ಕ್ರಿಕೆಟಿಗ ಸಮೀರ್ ರಿಜ್ವಿ, ಯೇಶಾ ಸಾಗರ್ ಡೇಟಿಂಗ್? ಲವ್​ ಜಿಹಾದ್ ವದಂತಿಗೆ ಬ್ರೇಕ್​ ಹಾಕಿದ ನಿರೂಪಕಿ! Sameer Rizvi and Yesha Sagar

ಐಪಿಎಲ್ ಕ್ರಿಕೆಟಿಗ ಸಮೀರ್ ರಿಜ್ವಿ ಮತ್ತು ಕ್ರೀಡಾ ನಿರೂಪಕಿ ಯೇಶಾ ಸಾಗರ್
ಐಪಿಎಲ್ ಕ್ರಿಕೆಟಿಗ ಸಮೀರ್ ರಿಜ್ವಿ ಮತ್ತು ಕ್ರೀಡಾ ನಿರೂಪಕಿ ಯೇಶಾ ಸಾಗರ್
Published on
ಉತ್ತರ ಪ್ರದೇಶ: ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದ ಈ ಯುವ ಕ್ರಿಕೆಟಿಗ ಹಾಗೂ ಪ್ರಸ್ತುತ ಐಪಿಎಲ್​ನಲ್ಲಿ ದೆಹಲಿ ಕ್ಯಾಪಿಟಲ್ಸ್​ ಪರ ಆಡುತ್ತಿರುವ ಸಮೀರ್ ರಿಜ್ವಿ ಮತ್ತು ಖ್ಯಾತ ಕ್ರೀಡಾ ನಿರೂಪಕಿ ಯೇಶಾ ಸಾಗರ್ (Sameer Rizvi and Yesha Sagar) ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ಆದರೆ, ಈ ಪ್ರೇಮ ಕಥೆಗೆ ಈಗ 'ಲವ್ ಜಿಹಾದ್' ಎಂಬ ವಿವಾದಾತ್ಮಕ ಬಣ್ಣ ಹಚ್ಚಲಾಗುತ್ತಿದೆ.

ಏನಿದು ವಿವಾದ? ಸೋಶಿಯಲ್ ಮೀಡಿಯಾದಲ್ಲಿ ಆಗ್ತಿರೋ ಆರೋಪಗಳೇನು?

ಸಮೀರ್ ರಿಜ್ವಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಮತ್ತು ಯೇಶಾ ಸಾಗರ್ ಹಿಂದೂ ಧರ್ಮದವರು. ಇದನ್ನೇ ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಅಘಾತಕಾರಿ ವದಂತಿಗಳನ್ನು ಹಬ್ಬಿಸಲಾಗುತ್ತಿದೆ.
ಸಮೀರ್ ಅವರು ಯೇಶಾ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದಾರೆ, ಅವರು ಬಿಕಿನಿ ಧರಿಸುವುದನ್ನು ನಿಷೇಧಿಸಿದ್ದಾರೆ ಮತ್ತು ಸಾಮಾಜಿಕ ಜಾಲತಾಣಗಳಿಂದ ಹಳೆಯ ಬಿಕಿನಿ ಫೋಟೋಗಳನ್ನು ತೆಗೆದು ಹಾಕುವಂತೆ ಬೆದರಿಕೆ ಹಾಕಿದ್ದಾರೆ ಎಂಬಂತಹ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಅಷ್ಟೇ ಅಲ್ಲದೆ, ಯೇಶಾ ಅವರಿಗೆ ಕುರಾನ್ ಪಠಿಸುವಂತೆ ಒತ್ತಾಯಿಸಲಾಗುತ್ತಿದೆ ಮತ್ತು ಅವರು ಇತರ ಕ್ರಿಕೆಟಿಗರೊಂದಿಗೆ ಹ್ಯಾಂಡ್‌ಶೇಕ್ ಮಾಡುವುದನ್ನು ಸಮೀರ್ ನಿಷೇಧಿಸಿದ್ದಾರೆ ಎಂಬ ಸುದ್ದಿಗಳು ಇನ್ನಷ್ಟು ಕಿಚ್ಚನ್ನು ಹಚ್ಚಿಸಿವೆ.

ಮೌನ ಮುರಿದ ಯೇಶಾ ಸಾಗರ್!

ಈ ಎಲ್ಲಾ ಆರೋಪಗಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿರುವಾಗಲೇ ನಿರೂಪಕಿ ಯೇಶಾ ಸಾಗರ್ ಅಂತಿಮವಾಗಿ ಮೌನ ಮುರಿದಿದ್ದಾರೆ. ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಇಂಟರ್ನೆಟ್‌ನಲ್ಲಿ ನೀವು ನೋಡುವ ಅಥವಾ ಓದುವ ಪ್ರತಿಯೊಂದನ್ನೂ ನಂಬಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಮತ್ತು ಸಮೀರ್ ವಿರುದ್ಧ ಕೇಳಿಬರುತ್ತಿರುವ ಎಲ್ಲಾ ಆರೋಪಗಳನ್ನು ಅವರು ಪರೋಕ್ಷವಾಗಿ ತಳ್ಳಿಹಾಕಿದ್ದಾರೆ.
ಇಷ್ಟಕ್ಕೂ ಈ ವದಂತಿ ಶುರುವಾಗಿದ್ದು ಎಲ್ಲಿ?
ಮೂಲಗಳ ಪ್ರಕಾರ, ಕ್ರೀಡಾ ಪತ್ರಕರ್ತರೊಬ್ಬರು ಮಾಡಿದ ಒಂದು ಪೋಸ್ಟ್ ಈ ಎಲ್ಲಾ ಗೊಂದಲಗಳಿಗೆ ಕಾರಣವಾಯಿತು. ಉತ್ತರ ಪ್ರದೇಶದ ಒಬ್ಬ ಮುಸ್ಲಿಂ ಕ್ರಿಕೆಟಿಗ ಮತ್ತು ಒಬ್ಬ ಹಿಂದೂ ನಿರೂಪಕಿ ಪ್ರೀತಿಸುತ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದರು. ಇದಾದ ಬೆನ್ನಲ್ಲೇ ಯುಪಿ ಟಿ20 ಲೀಗ್ ಸಮಯದಲ್ಲಿ ಇವರಿಬ್ಬರು ಹತ್ತಿರವಾದರು ಎಂಬ ಚರ್ಚೆ ಶುರುವಾಯಿತು. ಯೇಶಾ ಅಲ್ಲಿ ನಿರೂಪಕಿಯಾಗಿದ್ದರೆ, ಸಮೀರ್ ಕಾನ್ಪುರ ತಂಡದ ನಾಯಕರಾಗಿದ್ದರು.
ಆದರೆ ಗಮನಿಸಬೇಕಾದ ಅಂಶವೆಂದರೆ, ಸಮೀರ್ ರಿಜ್ವಿ ಆಗಲಿ ಅಥವಾ ಯೇಶಾ ಸಾಗರ್ ಆಗಲಿ ತಾವಿಬ್ಬರು ಪ್ರೀತಿಸುತ್ತಿದ್ದೇವೆ ಎಂದು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಈ ವಿವಾದ ಜೋರಾಗುತ್ತಿದ್ದಂತೆಯೇ, ಮುನ್ನೆಚ್ಚರಿಕೆ ಎಂಬಂತೆ ಯೇಶಾ ಸಾಗರ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸಮೀರ್ ರಿಜ್ವಿಯನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net