12, 22... ಖಂಡಿತ ಮಿಸ್​! ಆರ್​ಸಿಬಿಯ ಮೊದಲೆರೆಡು ಪಂದ್ಯಗಳಿಗೆ ಇರೋದಿಲ್ಲ ಈ ಸ್ಟಾರ್​ ಆಟಗಾರ

ಆರ್​ಸಿಬಿ ತಂಡದ ಸ್ಟಾರ್​ ಆಟಗಾರ ಅಲಭ್ಯ
ಆರ್​ಸಿಬಿ ತಂಡದ ಸ್ಟಾರ್​ ಆಟಗಾರ ಅಲಭ್ಯ
Published on

ಪ್ರಮುಖ ಮುಖ್ಯಾಂಶಗಳು

  • ಇದೇ ಮಾ.28ರಿಂದ ಐಪಿಎಲ್​ 19ನೇ ಆವೃತ್ತಿ ಶುರು
  • ಕಳೆದ ವರ್ಷ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟ ಆರ್​ಸಿಬಿ
  • ಈ ವರ್ಷವು ಟ್ರೋಫಿ ಎತ್ತಿಹಿಡಿಯಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪಡೆ ಸಜ್ಜು
  • ಮೊದಲೆರೆಡು ಪಂದ್ಯಗಳಿಂದ ಸ್ಟಾರ್​ ಆಟಗಾರ ಔಟ್​
RCB: ಐಪಿಎಲ್​ 18ನೇ ಆವೃತ್ತಿಯಲ್ಲಿ ತನ್ನ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ, ದಾಖಲೆಗಳ ಸರದಾರ, ರನ್​ ಮಷಿನ್ ವಿರಾಟ್ ಕೊಹ್ಲಿ ಕೈಯಿಂದಲೇ ತಮ್ಮ ದೊಡ್ಡ ಅಭಿಮಾನಿ ಬಳಗಕ್ಕೆ ಕಪ್​ ಅರ್ಪಿಸಿತು. ಈಗ 19ನೇ ಆವೃತ್ತಿಗೆ ಮೈದಾನದಲ್ಲಿ ಭರ್ಜರಿ ತಯಾರಿ ನಡೆಸುತ್ತಿರುವ ತಂಡಕ್ಕೆ ಸ್ಟಾರ್ ಆಟಗಾರನ ಅಲಭ್ಯತೆ ಕಾಡಲಿದೆ.
ಕಳೆದ ಸೀಸನ್​ನಲ್ಲಿ ತಂಡದ ಪರ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿ, ಅತ್ಯಧಿಕ ವಿಕೆಟ್​ಗಳನ್ನು ಪಡೆದು ಮಿಂಚಿದ ಸ್ಟಾರ್ ವೇಗಿ ಜೋಶ್ ಹೇಜಲ್‌ವುಡ್, ಇಂಜುರಿಯಿಂದ ಇನ್ನೂ ಸಂಪೂರ್ಣವಾಗಿ ಗುಣಮುಖ ಆಗಿಲ್ಲ ಎಂದು ವರದಿಯಾಗಿದೆ. 18ನೇ ಆವೃತ್ತಿಯಲ್ಲಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಜೋಶ್, ಆಡಿದ 12 ಪಂದ್ಯಗಳಲ್ಲಿ 22 ವಿಕೆಟ್‌ಗಳನ್ನು ಕಬಳಿಸಿ, ಫ್ರಾಂಚೈಸಿ ಚೊಚ್ಚಲ ಟ್ರೋಫಿ ಗೆಲ್ಲಲು ದೊಡ್ಡ ಮಟ್ಟದ ಕೊಡುಗೆ ನೀಡಿದರು. ಅಂತೆಯೇ, ಈ ಸೀಸನ್​ನಲ್ಲಿಯೂ ಅವರಿಂದ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದ ತಂಡಕ್ಕೆ ಅವರ ಅನುಪಸ್ಥಿತಿ ಎದುರಾಗಿದೆ.
ಕ್ರಿಕ್‌ಬಜ್ ವರದಿ ಪ್ರಕಾರ, 2026ರ ಐಪಿಎಲ್​ನ ಆರಂಭಿಕ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಏಪ್ರಿಲ್ 5ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಗಳನ್ನು ಹೇಜಲ್‌ವುಡ್ ಆಡುವುದಿಲ್ಲ ಎನ್ನಲಾಗಿದೆ. ಇದು ಕೇವಲ ಎರಡು ಪಂದ್ಯಕ್ಕೆ ಮಾತ್ರವೇ ಅಥವಾ ಇನ್ನೂ ಹೆಚ್ಚು ಸಮಯದ ಅಗತ್ಯವಿದೆಯೇ ಎಂಬ ಪ್ರಶ್ನೆಗಳು ಕೇಳಿಬಂದಿವೆ.
ಕಳೆದ ವರ್ಷ ನವೆಂಬರ್​ನಿಂದ ಇಂಜುರಿಯ ಕಾರಣ, ಮೈದಾನಕ್ಕಿಳಿಯದ ಜೋಶ್​, ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಪರ ಆಡಲಿಲ್ಲ. ಇನ್ನು ಆ್ಯಶಸ್ ಸರಣಿಯಲ್ಲಿ ಗಾಯಗೊಂಡ ನಾಯಕ ಪ್ಯಾಟ್​ ಕಮ್ಮಿನ್ಸ್ ಕೂಡ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಲಿಲ್ಲ. ಸದ್ಯದ ಮಟ್ಟಿಗೆ ಫುಲ್​ ಫಿಟ್​ ಆಗುವವರೆಗೆ ಪ್ಯಾಟ್​ ಹಾಗೂ ಜೋಶ್​ ಇಬ್ಬರೂ ತಮ್ಮ ತಮ್ಮ ತಂಡಗಳಾದ ಆರ್​ಸಿಬಿ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಪರ ಒಂದಷ್ಟು ಪಂದ್ಯಗಳನ್ನು ಆಡುವುದು ಬಹುತೇಕ ಡೌಟ್​ ಎನ್ನಲಾಗಿದೆ,(ಏಜೆನ್ಸೀಸ್),
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net