲ್ಲಿರುವ ತಮನ್ನಾ, ತಮ್ಮ ಜೀವನದಲ್ಲಿ ಕೆಲವೊಂದು ಕಹಿ ಕ್ಷಣಗಳನ್ನು ಸಹ ಅನುಭವಿಸಿದ್ದಾರೆ. ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಭಾಗಿಯಾದ ತಮನ್ನಾ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಅವಮಾನದ ಬಗ್ಗೆ ಮಾತನಾಡುತ್ತಾ ಭಾವುಕರಾದರು.
ವೃತ್ತಿ ಜೀವನದ ಆರಂಭದಲ್ಲಿ ಓರ್ವ ಸ್ಟಾರ್ ಹೀರೋ ಎಲ್ಲರ ಮುಂದೆಯೇ ತನ್ನನ್ನು ಹೇಗೆ ಅವಮಾನಿಸಿದ ಎಂಬುದನ್ನು ತಮನ್ನಾ ವಿವರಿಸಿದ್ದಾರೆ. ನನ್ನ ವೃತ್ತಿಜೀವನದ ಆರಂಭದಲ್ಲಿ ನಾನು ಒಬ್ಬ ಸ್ಟಾರ್ ಹೀರೋ ಜೊತೆ ಸಿನಿಮಾ ಮಾಡಿದ್ದೆ. ಆ ದಿನ, ನಾನು ಒಂದು ಪ್ರಣಯ ದೃಶ್ಯದಲ್ಲಿ ನಟಿಸಬೇಕಾಗಿತ್ತು. ಆದರೆ, ಅದು ತುಂಬಾ ಬೋಲ್ಡ್​ ಸೀನ್​ ಆಗಿದ್ದರಿಂದ ನಾನು ಆಗುವುದಿಲ್ಲ ಎಂದು ಹೇಳಿದೆ. ನನಗೆ ಆ ರೊಮ್ಯಾಂಟಿಕ್​ ಸೀನ್​ ಆರಾಮದಾಯಕವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ ಎಂದರು.
ಮಾತು ಮುಂದುವರಿಸಿದ ತಮನ್ನಾ, ನಾನು ಆ ದೃಶ್ಯಕ್ಕೆ ನೋ ಎಂದಿದ್ದಕ್ಕೆ ಆ ನಾಯಕ ಎಲ್ಲರ ಮುಂದೆಯೇ ನನ್ನ ಮೇಲೆ ಕೂಗಾಡಿದನು. ನಾಯಕಿಯನ್ನು ಬದಲಾಯಿಸಬೇಕೆಂದು ಒತ್ತಾಯಿಸಿದನು. ಎಲ್ಲರ ಮುಂದೆಯೇ ಆ ರೀತಿ ಹೇಳಿದಾಗ ನನಗದು ತುಂಬಾ ಅವಮಾನಕರವೆನಿಸಿತು. ಮರುದಿನ, ನಾಯಕನೇ ನನ್ನ ಬಳಿಗೆ ಬಂದು ಕ್ಷಮೆಯಾಚಿಸಿದನು ಎಂದು ತಮನ್ನಾ ಹೇಳಿದರು.
ಆದರೆ, ತಮ್ಮನ್ನು ಅವಮಾನಿಸಿದ ನಾಯಕ ಯಾರು? ಮತ್ತು ಯಾವ ಸಿನಿ ಉದ್ಯಮಕ್ಕೆ ಸೇರಿದವನು ಎಂಬ ಮಾಹಿತಿಯನ್ನು ಮಾತ್ರ ತಮನ್ನಾ ಬಹಿರಂಗಪಡಿಸಲಿಲ್ಲ. ಸದ್ಯ ತಮನ್ನಾ ಮಾಡಿದ ಕಾಮೆಂಟ್‌ಗಳು ವೈರಲ್ ಆಗುತ್ತಿವೆ. ಇದರ ನಡುವೆ ಆ ನಾಯಕ ಯಾರಿರಬಹುದು ಎಂದು ನೆಟ್ಟಿಗರು ಹುಡುಕಾಡ ಪ್ರಾರಂಭಿಸಿದ್ದಾರೆ.
ಇನ್ನೂ ಸಿನಿಮಾ ವಿಷಯಕ್ಕೆ ಬಂದರೆ, ತಮನ್ನಾ ಅವರು ಪ್ರಸ್ತುತ ಬಾಲಿವುಡ್ ಹೀರೋ ಶಾಹಿದ್ ಕಪೂರ್ ಜೊತೆ ರೋಮಿಯೋ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ಬಹುತೇಕ ಪೂರ್ಣಗೊಂಡಿರುವ ಈ ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net