ಸಚಿನ್, ಕೊಹ್ಲಿ ಕೈಲಾಗದ ದಾಖಲೆ ಬರೆದ ಹರ್ಮನ್‌ಪ್ರೀತ್: ಲಾರ್ಡ್ಸ್ ಮೈದಾನದಲ್ಲಿ 'ಕೌರ್' ಐತಿಹಾಸಿಕ ಸಾಧನೆ! Harmanpreet Kaur

ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಐತಿಹಾಸಿಕ ದಾಖಲೆ
ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಐತಿಹಾಸಿಕ ದಾಖಲೆ
Published on

ಪ್ರಮುಖ ಮುಖ್ಯಾಂಶಗಳು

  • ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ
  • ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಐತಿಹಾಸಿಕ ದಾಖಲೆ
  • ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರಿಗೂ ಸಾಧ್ಯವಾಗದ ಅಪರೂಪದ ಸಾಧನೆ ಮಾಡಿದ ಕೌರ್
ಇಂಗ್ಲೆಂಡ್​: ಒಂದು ಕಡೆ ಭಾರತದ ಪುರುಷರ ಕ್ರಿಕೆಟ್​ ತಂಡ ಸತತ ಸೋಲಿನಿಂದ ಕಂಗೆಟ್ಟಿದ್ದರೆ, ಇನ್ನೊಂದು ಕಡೆ ವನಿತೆಯರ ತಂಡ, ಆಂಗ್ಲ ಮಹಿಳೆಯರ ಮೇಲೆ ಆಕರ್ಶಕ ಆಟವಾಡುತ್ತಿದ್ದಾರೆ.

ನೂತನ ದಾಖಲೆ ಬರೆದ ಹರ್ಮನ್‌ಪ್ರೀತ್!

ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯಾವಳಿಯಲ್ಲಿ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur)​, ಅರ್ಧ ಶತಕವನ್ನು ಸಿಡಿಸುವ ಮೂಲಕ, ತಂಡದ ನಾಯಕಿಯಾಗಿ ಟಿ-20, ಏಕದಿನ ಹಾಗೂ ಟೆಸ್ಟ್ ಮೂರು ಆಯಾಮದ ಪಂದ್ಯಾವಳಿಯಲ್ಲಿ ಅರ್ಧಶತಕ ಗಳಿಸಿದ ಭಾರತದ ಪ್ರಥಮ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಮಾಡಿರುವ ದಾಖಲೆಯನ್ನು ಸಚಿನ್​ ತೆಂಡೂಲ್ಕರ್​, ವಿರಾಟ್​ ಕೊಹ್ಲಿ, ಮಿಥಾಲಿ ರಾಜ್​ ಮೊದಲಾದ ದಿಗ್ಗಜ ಆಟಗಾರರು ಮಾಡಲು ಸಾಧ್ಯವಾಗದ ದಾಖಲೆಯನ್ನು ಹರ್ಮನ್‌ಪ್ರೀತ್ ಕೌರ್​ ಮಾಡಿದ್ದಾರೆ.
ಇಂಡಿಯಾ v/s ಇಂಗ್ಲೆಂಡ್​!
ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಬ್ಯಾಟಿಂಗ್​ ಆರಂಭಿಸಿದ ಭಾರತದ ವನಿತೆಯರ ತಂಡವು 101 ರನ್​ಗಳಿಗೆ 3 ವಿಕೆಟ್​ಗಳನ್ನು ಕಳೆದುಕೊಂಡಾಗ ನಾಯಕಿ ಹರ್ಮನ್‌ಪ್ರೀತ್ ಕೌರ್​ ಮೈದಾನ ಪ್ರವೇಶಿಸಿದರು.
ನಂತರ ಸ್ಮೃತಿ ಮಂಧಾನ ಜೊತೆ ಕೂಡಿ ಇವರಿಬ್ಬರು 83 ರನ್​ಗಳ ಜೊತೆಯಾಟ ಮೂಡಿಬಂದಿತು. ಹರ್ಮನ್‌ಪ್ರೀತ್ ಜೊತೆಗೆ ಸ್ಮೃತಿ ಮಂಧಾನ ಹಾಗೂ ದಿಪ್ತಿ ಶರ್ಮಾ ಅರ್ಧ ಶತಕವನ್ನು ಸಿಡಿಸುವ ಮೂಲಕ ತಂಡದ ಮೊತ್ತ 285 ರನ್​ ತಲುಪಿತು. 89 ರನ್​ ಗಳಿಸಿದ್ದ ಸ್ಮೃತಿ ಮಂಧಾನ ಶತಕ ವಂಚಿತರಾದರೆ, 58 ರನ್​ ಗಳಿಸಿ ಹರ್ಮನ್‌ಪ್ರೀತ್ ನೂತನ ದಾಖಲೆ ಬರೆದರು. ಎರಡನೇ ಇಂನಿಗ್ಸ್​ ಆರಂಭಿಸಿರುವ ಇಂಗ್ಲೆಂಡ್​​ ಸದ್ಯ 67 ರನ್​ಗಳಿಗೆ 4 ವಿಕೆಟ್​ಗಳನ್ನು ಕಳೆದುಕೊಂಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net