ಐಪಿಎಲ್ ಒಂದು ಪಂದ್ಯಕ್ಕೆ​ ಚಿಯರ್​ ಲೀಡರ್ಸ್​ಗೆ ಸಿಗೋ ಸಂಭಾವನೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! | IPL Cheer Leaders

ಐಪಿಎಲ್​ ಚಿಯರ್​ಲೀಡರ್ಸ್​
ಐಪಿಎಲ್​ ಚಿಯರ್​ಲೀಡರ್ಸ್​
Published on

ಪ್ರಮುಖ ಮುಖ್ಯಾಂಶಗಳು

  • ಮಾ.28ರಿಂದ ಐಪಿಎಲ್​ 19ನೇ ಆವೃತ್ತಿ ಆರಂಭ
  • ತಮ್ಮ ತಂಡವನ್ನು ಹುರಿದುಂಬಿಸುವ ಚಿಯರ್​ಲೀಡರ್​ಗಳಿಗೆ ಒಂದು ಪಂದ್ಯಕ್ಕೆ ಸಿಗುವ ಹಣವೆಷ್ಟು?
  • ಯಾವ ತಂಡಗಳು ಎಷ್ಟೆಷ್ಟು ಸಂಭಾವನೆ ನೀಡುತ್ತೆ? ಇಲ್ಲಿದೆ ನೋಡಿ ವರದಿ
IPL Cheer Leaders: ಇಂಡಿಯನ್ ಪ್ರೀಮಿಯರ್​ ಲೀಗ್​ ಆರಂಭಕ್ಕೆ ಈಗಾಗಲೇ ದಿನಗಣನೆ ಆರಂಭಗೊಂಡಿದ್ದು, 10 ತಂಡಗಳು ಸದ್ಯ ಮೈದಾನದಲ್ಲಿ ಭರ್ಜರಿ ತಯಾರಿ ನಡೆಸುತ್ತಿವೆ. ಮಾ.28ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್ ಹೈದರಾಬಾದ್ ನಡುವೆ ಶುಭಾರಂಭ ಪಂದ್ಯ ನಡೆಯಲಿದೆ. ಐಪಿಎಲ್​ ಸೀಸನ್ ಶುರು​ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಗಳು ನೆಟ್ಟಿಗರ ಕುತೂಹಲ ಕೆರಳಸುತ್ತಿವೆ.
​ಐಪಿಎಲ್​ ಆಡಲಿರುವ ದೇಶಿಯ ಹಾಗೂ ವಿದೇಶಿ ಆಟಗಾರರ ಸಂಭಾವನೆ ತಿಳಿಯುವ ಕ್ರಿಕೆಟ್​ ಪ್ರಿಯರು, ಅದೇ ಟೂರ್ನಮೆಂಟ್‌ನಲ್ಲಿ ತಮ್ಮ ನೆಚ್ಚಿನ ತಂಡದ ಆಟಗಾರರು ಮತ್ತು ಅಭಿಮಾನಿಗಳನ್ನು ಹುರಿದುಂಬಿಸುವ ಚಿಯರ್‌ಲೀಡರ್‌ಗಳ ಸಂಭಾವನೆ ಬಗ್ಗೆ ಕೇಳಿ ಒಂದು ನಿಮಿಷ ಅಚ್ಚರಿಗೊಂಡಿದ್ದಾರೆ. ಫೀಲ್ಡ್​ ಅಂಪೈರ್‌ಗಳಿಗಿಂತ ಕಡಿಮೆ ಪೇಮೆಂಟ್​ ಪಡೆಯುವ ಚಿಯರ್‌ಲೀಡರ್‌ಗಳು ಪ್ರತಿ ಪಂದ್ಯಕ್ಕೆ ಒಳ್ಳೆಯ ಆದಾಯವನ್ನೇ ಗಳಿಸುತ್ತಿದ್ದಾರೆ. ಅಷ್ಟಕ್ಕೂ, ಯಾವ ಫ್ರಾಂಚೈಸಿಗಳು ಎಷ್ಟೆಷ್ಟು ಹಣ ನೀಡಲಿದೆ ಎಂಬುದರ ವಿವರ ಹೀಗಿದೆ ನೋಡಿ.

ಈ ತಂಡವೇ ಹೆಚ್ಚು ಹಣ ನೀಡೋದು

ಐಪಿಎಲ್ ಚಿಯರ್‌ಲೀಡರ್‌ಗಳಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್‌ನಲ್ಲಿ ಉತ್ತಮ ಸಂಭಾವನೆಯನ್ನೇ ನೀಡಲಾಗುತ್ತಿದೆ. ಪ್ರತಿ ಪಂದ್ಯಕ್ಕೆ ಒಬ್ಬರು 15,000ದಿಂದ 25,000 ರೂ. ವರೆಗೆ ಪಡೆಯುತ್ತಾರೆ. ಆದಾಗ್ಯೂ, ಐಪಿಎಲ್‌ನ ಹತ್ತು ತಂಡಗಳು ಭಿನ್ನ ಸಂಬಳವನ್ನು ನೀಡುತ್ತಿರುವುದು ಗಮನಾರ್ಹ. ವರದಿಗಳ ಪ್ರಕಾರ, 2026ರ ಐಪಿಎಲ್​ನಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವು ತಮ್ಮ ಚಿಯರ್‌ಲೀಡರ್‌ಗಳಿಗೆ ಅತಿ ಹೆಚ್ಚು ಹಣ ನೀಡುತ್ತಿದೆ ಎನ್ನಲಾಗಿದೆ.
ಕೆಕೆಆರ್ ಪ್ರತಿ ಪಂದ್ಯಕ್ಕೆ 25,000 ರೂ. ವೇತನ ನೀಡುತ್ತಿದೆ. ಇನ್ನು ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 20,000-22,000 ರೂ.ಗಳವರೆಗೆ ನೀಡಲಿವೆ ಎಂದು ವರದಿಗಳು ತಿಳಿಸಿವೆ. ಅದೇ ರೀತಿ, ರಾಜಸ್ಥಾನ ರಾಯಲ್ಸ್ ತಂಡವು 16 ಸಾವಿರ ರೂ.ನಿಂದ 20,000 ರೂ. ವೇತನ ನೀಡಲಿದೆ. ಚೆನ್ನೈ ಸೂಪರ್ ಕಿಂಗ್ಸ್, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್‌ ತಂಡಗಳು ಕೇವಲ 14,000 ರೂ. ನೀಡುತ್ತಿವೆ ಎಂದು ಹೇಳಲಾಗಿದೆ.

ಇಷ್ಟೇ ಅಲ್ಲ...

ಟೂರ್ನಿಯಲ್ಲಿ ತಮ್ಮ ತಂಡವು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದಾಗ ಮಾತ್ರ ಎದ್ದು ಕುಣಿಯುವ ಚಿಯರ್‌ಲೀಡರ್‌ಗಳು, ತಮಗೆ ನೀಡುವ ಸಂಬಳದ ಜೊತೆಗೆ ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ. ಐಪಿಎಲ್ ತಂಡಗಳ ಮಾಲೀಕರು ಐಷಾರಾಮಿ ಹೋಟೆಲ್‌ಗಳಲ್ಲಿ ವಸತಿ ಮತ್ತು ಆಟಗಾರರಿಗೆ ಸಿಗುವ ಉತ್ತಮ ಗುಣಮಟ್ಟದ ಆಹಾರವನ್ನೇ ನೀಡುವುದು ವಿಶೇಷ. ಇದಲ್ಲದೆ, ಆಯಾ ಪಂದ್ಯ ನಡೆಯುವ ಸ್ಟೇಡಿಯಂಗೆ ಹೋಗಲು ವಿಮಾನದ ಟಿಕೆಟ್​ ಖರ್ಚು ಮತ್ತು ಇತರ ವೆಚ್ಚಗಳನ್ನು ಫ್ರಾಂಚೈಸಿಗಳೇ ಭರಿಸುತ್ತವೆ.

ಫೈನಲ್​ ತಲುಪಿದರೆ...

ವರದಿಗಳ ಪ್ರಕಾರ, ಐಪಿಎಲ್‌ನಲ್ಲಿ ಚಿಯರ್‌ಲೀಡರ್‌ಗಳು ಪ್ರತಿ ಸೀಸನ್‌ಗೆ 2ರಿಂದ 4 ಲಕ್ಷ ರೂ.ಗಳವರೆಗೆ ಆದಾಯ ಗಳಿಸುತ್ತಾರೆ. ಅದು 14 ಲೀಗ್ ಪಂದ್ಯಗಳಲ್ಲಿ ಪ್ರದರ್ಶನ ನೀಡಿದರೆ, ಗರಿಷ್ಠ 3.5 ಲಕ್ಷ ರೂ. ಪಡೆಯಬಹುದು. ಅದೇ ತಮ್ಮ ತಂಡವು ಫೈನಲ್‌ಗೆ ತಲುಪಿದರೆ, 16 ರಿಂದ 17 ಪಂದ್ಯಗಳ ಆಧಾರದ ಮೇರೆಗೆ 4 ಲಕ್ಷ ರೂ.ವರೆಗೆ ಹೆಚ್ಚಿನ ಸಂಭಾವನೆಯನ್ನು ನೋಡುತ್ತಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net