ಅಷ್ಟೆಲ್ಲಾ ಆದ್ರೂ ಇನ್ನೂ ಬುದ್ಧಿ ಕಲಿಯದ ದಿಗ್ವೇಶ್​ ರಾಥಿ: ಮತ್ತೆ ತನ್ನ ಹಳೇ ಚಾಳಿ ಆರಂಭಿಸಿದ ಮಿಸ್ಟರಿ ಸ್ಪಿನ್ನರ್​! Digvesh Rathi

ಅಷ್ಟೆಲ್ಲಾ ಆದ್ರೂ ಇನ್ನೂ ಬುದ್ಧಿ ಕಲಿಯದ ದಿಗ್ವೇಶ್​ ರಾಥಿ: ಮತ್ತೆ ತನ್ನ ಹಳೇ ಚಾಳಿ ಆರಂಭಿಸಿದ ಮಿಸ್ಟರಿ ಸ್ಪಿನ್ನರ್​!  Digvesh Rathi
ಅಷ್ಟೆಲ್ಲಾ ಆದ್ರೂ ಇನ್ನೂ ಬುದ್ಧಿ ಕಲಿಯದ ದಿಗ್ವೇಶ್​ ರಾಥಿ: ಮತ್ತೆ ತನ್ನ ಹಳೇ ಚಾಳಿ ಆರಂಭಿಸಿದ ಮಿಸ್ಟರಿ ಸ್ಪಿನ್ನರ್​! Digvesh Rathi
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಮತ್ತೆ ಮರುಕಳಿಸಿದ ಸ್ಪಿನ್ನರ್ ದಿಗ್ವೇಶ್​ ರಾಥಿಯ ನೋಟ್‌ಬುಕ್ ಸೆಲೆಬ್ರೇಷನ್
  • ಲಖನೌ ಸೂಪರ್ ಜೈಂಟ್ಸ್ ಪರ ಹಿಂದೊಮ್ಮೆ ದಂಡನೆಗೆ ಗುರಿಯಾಗಿದ್ದ ದಿಗ್ವೇಶ್ ಬುದ್ಧಿ ಕಲಿಯದೆ ಮತ್ತೇ ಅದೇ ವರ್ತನೆ ತೋರಿದ್ದಾರೆ
  • ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಪುರಾಣಿ ದೆಹಲಿ ಪರ ಆಡುವಾಗ ಔಟರ್ ದೆಹಲಿ ತಂಡದ ಪ್ರಿಯಾಂಶ್ ಆರ್ಯ ವಿಕೆಟ್ ಪಡೆದು ಆಚರಿಸಿದ್ದಾರೆ
  • ಪ್ರಿಯಾಂಶ್ ಆರ್ಯ ಕ್ಯಾರೆ ಎನ್ನದೆ ಮೈದಾನದಿಂದ ಹೊರನಡೆದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ನವದೆಹಲಿ: ದಿಗ್ವೇಶ್​ ರಾಥಿ ( Digvesh Rathi )... ಈ ಹೆಸರು ಕೇಳಿದರೆ ಸಾಕು ಕ್ರೀಡಾಭಿಮಾನಿಗಳಿಗೆ ಥಟ್ಟನೆ 'ನೋಟ್‌ಬುಕ್' ಸೆಲೆಬ್ರೇಷನ್ ನೆನಪಾಗುತ್ತದೆ. ಐಪಿಎಲ್​ನಲ್ಲಿ ತನ್ನ ನೋಟ್​ಬುಕ್​ ಆಚರಣೆ ಮೂಲಕ ಬಿಸಿಸಿಐ ಕೆಂಗಣ್ಣಿಗೂ ಗುರಿಯಾಗಿ ದಂಡ ತೆತ್ತಿದ್ದ ದಿಗ್ವೇಶ್​ ಒಂದು ಪಂದ್ಯದಿಂದ ನಿಷೇಧವನ್ನು ಅನುಭವಿಸಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ದಿಗ್ವೇಶ್​, ಇದೀಗ ದೆಹಲಿ ಪ್ರೀಮಿಯರ್ ಲೀಗ್‌ನಲ್ಲೂ (DPL) ತನ್ನ ನೋಟ್​​ಬುಕ್​ ಆಚರಣೆ ಮರುಕಳಿಸಿದ್ದಾರೆ.
ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ಪರ ಆಡುವಾಗ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕೆಣಕಲು ವಿಕೆಟ್ ಪಡೆದ ನಂತರ ತನ್ನ ಕೈಯನ್ನೇ 'ನೋಟ್‌ಬುಕ್' ರೀತಿ ಪ್ರದರ್ಶಿಸಿ ದಂಡನೆಗೆ ಗುರಿಯಾಗಿದ್ದ ಸ್ಪಿನ್ನರ್ ದಿಗ್ವೇಶ್​ ರಾಠಿ, ಈಗ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಪುನಃ ಅದೇ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ.
ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಪುರಾಣಿ ದೆಹಲಿ ತಂಡದ ಪರ ಆಡುತ್ತಿರುವ ದಿಗ್ವೇಶ್​, ಔಟರ್ ದೆಹಲಿ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದಾಗ ಈ ವಿವಾದಾತ್ಮಕ ಸೆಲೆಬ್ರೇಷನ್ ಅನ್ನು ಮರುಕಳಿಸಿದರು. ಈ ಪಂದ್ಯದಲ್ಲಿ ತಮ್ಮ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಖುಷಿಯಲ್ಲಿ ದಿಗ್ವೇಶ್​ ಈ ರೀತಿ ಮಾಡಿದರು.
30 ರನ್ ಗಳಿಸಿ ನಿರ್ಗಮಿಸುತ್ತಿದ್ದ ಪ್ರಿಯಾಂಶ್ ಆರ್ಯ ಅವರು ದಿಗ್ವೇಶ್​ ಅವರ ನೋಟ್​ಬುಕ್​ ಆಚರಣೆ ಕಡೆಗೆ ಗಮನವನ್ನೂ ನೀಡದೆ ಮೈದಾನದಿಂದ ಹೊರನಡೆದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆಟಗಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಔಟರ್ ದೆಹಲಿ ವಾರಿಯರ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 219 ಬೃಹತ್ ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಆಟಗಾರ ಯಜಾಸ್ ಶರ್ಮಾ ಕೇವಲ 36 ಎಸೆತಗಳಲ್ಲಿ 10 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್‌ಗಳ ಸಹಾಯದಿಂದ 86 ರನ್ ಸಿಡಿಸಿ ಅದ್ಭುತ ಆಟವಾಡಿದರು. ಇವರಿಗೆ ಸಾಥ್ ನೀಡಿದ ಅಕ್ಷಯ್ ಸೈನಿ (49 ರನ್) ಮತ್ತು ಹರ್ಷ ತ್ಯಾಗಿ (32 ರನ್) ತಂಡದ ಮೊತ್ತ ಹೆಚ್ಚಿಸಲು ಪ್ರಮುಖ ಕಾರಣರಾದರು.

ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಪುರಾಣಿ ದೆಹಲಿ ತಂಡದ ಪರ ಆರಂಭಿಕರಾದ ಆರ್ಯನ್ ಗೋಲ್ (65 ರನ್) ಹಾಗೂ ಸಮರ್ಥ್ ಸೇಥ್ (42 ರನ್) ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ (104 ರನ್) ನೀಡಿ ಉತ್ತಮ ಆರಂಭ ಒದಗಿಸಿದರೂ ಜಯ ಸಾಧಿಸಲು ಸಾಧ್ಯವಾಗಲಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ್ದರಿಂದ ಪುರಾಣಿ ದೆಹಲಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 198 ರನ್‌ಗಳನ್ನು ಮಾತ್ರ ಗಳಿಸಲಷ್ಟೇ ಶಕ್ತವಾಯಿತು, ಇದರೊಂದಿಗೆ ಔಟರ್ ದೆಹಲಿ ತಂಡವು 21 ರನ್‌ಗಳ ರೋಚಕ ಜಯ ಸಾಧಿಸಿತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net