ಹಾರ್ದಿಕ್​- ಕೃಣಾಲ್ ​ನಡುವೆ ಬಿರುಕು... RCB ಟ್ರೋಫಿ​ ಜಯಿಸಿದ ಬೆನ್ನಲ್ಲೇ ಬಯಲಾಯ್ತು ಸಹೋದರರ ಮುನಿಸು! Hardik Pandya vs Krunal Pandya

ಹಾರ್ದಿಕ್​- ಕೃಣಾಲ್ ​ನಡುವೆ ಬಿರುಕು... RCB ಟ್ರೋಫಿ​ ಜಯಿಸಿದ ಬೆನ್ನಲ್ಲೇ ಬಯಲಾಯ್ತು ಸಹೋದರರ ಮುನಿಸು! Hardik Pandya vs Krunal Pandya
ಹಾರ್ದಿಕ್​- ಕೃಣಾಲ್ ​ನಡುವೆ ಬಿರುಕು... RCB ಟ್ರೋಫಿ​ ಜಯಿಸಿದ ಬೆನ್ನಲ್ಲೇ ಬಯಲಾಯ್ತು ಸಹೋದರರ ಮುನಿಸು! Hardik Pandya vs Krunal Pandya
Published on

ಪ್ರಮುಖ ಮುಖ್ಯಾಂಶಗಳು

  • ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಸತತ 2ನೇ ಬಾರಿ ಐಪಿಎಲ್​ ಟ್ರೋಫಿ ಗೆದ್ದ ಆರ್​ಸಿಬಿ
  • ಕ್ರಿಕೆಟ್ ಪ್ರೇಮಿಗಳು, ಮಾಜಿ ಆಟಗಾರರು ಹಾಗೂ ಸೆಲೆಬ್ರಿಟಿಗಳಿಂದ ಆರ್​ಸಿಬಿ ತಂಡಕ್ಕೆ ಅಭಿನಂದನೆಗಳ ಮಹಾಪೂರ
  • ಭರ್ಜರಿ ಸಂಭ್ರಮಾಚರಣೆಯ ಮಧ್ಯೆ ಜಾಲತಾಣದಲ್ಲಿ ಮತ್ತೊಂದು ರೋಚಕ ವಿಷಯ ಭಾರಿ ಚರ್ಚೆಯಾಗುತ್ತಿದೆ
  • ಹಾರ್ದಿಕ್​ ಪಾಂಡ್ಯ ಮತ್ತು ಕೃಣಾಲ್​ ಪಾಂಡ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆ ಜಾಲತಾಣದಲ್ಲಿ ನಡೆಯುತ್ತಿದೆ
Hardik Pandya vs Krunal Pandya : ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡ, ಐಪಿಎಲ್ 2026ರ ಸೀಸನ್‌ನಲ್ಲಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದೆ! ನಾಯಕ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ಪಡೆ ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಾದ್ಯಂತ ಕ್ರಿಕೆಟ್ ಪ್ರೇಮಿಗಳು, ಮಾಜಿ ಆಟಗಾರರು ಹಾಗೂ ಸೆಲೆಬ್ರಿಟಿಗಳ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ, ಈ ಭರ್ಜರಿ ಸಂಭ್ರಮಾಚರಣೆಯ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಮತ್ತೊಂದು ರೋಚಕ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿದೆ, ಅದೇ 'ಪಾಂಡ್ಯ ಬ್ರದರ್ಸ್' ವಿಚಾರ!
ಆರ್‌ಸಿಬಿ ತಂಡದ ಈ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೃಣಾಲ್ ಪಾಂಡ್ಯ ಅವರಿಗೆ, ಅವರ ಕಿರಿಯ ಸಹೋದರ ಹಾರ್ದಿಕ್ ಪಾಂಡ್ಯ ಅವರಿಂದ ಇದುವರೆಗೆ ಯಾವುದೇ ಅಭಿನಂದನಾ ಸಂದೇಶ ಬಾರದಿರುವುದು ಸದ್ಯ ಅಭಿಮಾನಿಗಳ ಗಮನ ಸೆಳೆದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕಳೆದ ವರ್ಷ ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಾಗ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ "ಈಗ ನನ್ನ ಕಣ್ಣುಗಳು ತುಂಬಿ ಬರುತ್ತಿವೆ.. ನಿನ್ನ ಬಗ್ಗೆ ಹೆಮ್ಮೆಯಿದೆ ಸಹೋದರ" ಎಂದು ಭಾವುಕ ಸಂದೇಶ ಹಂಚಿಕೊಳ್ಳುವ ಮೂಲಕ ಸಾರ್ವಜನಿಕವಾಗಿ ಕೃಣಾಲ್ ಸಾಧನೆಯನ್ನು ಕೊಂಡಾಡಿದ್ದರು ಆದರೆ, ಈ ಬಾರಿ ಹಾರ್ದಿಕ್ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿದ್ದು, ಇದು ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ಸಾರಿದೆ. ಅಲ್ಲದೆ, ಈ ನಿಟ್ಟಿನಲ್ಲಿ ನೆಟ್ಟಿಗರಲ್ಲಿ ತರಹೇವಾರಿ ಚರ್ಚೆ ಹಾಗೂ ಅನುಮಾನಗಳನ್ನು ಹುಟ್ಟುಹಾಕಿದೆ.
ಪಾಂಡ್ಯ ಸಹೋದರರ ನಡುವೆ ಏನಾದರೂ ಭಿನ್ನಾಭಿಪ್ರಾಯ ಅಥವಾ ಬಿರುಕು ಮೂಡಿದೆಯೇ ಎಂಬ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಅಭಿಮಾನಿಗಳು ಎತ್ತುತ್ತಿದ್ದಾರೆ. ಆದರೆ, ಈ ವಿಷಯದ ಕುರಿತು ಹಾರ್ದಿಕ್ ಆಗಲಿ ಅಥವಾ ಕೃಣಾಲ್ ಆಗಲಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅತ್ತ ಅವರ ಕುಟುಂಬದ ಸದಸ್ಯರಾಗಲಿ ಅಥವಾ ಆಪ್ತ ಸ್ನೇಹಿತರಾಗಲಿ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಇನ್ನು ತಮ್ಮ ಪತ್ನಿ ನತಾಶಾ ಸ್ಟಾಂಕೋವಿಕ್ ಅವರಿಂದ ಬೇರ್ಪಟ್ಟ ನಂತರ, ಹಾರ್ದಿಕ್ ಅವರು ಮಹಿಕಾ ಶರ್ಮಾ ಜೊತೆ ಸಂಬಂಧ ಬೆಳೆಸಿದ್ದಾರೆ. ಈ ಸಂಬಂಧದ ಬಗ್ಗೆ ಕೃಣಾಲ್​ಗೆ ಅಸಮಾಧಾನ ಇದೆ. ಹಾರ್ದಿಕ್​, ಮಹಿಕಾಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದಾರೆ. ಅಲ್ಲದೆ, ತನ್ನ ಗೆಳತಿಗೆ ಐಷಾರಾಮಿ ಉಡುಗೊರೆಗಳನ್ನು ನೀಡುವುದು ಹಾರ್ದಿಕ್​ಗೆ ಅಭ್ಯಾಸವಾಗಿದೆ. ಸಹೋದರನ ಈ ನಡೆಯಿಂದ ಕೃಣಾಲ್​ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬ ವದಂತಿಗಳಿವೆ.
ಈ ಹಿಂದೆ ಕೂಡ ಪಾಂಡ್ಯ ಸಹೋದರರ ಬಾಂಧವ್ಯ ಹದಗೆಟ್ಟಿದೆ ಎಂಬ ಹಲವು ವದಂತಿಗಳು ಹರಿದಾಡಿದ್ದವಾದರೂ, ಅವುಗಳಿಗೆ ಯಾವುದೇ ಸೂಕ್ತ ಪುರಾವೆಗಳು ಸಿಕ್ಕಿರಲಿಲ್ಲ. ಅಷ್ಟೇ ಅಲ್ಲದೆ, ಕೃಣಾಲ್ ಪಾಂಡ್ಯ ಅವರು ಹಲವು ಸಂದರ್ಭಗಳಲ್ಲಿ ಹಾರ್ದಿಕ್‌ಗೆ ಬಹಿರಂಗವಾಗಿಯೇ ಬೆಂಬಲ ನೀಡುತ್ತಾ ಬಂದಿದ್ದು, ಇಬ್ಬರ ನಡುವೆ ಬಲವಾದ ಒಡನಾಟ ಇರುವುದು ಹಲವು ಬಾರಿ ಸ್ಪಷ್ಟವಾಗಿದೆ.
ಕೇವಲ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನಾ ಪೋಸ್ಟ್ ಹಾಕಿಲ್ಲ ಎಂಬ ಒಂದೇ ಕಾರಣಕ್ಕೆ ಅವರ ವೈಯಕ್ತಿಕ ಬಾಂಧವ್ಯದ ಬಗ್ಗೆ ಒಂದು ನಿರ್ಧಾರಕ್ಕೆ ಬರುವುದು ಸರಿಯಲ್ಲ ಎಂಬುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯವಾಗಿದೆ. ಹಾರ್ದಿಕ್ ಪಾಂಡ್ಯ ಅಥವಾ ಅವರ ಕುಟುಂಬದ ಸದಸ್ಯರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬರುವವರೆಗೆ ಸದ್ಯ ನಡೆಯುತ್ತಿರುವ ಚರ್ಚೆಗಳನ್ನು ಕೇವಲ ವದಂತಿಗಳಷ್ಟೇ ಎಂದು ಪರಿಗಣಿಸಬೇಕಾಗುತ್ತದೆ.
ಮತ್ತೊಂದೆಡೆ, ಆರ್‌ಸಿಬಿ ತಂಡದ ಅದ್ಭುತ ಗೆಲುವಿನ ಸಂಭ್ರಮಾಚರಣೆಯಲ್ಲಿ ಕೃಣಾಲ್ ಪಾಂಡ್ಯ ಪಾಲ್ಗೊಂಡಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ತಂಡದ ಐತಿಹಾಸಿಕ ಗೆಲುವಿಗೆ ಅವರು ನೀಡಿದ ಕೊಡುಗೆಯನ್ನು ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ, ಪಂದ್ಯ ಮುಗಿದ ಬಳಿಕ ಕ್ರೀಡಾಂಗಣದಲ್ಲಿ ಕೃಣಾಲ್ ಪಾಂಡ್ಯ ಅವರು ತಮ್ಮ ಪುಟ್ಟ ಮಗನೊಂದಿಗೆ ನಡೆಸಿದ ಸಡಗರ-ಸಂಭ್ರಮದ ಕ್ಷಣಗಳು ಎಲ್ಲರ ಕಣ್ಣು ಸೆಳೆಯುತ್ತಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net