ಈ ವಿಚಿತ್ರ ಖದೀಮನಿಗಿಲ್ಲ ಚಿನ್ನ, ಹಣದ ಮೋಹ...ಈತನ ಟಾರ್ಗೆಟ್​ ಏನೆಂದು ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Thief

ಈ ವಿಚಿತ್ರ ಖದೀಮನಿಗಿಲ್ಲ ಚಿನ್ನ, ಹಣದ ಮೋಹ...ಈತನ ಟಾರ್ಗೆಟ್​ ಏನೆಂದು ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Thief
ಈ ವಿಚಿತ್ರ ಖದೀಮನಿಗಿಲ್ಲ ಚಿನ್ನ, ಹಣದ ಮೋಹ...ಈತನ ಟಾರ್ಗೆಟ್​ ಏನೆಂದು ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Thief
Published on

ಪ್ರಮುಖ ಮುಖ್ಯಾಂಶಗಳು

  • ತಿರುವನಂತಪುರಂನಲ್ಲಿ ಹಣ ಚಿನ್ನ ಬಿಟ್ಟು ಬರೀ ಈರುಳ್ಳಿ ಬೇಳೆ ಕಳ್ಳತನ ಮಾಡುವ ವಿಚಿತ್ರ ಖದೀಮ
  • ಹಣ ಆಭರಣ ಬೇಡ ಕೇವಲ ದಿನಸಿ ಪದಾರ್ಥಗಳಿಗಾಗಿ ಕೈಚಳಕ ತೋರುತ್ತಿರುವ ವಿಲಕ್ಷಣ ಕಳ್ಳ
  • ಕ್ಯಾಂಟೀನ್ ಮಾಲೀಕರು ಹೊರಗಿನಿಂದ ಬೀಗ ಹಾಕಿದರೂ ಕಿಟಕಿ ಒಡೆದು ಪರಾರಿಯಾದ ಹೆಲ್ಮೆಟ್ ಧಾರಿ
  • ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾದರೂ ಇನ್ನೂ ಪತ್ತೆಯಾಗದ ಪೊಲೀಸರ ನಿದ್ದೆಗೆಡಿಸಿದ ಕಳ್ಳ
ತಿರುವನಂತಪುರಂ: ನಗರದ ಪಿಎಂಜಿ ಪ್ರದೇಶದಲ್ಲಿರುವ ಪಿಡಬ್ಲ್ಯೂಡಿ ಕ್ಯಾಂಟೀನ್‌ನಲ್ಲಿ ವಿಚಿತ್ರ ಹಾಗೂ ಅಚ್ಚರಿಯ ಕಳವು (Thief ) ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕಳ್ಳನಿಗೆ ಚಿನ್ನ, ಬೆಳ್ಳಿ ಅಥವಾ ಹಣದ ಮೇಲೆ ಯಾವುದೇ ಆಸಕ್ತಿಯಿಲ್ಲ. ಬದಲಿಗೆ, ಆತನ ಗುರಿ ಈರುಳ್ಳಿ ಮತ್ತು ಬೇಳೆಯಂತಹ ದಿನಸಿ ಪದಾರ್ಥಗಳು ಮಾತ್ರ. ಈ ವಿಲಕ್ಷಣ ಕಳ್ಳತನದ ಪ್ರಕರಣ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದ್ದು, ಕಳ್ಳನನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಕಳೆದ ಎರಡು ತಿಂಗಳಿಂದ ಈ ಕ್ಯಾಂಟೀನ್‌ನಲ್ಲಿ ನಿರಂತರವಾಗಿ ಕಳವು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಪ್ರತಿಯೊಬ್ಬ ಖದೀಮನು ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ಕದ್ದರೆ, ಈ ವಿಚಿತ್ರ ಕಳ್ಳ ಮಾತ್ರ ಪ್ರತಿ ಶನಿವಾರದಂದು ಕ್ಯಾಂಟೀನ್‌ಗೆ ನುಗ್ಗಿ ದಿನಸಿಗಳನ್ನು ಕದಿಯುತ್ತಾನೆ. ಭಾನುವಾರ ಕ್ಯಾಂಟೀನ್ ಮುಚ್ಚಿರುವುದರಿಂದ, ಸೋಮವಾರ ಬೆಳಗ್ಗೆ ಸಿಬ್ಬಂದಿ ಕೆಲಸಕ್ಕೆ ಬಂದಾಗಷ್ಟೇ ಕಳವು ನಡೆದಿರುವುದು ಗೊತ್ತಾಗುತ್ತದೆ. ಎಣ್ಣೆ, ಮಸಾಲೆ ಪದಾರ್ಥಗಳು, ಗೋಡಂಬಿ, ಈರುಳ್ಳಿ ಹಾಗೂ ಮೆಣಸಿನಕಾಯಿ ಸೇರಿದಂತೆ ಪ್ರತಿ ವಾರ ಸುಮಾರು 4,000 ರೂ. ಮೌಲ್ಯದ ದಿನಸಿ ಸಾಮಗ್ರಿಗಳು ಕಳ್ಳತನವಾಗುತ್ತಿವೆ.
ಈ ಕಳ್ಳನ ಕೈಚಳಕ ಎಷ್ಟರಮಟ್ಟಿಗೆ ಇದೆ ಅಂದರೆ, ಕ್ಯಾಂಟೀನ್ ಒಳಗೆಯೇ ಇಡಲಾಗುವ ಕೀಯನ್ನು ಬಳಸಿ ಆತ ಒಳ ಪ್ರವೇಶಿಸುತ್ತಾನೆ. ಹೆಲ್ಮೆಟ್ ಧರಿಸಿ ಬರುವ ಈ ಕಳ್ಳ, ಒಳಗೆ ಬಂದ ತಕ್ಷಣ ಸಿಸಿಟಿವಿ ಕ್ಯಾಮೆರಾದ ದಿಕ್ಕನ್ನು ಬದಲಾಯಿಸುತ್ತಾನೆ. ಕಳವು ಮುಗಿಸಿ ಹೊರಡುವ ಮುನ್ನ ಮರಳಿ ಸಿಸಿಟಿವಿಯನ್ನು ಹಳೆಯ ಸ್ಥಿತಿಗೆ ತಿರುಗಿಸಿ ಹೋಗುತ್ತಾನೆ. ಕಳವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕ್ಯಾಂಟೀನ್ ಮಾಲೀಕರು, ಕಳ್ಳ ಒಳಗೆ ಹೋದಾಗ ಹೊರಗಿನಿಂದ ಬಾಗಿಲಿಗೆ ಬೀಗ ಹಾಕಿದ್ದರು. ಆದರೆ ಚಾಣಕ್ಷ ಕಳ್ಳ ಕ್ಯಾಂಟೀನ್ ಒಳಗೆ ಇದ್ದ ಮಹಿಳೆಯರ ವಿಶ್ರಾಂತಿ ಗೃಹದ ಕಿಟಕಿ ಒಡೆದು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ನನ್ನಮ್ಮ ಶರ್ಮಿಳಾ ಮತಾಂತರವಾಗಿ ಇಸ್ಲಾಂ ಬೋಧಿಸುತ್ತಿದ್ದರು, ನಾವು ಹಿಂದೂ ಧರ್ಮ ಪಾಲಿಸಲಿಲ್ಲ ಎಂದ ಸೈಫ್ ಸಹೋದರಿ! Sharmila Tagore
ಕಳ್ಳತನ ಮಾಡುವಾಗ ಆತ ಕೆಳಗೆ ಬೀಳುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆದಾಗ್ಯೂ, ಆ ವ್ಯಕ್ತಿ ಯಾರೆಂಬುದನ್ನು ಇನ್ನೂ ಗುರುತಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಹಣ, ಆಭರಣಗಳ ಕಳುವಿನ ಬದಲು ಬಡವರ ಅಡುಗೆಗೆ ಬೇಕಾದ ಪದಾರ್ಥಗಳನ್ನೇ ಟಾರ್ಗೆಟ್ ಮಾಡಿರುವ ಈ ವಿಶಿಷ್ಟ ಕಳ್ಳನನ್ನು ಸೆರೆಹಿಡಿಯಲು ಪೊಲೀಸರು ತೀವ್ರ ಶ್ರಮ ವಹಿಸುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net