ವಿರಾಟ್​ ಉತ್ತರಾಧಿಕಾರಿಯಾಗಲು ಆ ಹುಡುಗ ಸೂಕ್ತ: ಯುವ ಆಟಗಾರನ ಬಗ್ಗೆ ಮನತುಂಬಿ ಮಾತಾಡಿದ ಮಾಜಿ ಕ್ರಿಕೆಟಿಗ! | Team India

Team India: ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತೀಯ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಮೆನ್ ಇನ್ ಬ್ಲೂ, ಪಂದ್ಯದ ಅಂತಿಮಘಟ್ಟದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತು.
ವಿರಾಟ್​ ಉತ್ತರಾಧಿಕಾರಿಯಾಗಲು ಆ ಹುಡುಗ ಸೂಕ್ತ
ವಿರಾಟ್​ ಉತ್ತರಾಧಿಕಾರಿಯಾಗಲು ಆ ಹುಡುಗ ಸೂಕ್ತ
Published on: 

Team India: ಏಷ್ಯನ್ ಗೇಮ್ಸ್ 2026ರ ಪುರುಷರ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತೀಯ ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಮೆನ್ ಇನ್ ಬ್ಲೂ, ಪಂದ್ಯದ ಅಂತಿಮಘಟ್ಟದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತು.

ಮೊದಲು ಬ್ಯಾಟ್ ಮಾಡಿದ ಟೀಮ್​ ಇಂಡಿಯಾ 211 ರನ್‌ಗಳನ್ನು ಕಲೆಹಾಕಿತು. ತಂಡದ ಪರವಾಗಿ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಅದ್ಭುತ ಬ್ಯಾಟಿಂಗ್​ ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ತಿಲಕ್, ಕೇವಲ 22 ಎಸೆತಗಳಲ್ಲಿ ಅಜೇಯ 51 ರನ್‌ಗಳನ್ನು ಕಲೆಹಾಕಿದರು.

ಅವರ ಈ ಅದ್ಭುತ ಪ್ರದರ್ಶನವನ್ನು ಕೊಂಡಾಡಿರುವ ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್, ಭವಿಷ್ಯದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಮೂರನೇ ಕ್ರಮಾಂಕದ ಸ್ಥಾನವನ್ನು ತುಂಬಲು ತಿಲಕ್ ವರ್ಮಾ ಸಮರ್ಥರಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಆ ಘಟನೆಯ ಬಗ್ಗೆ ತುಂಬಾ ಬೇಸರವಿದೆ ಎಂದ ಗವಾಸ್ಕರ್!...ಸನ್ನಿ ಅಚ್ಚರಿಯ ಆಸೆಯನ್ನು ಹಿಟ್​ಮ್ಯಾನ್ ಈಡೇರಿಸ್ತಾರಾ..? | Sunil Gavaskar

ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಮಾತನಾಡಿರುವ ವಾಸಿಮ್ ಜಾಫರ್, ಬಹುಮುಖ ಪ್ರತಿಭೆಯನ್ನು ನೋಡುವುದು ತುಂಬಾ ಸಂತೋಷ ತಂದಿದೆ. ಅವರು ಈ ಹಿಂದೆ 3ನೇ ಕ್ರಮಾಂಕದಲ್ಲಿ ಶತಕ ಗಳಿಸಿದ್ದರು, ಮತ್ತು ಈಗ ನಂಬರ್ 5 ಹಾಗೂ ನಂಬರ್ 6 ಸ್ಥಾನಗಳಿಗೂ ಅಷ್ಟೇ ಸುಂದರವಾಗಿ ಹೊಂದಿಕೊಂಡಿದ್ದಾರೆ. ಇದು ಸರಿಯಾದ ಸಮಯ. ಇಬ್ಬರು ದಿಗ್ಗಜರಾದ ರೋಹುತ್​-ಕೊಹ್ಲಿ ನಿವೃತಿಯ ಬಳಿಕ ಹಿಟ್​ಮ್ಯಾನ್​ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್ ಇದ್ದಾರೆ, ವಿರಾಟ್​ ಜಾಗದಲ್ಲಿ ತಿಲಕ್​ ಬರಲಿದ್ದಾರೆ ಎನ್ನುವುದು ನನ್ನ ನಂಬಿಕೆ ಎಂದರು.

ತಿಲಕ್ ವರ್ಮಾಗೆ ಕೊಹ್ಲಿ ಸ್ಥಾನ ತುಂಬುವ ಸಾಮರ್ಥ್ಯವಿದ್ದು, ದುಲೀಪ್ ಟ್ರೋಫಿಯಲ್ಲಿ ಅವರು ರನ್ ಗಳಿಸಿದ ರೀತಿಯನ್ನು ನಾವು ನೋಡಿದ್ದೇವೆ. ಅವರ ಪ್ರಥಮ ದರ್ಜೆ ಸರಾಸರಿ ಸುಮಾರು 55 ಇದೆ. ಹೀಗಾಗಿ, ಅವರು ಮೂರೂ ಸ್ವರೂಪಗಳಿಗೂ ಬಹಳ ಸುಲಭವಾಗಿ ಹೊಂದಿಕೊಳ್ಳಬಲ್ಲರು ಎಂದು ಜಾಫರ್ ಹೇಳಿದರು.

ಅಭಿಷೇಕ್ ಶರ್ಮಾ ಆಟಕ್ಕೆ ಜಾಫರ್ ಮೆಚ್ಚುಗೆ!

ಇದಲ್ಲದೆ, ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಪ್ರದರ್ಶನವನ್ನೂ ಜಾಫರ್ ಪ್ರಶಂಸಿಸಿದರು. ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ 28 ಎಸೆತಗಳಲ್ಲಿ 61 ರನ್ ಗಳಿಸಿ ಭಾರತಕ್ಕೆ ಅತ್ಯುತ್ತಮ ಆರಂಭ ಒದಗಿಸಿಕೊಟ್ಟರು. ಅವರ ಈ ಆಟವೇ ಟೀಮ್​ ಇಂಡಿಯಾ 211 ರನ್‌ಗಳ ಬೃಹತ್​ ಮೊತ್ತ ಕಲೆಹಾಕಲು ನೆರವಾಯಿತು ಎಂದಿದ್ದಾರೆ.

ಅಭಿಷೇಕ್ ಈಗ ಸ್ವಲ್ಪ ಪಕ್ವತೆ ಸಾಧಿಸಿರುವಂತೆ ತೋರುತ್ತಿದೆ. ಅವರು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ ಮತ್ತು ಈಗ ಅವರ ಆಟದಲ್ಲಿ ಭರವಸೆ ಕಾಣಿಸುತ್ತಿದೆ, ಆದರೂ ಈ ಮಾದರಿಯು ಹೆಚ್ಚು ಸಮಯ ನೀಡುವುದಿಲ್ಲ. ಅವರ ಹಿಂದಿನ ವಿಧಾನವು ಮೊದಲ ಎಸೆತದಲ್ಲೇ ಸಿಕ್ಸರ್ ಹೊಡೆಯಲು ಪ್ರಯತ್ನಿಸುವುದಾಗಿತ್ತು. ಆದರೆ ಈಗ, ಅದು ತಪ್ಪಾದ ವಿಧಾನ ಎನ್ನುವುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ ಎಂದು ಜಾಫರ್ ಹೇಳಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net