ಮಹಿಕಾ ಜತೆಗಿನ ಪ್ರೀತಿಯ ಮಧ್ಯೆಯೂ ಮಾಜಿ ಪತ್ನಿ, ಪುತ್ರನನ್ನು ಮರೆಯದ ಹಾರ್ದಿಕ್​: ದುಬಾರಿ ಗಿಫ್ಟ್​ ಕೊಟ್ಟ ಪಾಂಡ್ಯ! Hardik Pandya

ಮಹಿಕಾ ಜತೆಗಿನ ಪ್ರೀತಿಯ ಮಧ್ಯೆಯೂ ಮಾಜಿ ಪತ್ನಿ, ಪುತ್ರನನ್ನು ಮರೆಯದ ಹಾರ್ದಿಕ್ ಪಾಂಡ್ಯ! Hardik Pandya
ಮಹಿಕಾ ಜತೆಗಿನ ಪ್ರೀತಿಯ ಮಧ್ಯೆಯೂ ಮಾಜಿ ಪತ್ನಿ, ಪುತ್ರನನ್ನು ಮರೆಯದ ಹಾರ್ದಿಕ್ ಪಾಂಡ್ಯ! Hardik Pandya
Published on

ಪ್ರಮುಖ ಮುಖ್ಯಾಂಶಗಳು

  • ಹಾರ್ದಿಕ್​ ಕೇವಲ ತಮ್ಮ ಆಟದಿಂದ ಮಾತ್ರವಲ್ಲದೆ, ಡೇಟಿಂಗ್​ ವಿಚಾರದಲ್ಲೂ ಸದ್ದು ಮಾಡುತ್ತಿದ್ದಾರೆ
  • ಪ್ರಸ್ತುತ ಮಾಡೆಲ್​ ಮಹಿಕಾ ಶರ್ಮಾ ಅವರನ್ನು ಹಾರ್ದಿಕ್​ ಪ್ರೀತಿಸುತ್ತಿದ್ದಾರೆ
  • ಇದರ ನಡುವೆ ತಮ್ಮ ಮಾಜಿ ಪ್ರೇಯಸಿ ನತಾಶಾ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ ಪಾಂಡ್ಯ
Hardik Pandya : ಟೀಮ್ ಇಂಡಿಯಾದ ಆಲ್‌ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ಹಾರ್ದಿಕ್​ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ತಮ್ಮ ಬ್ಯಾಟಿಂಗ್​, ಬೌಲಿಂಗ್​ ಹಾಗೂ ಫೀಲ್ಡಿಂಗ್​ ಮೂರರಲ್ಲೂ ಮಿಂಚುತ್ತಿದ್ದಾರೆ.
ಅಂದಹಾಗೆ, ಹಾರ್ದಿಕ್​ ಕೇವಲ ತಮ್ಮ ಆಟದಿಂದ ಮಾತ್ರವಲ್ಲದೆ, ಡೇಟಿಂಗ್​ ವಿಚಾರದಲ್ಲೂ ಸದ್ದು ಮಾಡುತ್ತಿದ್ದಾರೆ. ಪ್ರಸ್ತುತ ಮಾಡೆಲ್​ ಮಹಿಕಾ ಶರ್ಮಾ ಅವರನ್ನು ಹಾರ್ದಿಕ್​ ಪ್ರೀತಿಸುತ್ತಿದ್ದಾರೆ. ಇಬ್ಬರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಈಗಾಗಲೇ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವರದಿಗಳಿವೆ. ಇದರ ನಡುವೆ, ಹಾರ್ದಿಕ್​ ತಮ್ಮ ಮಾಜಿ ಪ್ರೇಯಸಿ ನತಾಶಾ ಸ್ಟಾಂಕೋವಿಕ್​ ವಿಚಾರವಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.
ಹೌದು, ಹಾರ್ದಿಕ್ ಪಾಂಡ್ಯ ಅವರು ತಮ್ಮ ಮಾಜಿ ಪತ್ನಿ ನತಾಶಾ ಮತ್ತು ಪುತ್ರ ಅಗಸ್ತ್ಯ ಪಾಂಡ್ಯಗಾಗಿ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ತನ್ನ ಪುತ್ರನಿಗೆ ನಾಲ್ಕು ಕೋಟಿ ರೂ. ಬೆಲೆ ಬಾಳುವ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ. ಅಲ್ಲದೆ, ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್​ ಆಗಿದೆ.
ಹಾರ್ದಿಕ್ ಮತ್ತು ನತಾಶಾ ವಿಚ್ಛೇದನ ಪಡೆದಿರುವುದು ಎಲ್ಲರಿಗು ತಿಳಿದೇ ಇದೆ. ಸುಮಾರು ನಾಲ್ಕು ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ಈ ದಂಪತಿ ಎರಡು ವರ್ಷಗಳ ಹಿಂದೆ ಬೇರೆಯಾದರು. ಕಳೆದ ಐಪಿಎಲ್ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಅಧಿಕೃತವಾಗಿ ವಿಚ್ಛೇದನ ಪಡೆದರು. ಆದಾಗ್ಯೂ, ದಂಪತಿಗೆ ಈಗಾಗಲೇ ಅಗಸ್ತ್ಯ ಪಾಂಡ್ಯ ಹೆಸರಿನ ಮಗನಿದ್ದಾನೆ. ನತಾಶಾಗೆ ವಿಚ್ಛೇದನ ನೀಡಿದ ಹಾರ್ದಿಕ್, ಪ್ರಸ್ತುತ ಮಹಿಕಾ ಶರ್ಮಾ ಅವರನ್ನು ಪ್ರೀತಿಸುತ್ತಿದ್ದಾರೆ. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ.
ಹಾರ್ದಿಕ್​ ಪಾಂಡ್ಯಾಗೆ ತನ್ನ ಮಗ ಅಗಸ್ತ್ಯನನ್ನು ಕಂಡರೆ ತುಂಬಾ ಪ್ರೀತಿ. ಹೀಗಾಗಿ ತಮ್ಮ ಪುತ್ರನಿಗೆ ದುಬಾರಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಾರನ್ನು ಉಡುಗೊರೆಯಾಗಿ ಪಡೆಯುವಾಗ ನತಾಶಾ ಕೂಡ ಪುತ್ರನೊಂದಿಗೆ ಇದ್ದರು. ಈ ಮೂಲಕ ತಮ್ಮ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಮಗನಿಗೆ ಪೋಷಕರ ವಿಚಾರದಲ್ಲಿ ಯಾವುದೇ ಕೊರತೆಯಾದಂತೆ ಹಾರ್ದಿಕ್​ ಮತ್ತು ನತಾಶಾ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಪಾಲಕರ ಜವಾಬ್ದಾರಿ ಏನೆಂಬುದನ್ನು ಇಬ್ಬರು ಚೆನ್ನಾಗಿ ಅರಿತಿದ್ದು, ಡಿವೋರ್ಸ್​ ತಮ್ಮ ಮಗನ ಮೇಲೆ ಪರಿಣಾಮ ಬೀರದಂತೆ ಉತ್ತಮ ನಡೆ ಅನುಸರಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net