ಅಂದಹಾಗೆ, ಅನಯಾ ಬಂಗಾರ್ ಅವರು ಈ ಮೊದಲು ಗಂಡಾಗಿದ್ದರು. ಆರ್ಯನ್ ಬಂಗಾರ್ ಆಗಿದ್ದ ಅವರು ಆಪರೇಷನ್ ಮಾಡಿಸಿಕೊಳ್ಳುವ ಮೂಲಕ ಇದೀಗ ಹೆಣ್ಣಾಗಿ ಬದಲಾಗಿದ್ದಾರೆ. ಕಳೆದ ಮಾರ್ಚ್ (2026) ತಿಂಗಳಲ್ಲಿ ಲಿಂಗ-ದೃಢೀಕರಣ ಶಸ್ತ್ರಚಿಕಿತ್ಸೆಗೆ (Gender-affirming surgery) ಒಳಗಾಗಿದ್ದ ಅನಯಾ ಬಂಗಾರ್, ಭವಿಷ್ಯದಲ್ಲಿ ತಾನು ಎಂದಿಗೂ ಕ್ರಿಕೆಟ್ ಆಡಲಾರೆ ಎಂದೇ ಆತಂಕಗೊಂಡಿದ್ದರು. ಆದರೆ, ಈಗ ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿಯ ಈ ಬೆಳವಣಿಗೆಯು ತಮಗೆ ಮರುಜನ್ಮ ನೀಡಿದಂತಾಗಿದೆ ಎಂದು ಅನಯಾ ಅವರು ಖುಷಿ ಹಂಚಿಕೊಂಡಿದ್ದಾರೆ. 'ಇಂಡಿಯನ್ ಎಕ್ಸ್‌ಪ್ರೆಸ್' ಜೊತೆ ಮಾತನಾಡಿದ ಅನಯಾ, ನಾನು ಮತ್ತೆ ಕ್ರಿಕೆಟ್ ಆಡಬಲ್ಲೆ ಎಂಬುದು ನನಗೆ ಅತ್ಯಂತ ಖುಷಿಯ ದಿನವಾಗಿದೆ ಎಂದು ಭಾವುಕರಾಗಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.