ಆತ ಓರ್ವ...ಸ್ಮೃತಿ ಜತೆ ಮದ್ವೆ ಮುರಿದುಕೊಂಡ ಪಲಾಶ್​ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ನಟಿ ಡೈಸಿ ಷಾ! Smriti Mandhana

ಪಲಾಶ್​ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ನಟಿ ಡೈಸಿ ಷಾ! Smriti Mandhana
ಪಲಾಶ್​ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ನಟಿ ಡೈಸಿ ಷಾ! Smriti Mandhana
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾದ ಮಹಿಳಾ ಕ್ರಿಕೆಟರ್​ ಸ್ಮೃತಿ ಮಂಧಾನ ವಿವಾಹ ರದ್ದಾಗಿರುವುದು ಎಲ್ಲರಿಗೂ ತಿಳಿದಿದೆ
  • ಅಂದುಕೊಂಡಂತೆ ನಡೆದಿದ್ದರೆ ಕಳೆದ ವರ್ಷ ನವೆಂಬರ್​ 23ರಂದು ಸ್ಮೃತಿ ಮದುವೆ ನಡೆಯಬೇಕಿತ್ತು
  • ಬಾಲಿವುಡ್​ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜತೆ ಸ್ಮೃತಿ ಹಸೆಮಣೆ ಏರಬೇಕಿತ್ತು
Smriti Mandhana : ಟೀಮ್ ಇಂಡಿಯಾದ ಮಹಿಳಾ ಕ್ರಿಕೆಟರ್​ ಸ್ಮೃತಿ ಮಂಧಾನ ( Smriti Mandhana ) ಅವರ ವಿವಾಹ ರದ್ದಾಗಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಅಂದುಕೊಂಡಂತೆ ನಡೆದಿದ್ದರೆ ಕಳೆದ ವರ್ಷ ನವೆಂಬರ್​ 23ರಂದು ಸ್ಮೃತಿ ಅವರ ಮದುವೆ ಬಾಲಿವುಡ್​ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜತೆ ನಡೆಯಬೇಕಿತ್ತು. ಸಿನಿಮಾ ಕತೆಯಲ್ಲಿ ಬರುವ ಟ್ವಿಸ್ಟ್​ನಂತೆ ಮದುವೆಗೂ ಕೆಲ ಗಂಟೆಗಳ ಮುನ್ನ ಅನಿರೀಕ್ಷಿತವಾಗಿ ವಿವಾಹವನ್ನು ಮುಂದೂಡಲಾಯಿತು. ಸುಮಾರು ಎರಡು ವಾರಗಳ ಬಳಿಕ ವಿವಾಹ ರದ್ದಾಗಿರುವುದಾಗಿ ಸ್ವತಃ ಸ್ಮೃತಿ ಹಾಗೂ ಪಲಾಶ್​ ಅಧಿಕೃತವಾಗಿ ತಿಳಿಸಿದರು. ಸದ್ಯ ಮದುವೆ ಮುರಿದುಬಿದ್ದಿರುವುದು ಮುಗಿದು ಹೋದ ಕತೆ. ತಾಜಾ ಸಂಗತಿ ಏನೆಂದರೆ, ಪಲಾಶ್​ ಬಗ್ಗೆ ನಟಿ ಡೈಸಿ ಷಾ ನೀಡಿರುವ ಹೇಳಿಕೆ.
ಪಲಾಶ್ ಮುಚ್ಚಲ್ ಅವರು ಮದುವೆ ಹಿಂದಿನ ದಿನ ರಾತ್ರಿ ತನ್ನ ಮಾಜಿ ಗೆಳತಿಯೊಂದಿಗೆ ಸರಸವಾಡುವಾಗ ರೆಡ್​ಹ್ಯಾಂಡ್​ ಆಗಿ ಸ್ಮೃತಿ ಮಂಧಾನ ಕೈಗೆ ಸಿಕ್ಕಿಬಿದ್ದರು. ಹೀಗಾಗಿ, ಮದುವೆಯನ್ನು ರದ್ದುಗೊಳಿಸಲಾಯಿತು ಎಂಬ ಸುದ್ದಿ ಹರಿದಾಡಿತು. ಸ್ಮೃತಿ ಅವರ ಬಾಲ್ಯದ ಗೆಳತಿ ಕೂಡ ಇದೇ ವಿಷಯವನ್ನು ಹೇಳಿದರು. ಆದಾಗ್ಯೂ, ಇತ್ತೀಚೆಗೆ ಬಾಲಿವುಡ್ ನಟಿ ಡೈಸಿ ಷಾ, ಪಲಾಶ್ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ.
ನಟ ಶ್ರೇಯಸ್ ತಲ್ಪಾಡೆ ಮತ್ತು ನಟಿ ಡೈಸಿ ಷಾ ಪ್ರಮುಖ ಪಾತ್ರದಲ್ಲಿರುವ ತಮ್ಮ ಹೊಸ ನಿರ್ದೇಶನದ ಸಿನಿಮಾವನ್ನು ಪಲಾಶ್​ ಅವರು ಇತ್ತೀಚೆಗೆ ಘೋಷಿಸಿದರು. ಇತ್ತೀಚೆಗೆ ಫಿಲ್ಮಿಗ್ಯಾನ್​ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪಲಾಶ್​ ಮತ್ತು ಅವರ ಕುಟುಂಬದ ಜತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದರು. ಡೈಸಿ ಅವರು ಬಾಲಿವುಡ್​ಗೆ ಪಾದರ್ಪಣೆ ಮಾಡಿದ ಜೈಹೋ ಚಿತ್ರಕ್ಕೆ ಪಲಾಶ್​ ಮುಚ್ಚಲ್​ ಸಹೋದರಿ ಪಾಲಕ್​ ಮುಚ್ಚಲ್​ ಹಾಡು ಹಾಡಿದ್ದರು. ಈ ವೇಳೆ ಡೈಸಿ ಷಾ ಮತ್ತು ಪಾಲಕ್​ ಮುಚ್ಚಲ್​ ನಡುವೆ ಸ್ನೇಹ ಬೆಳೆಯಿತು. ಈ ಮೂಲಕ ಪಲಾಶ್​ ಪರಿಚಯವಾಯಿತು ಎಂದು ಡೈಸಿ ಹೇಳಿದ್ದಾರೆ.
ಪಲಾಶ್​ ಬಗ್ಗೆ ಮಾತನಾಡಿದ ಡೈಸಿ, ಪಲಾಶ್ ಓರ್ವ ವ್ಯಕ್ತಿಯಾಗಿ ತುಂಬಾ ಒಳ್ಳೆಯವರು. ವಾಸ್ತವವಾಗಿ, ನಾನು ಅವರನ್ನು ಒಂದೆರಡು ಬಾರಿ ಭೇಟಿಯಾಗಿದ್ದೇನೆ. ಪಾಲಕ್ ಅವರು ಜೈ ಹೋ ಗಾಗಿ ಒಂದು ಹಾಡನ್ನು ಹಾಡಿದ್ದರು. ಅಂದಿನಿಂದ ನಾನು ಪಾಲಕ್ ಬಗ್ಗೆ ತಿಳಿದಿದ್ದೇನೆ. ನಾನು ಆಗಾಗ್ಗೆ ಪಾಲಕ್ ಅವರ ಮನೆಯಲ್ಲಿ ಹುಟ್ಟುಹಬ್ಬದ ಪಾರ್ಟಿ ಮತ್ತು ಗಣಪತಿ ಪೂಜೆಗಾಗಿ ಹೋಗುತ್ತೇನೆ. ಇದೇ ಸಂದರ್ಭದಲ್ಲಿ ನಾನು ಪಲಾಶ್ ಅವರನ್ನು ಭೇಟಿಯಾದೆ. ಅವರು ಓರ್ವ ಮ್ಯೂಸಿಕ್​ಕಂಪೂಸರ್​ ಮತ್ತು ನಿರ್ದೇಶಕ ಎಂದು ನನಗೆ ತಿಳಿಯಿತು ಎಂದರು.
ಪಲಾಶ್​ ಅವರ ಕುಟುಂಬ ಸುಂದರ ಕುಟುಂಬ. ಅವರು ತುಂಬಾ ನಿಷ್ಠಾವಂತರು. ಅವರು ದೇವರನ್ನು ತುಂಬಾ ನಂಬುತ್ತಾರೆ. ದೇವರನ್ನು ನಂಬುವವರು ಪಾಸಿಟಿವ್​ ಜನರು ಎಂದು ಡೈಸಿ ಷಾ ಹೇಳಿದರು. ಪಲಾಶ್​ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಎಲ್ಲಾ ಪ್ರಚಾರವು ನಕಲಿ. ಪಲಾಶ್ ತುಂಬಾ ಒಳ್ಳೆಯವರು ಎಂದು ಡೈಸಿ ಹೇಳಿದರು. ಇದೀಗ ಡೈಸಿ ಅವರ ಹೇಳಿಕೆಗಳು ಜಾಲತಾಣದಲ್ಲಿ ಬಹಳ ಚರ್ಚೆಯಾಗುತ್ತಿದೆ.
ಅಂದಹಾಗೆ, ಡೈಸಿ ಷಾ ಅವರು ಕನ್ನಡಿಗರಿಗೂ ಪರಿಚಿತರು. ಕನ್ನಡದಲ್ಲಿ ಭದ್ರ, ಬಾಡಿಗಾರ್ಡ್​, ಗಜೇಂದ್ರ ಹಾಗೂ ಆಕ್ರಮಣ ಸಿನಿಮಾದಲ್ಲಿ ನಟಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net