ಕಾರ್ಯಕ್ರಮದ ಸ್ಥಳಕ್ಕೆ ಹಾರ್ದಿಕ್ ಪಾಂಡ್ಯಾ ಹಾಗೂ ಮಹೀಕಾ ಶರ್ಮಾ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹರ್ಷದ ಕಟ್ಟೆ ಒಡೆದು ಕಾರಿಗೆ ಮುತ್ತಿಗೆ ಹಾಕಲು ಪ್ರಾರಂಭಸಿದ್ದಾರೆ. ಇದನ್ನು ತಡೆಯಲು ನಿಯೋಜಿತರಾಗಿದ್ದ ರಕ್ಷಣಾ ಸಿಬ್ಬಂದಿ ಹರ ಸಾಹಸಪಟ್ಟಿದ್ದು, ಭಾರತದಲ್ಲಿ ಹಾರ್ದಿಕ್ ಪಾಂಡ್ಯಾ ಅವರ ಕ್ರೇಜ್ ಯಾವ ಮಟ್ಟದಲ್ಲಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದರೆ ತಪ್ಪಾಗದು.