ಕಪ್ಪು ಹುಡುಗನಿಗೆ ಡಾರ್ಕ್​ ಕೇಕ್​ ಸರಿಯಾದ ಮ್ಯಾಚಿಂಗ್: ಕ್ರೀಡಾ ಲೋಕದ ಕಹಿ ಘಟನೆ ಬಿಚ್ಚಿಟ್ಟ ಲಕ್ಷ್ಮಣ್ ಶಿವರಾಮಕೃಷ್ಣನ್! Laxman Sivaramakrishnan

ಕಪ್ಪು ಹುಡುಗನಿಗೆ ಡಾರ್ಕ್​ ಕೇಕ್​ ಸರಿಯಾದ ಮ್ಯಾಚಿಂಗ್: ಕ್ರೀಡಾ ಲೋಕದ ಕಹಿ ಘಟನೆ ಬಿಚ್ಚಿಟ್ಟ ಲಕ್ಷ್ಮಣ್ ಶಿವರಾಮಕೃಷ್ಣನ್! Laxman Sivaramakrishnan
ಕಪ್ಪು ಹುಡುಗನಿಗೆ ಡಾರ್ಕ್​ ಕೇಕ್​ ಸರಿಯಾದ ಮ್ಯಾಚಿಂಗ್: ಕ್ರೀಡಾ ಲೋಕದ ಕಹಿ ಘಟನೆ ಬಿಚ್ಚಿಟ್ಟ ಲಕ್ಷ್ಮಣ್ ಶಿವರಾಮಕೃಷ್ಣನ್! Laxman Sivaramakrishnan
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ಲಕ್ಷ್ಮಣ್ ಶಿವರಾಮಕೃಷ್ಣನ್ ಬಿಸಿಸಿಐ ಕಾಮೆಂಟರಿ ಲೋಕಕ್ಕೆ ವಿದಾಯ ಹೇಳಿದರು
  • ಕ್ರಿಕೆಟ್​ ಲೋಕದಲ್ಲಿ ತಮಗಾದ ವರ್ಣ ಬೇಧದ ಬಗ್ಗೆ ಕಹಿ ನೆನಪುಗಳನ್ನು ಬಿಚ್ಚಿಟ್ಟ ಮಾಜಿ ಆಟಗಾರ
  • ಬಣ್ಣ ಕಂಡು ಸಿಬ್ಬಂದಿ ಎಂದುಕೊಂಡು ಶೂ ಕ್ಲೀನ್​ ಮಾಡು ಎಂದಿದ್ರು ಎಂದ ಲಕ್ಷ್ಮಣ್ ಶಿವರಾಮಕೃಷ್ಣನ್
Laxman Sivaramakrishnan : ಹೇ ಸುನ್ನಿ ನೀನು ಸರಿಯಾದ ಬಣ್ಣದ ಕೇಕ್​ ಅನ್ನೇ ಆರ್ಡರ್​ ಮಾಡಿದ್ದೀಯ. ಕಪ್ಪು ಬಣ್ಣದ ಹುಡುಗನಿಗೆ ಡಾರ್ಕ್​ ಚಾಕೋಲೇಟ್ ಸರಿಯಾದ ಮ್ಯಾಚಿಂಗ್​ ಎಂದು ಅಪಹಾಸ್ಯ ಮಾಡಿದ್ದರು ಎನ್ನುವ ಮೂಲಕ ಭಾರತ ತಂಡದ ಮಾಜಿ ಲೆಗ್​ ಸ್ಪಿನರ್ ಹಾಗೂ ಕಾಮೆಂಟೇಟರ್​​​ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು ಕ್ರೀಡಾ ಲೋಕದಲ್ಲಿ ಅನುಭವಿಸಿದ್ದ ಜನಾಂಗೀಯ ನಿಂದನೆ ಮತ್ತು ವರ್ಣಬೇಧ ನೀತಿಯನ್ನು ತೆರೆದಿಟ್ಟಿದ್ದಾರೆ.
ಪ್ರತಿಭಾನ್ವಿತ ಕ್ರಿಕೆಟ್​ ಆಟಗಾರ ಲಕ್ಷ್ಮಣ್ ಶಿವರಾಮಕೃಷ್ಣನ್ ಅವರು 2026 ಮಾರ್ಚ್ 20ರಂದು ಬಿಸಿಸಿಐ ಕಾಮೆಂಟರಿ ಹುದ್ದೆಗೆ ಗುಡ್​ಬೈ ಹೇಳಿದ್ದರು. ಇದಕ್ಕೆ ಕಾರಣ ಏನು ಎಂಬುದನ್ನು ನೇರವಾಗಿಯೇ ತಿಳಿಸಿದ್ದರು. ಲಕ್ಷ್ಮಣ್​ ಅವರು ಹದಿಹರೆಯದಲ್ಲಿ ಮೂಡಿಸಿದ್ದ ಭರವಸೆಯನ್ನು ಇಂದು ಪರಿಪೂರ್ಣ ಮಾಡಲಾಗುತ್ತಿಲ್ಲ. ಕಾರಣ ಅವರ ಮೇಲಾಗಿದ್ದ ವರ್ಣ ಭೇದ ಬಿಟ್ಟು ಮತ್ತೇನು ಇಲ್ಲ. ದಿ ಇಂಡಿಯನ್​ ಎಕ್ಸ್​ಪ್ರೆಸ್​ಗೆ ಕೊಟ್ಟ ಸಂದರ್ಶನವೇ ಇದಕ್ಕೆ ಉದಾಹರಣೆ.
1965ರಲ್ಲಿ ಚೈನ್ನೈನಲ್ಲಿ ಜನಿಸಿದ ಲಕ್ಷ್ಮಣ್ ಶಿವರಾಮಕೃಷ್ಣನ್, ಸಲೀಮ್​ ಮಲಿಕ್​ ಮತ್ತು ಇಮ್ರಾನ್​ ಖಾನ್​ರಂತಹ ಘಟಾನುಘಟಿ ಬ್ಯಾಟರ್​ಗಳನ್ನೇ ಸ್ಪಿನ್​ ಜಾಲದಲ್ಲಿ ಸಿಲುಕಿಸಿ ಬೆರಗಾಗುವಂತೆ ಮಾಡಿದ್ದ ಲೆಗ್​ ಸ್ಪಿನ್ನರ್. 19ನೇ ವಯಸ್ಸಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 23 ವಿಕೆಟ್​ ಪಡೆದು ಖ್ಯಾತಿ ಗಳಿಸಿದ್ದರು. ​ ಲಕ್ಷ್ಮಣ್ ಶಿವರಾಮಕೃಷ್ಣನ್ ದಿ ಇಂಡಿಯನ್​ ಎಕ್ಸ್​ಪ್ರೆಸ್​ಗೆ ಕೊಟ್ಟಂತಹ ಸಂದರ್ಶನದಲ್ಲಿ ತಮ್ಮ ಮೇಲಾದ ವರ್ಣಬೇಧ ನೀತಿ ಮತ್ತು ಜನಾಂಗೀಯ ನಿಂದನೆ ಬಗ್ಗೆ ಹಂಚಿಕೊಂಡಿದ್ದಾರೆ.

ಸಂದರ್ಶನದಲ್ಲಿ ಏನಿದೆ?

Laxman Sivaramakrishnan ಅವರು ಮೊದಲು ಜನಾಂಗೀಯ ಮತ್ತು ವರ್ಣಬೇಧ ಅನುಭವಿಸಿದ್ದು ಅವರು 14 ವರ್ಷವಿದ್ದಾಗ. ಚೆಪಾಕ್ ಕ್ರೀಡಾಂಗಣದಲ್ಲಿ ಭಾರತದ ಕ್ರಿಕೆಟ್​ ತಂಡ ಆಯೋಜಿಸಿದ್ದ ಕ್ಯಾಂಪ್​ನಲ್ಲಿ ನೆಟ್ ಬೌಲರ್ ಆಗಿ ಅವರು ಭಾಗವಹಿಸಿದ್ದರು. ಶಾಲೆ ಮುಗಿಸಿ ಬಂದಿದ್ದ ಅವರು ಕೋಣೆಯಲ್ಲಿ ಡ್ರೆಸ್​ ಬದಲಿಸಲು ತೆರಳಿದಾಗ ಅಲ್ಲಿದ್ದ ಹಿರಿಯ ಬ್ಯಾಟರ್​ ಅವರಿಗೆ ಶೂ ಒರೆಸಲು ಹೇಳಿದ್ದರಂತೆ. ಈ ವೇಳೆ ಕಪ್ಪು-ಬಿಳುಪಿನ ತಾರತಮ್ಯ ಅರಿಯದ ಅವರು, ಅದು ನನ್ನ ಕೆಲಸವಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಅಲ್ಲಿಂದ ಹೊರನಡೆದಿದ್ದರಂತೆ. ಅವ್ರು ಅಂದು ನನ್ನ ಬಣ್ಣ ಕಂಡು ಸಿಬ್ಬಂದಿ ಎಂದು ಗ್ರಹಿಸಿ ಆ ಕೆಲಸ ಹೇಳಿದ್ದರು.

ಚರ್ಮಕ್ಕೂ ಕೇಕಿನ ಬಣ್ಣಕ್ಕೂ ಹೋಲಿಕೆ ಮಾಡಿದ್ರು

ಮುಂದುವರೆದು, ನಾನು 17ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಕಾಲದಲ್ಲಿ ನನ್ನ ಬಣ್ಣ ಮತ್ತು ಕೇಕಿಗೆ ಹೋಲಿಸಿ ಅಪಹಾಸ್ಯ ಮಾಡಿದ್ದರು. ಹಿರಿಯ ಆಟಗಾರರೊಬ್ಬರು ಹುಡುಗನ ಬಣ್ಣಕ್ಕೂ ಡಾರ್ಕ್​ ಚಾಕೋಲೇಟ್​ ಕೇಕಿಗೂ ಒಳ್ಳೆಯ ಸಂಬಂಧ. "ಹೇ ಸುನ್ನಿ ಸರಿಯಾದ ಕೇಕ್​ನ್ನೇ ಆರ್ಡರ್​ ಮಾಡಿದ್ದೀಯಾ" ಎಂದು ಸುನೀಲ್​ ಸುನಿಲ್ ಗವಾಸ್ಕರ್ ಅವರಿಗೆ ಹೇಳಿದ್ದರು. ಆಗ ನಾನು ಕೇಕ್ ಕತ್ತರಿಸೋದೆ ಇಲ್ಲ ಎಂದು ನಾನು ಅಳಲು ಶುರು ಮಾಡಿದೆ ಆಗ ಸುನಿಲ್ ಗವಾಸ್ಕರ್ ಅವರು ನನ್ನನ್ನು ಸಮಾಧಾನಿಸಲು ಒದ್ದಾಡಿದರು. ನಾನು ಅವರ ಒತ್ತಾಯಕ್ಕೆ ಅಳುತ್ತಲೇ ಕೇಕ್​ ಕತ್ತರಿಸಿದೆ ಎಂದು ನಡೆದ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ತಮಿಳುನಾಡಿನವ್ರೇ ನನ್ನನ್ನ ಕರುಪ ಅಂತಿದ್ರು?

ತಮಿಳುನಾಡಿಲ್ಲಿಯೂ ನನಗೆ ಅವಮಾನ ತಪ್ಪಿರಲಿಲ್ಲ. ನನ್ನ ನಾಡಿನವರೇ ನನಗೆ ಕರುಪ ಎಂದು ನನ್ನ ಬಣ್ಣದ ಕಾಮೆಂಟ್​ ಮಾಡಿ ಅವಹೇಳನ ಮಾಡುತ್ತಿದ್ದರು. ಮುಂಬೈ, ಚಂಡೀಗಢ, ಜಲಂಧರ್​ನಲ್ಲಿ ಬೌಂಡರಿ ಬಳಿ ನಾನು ಫೀಲ್ಡಿಂಗ್​ ಮಾಡಲು ನಿಂತರೆ, ಪ್ರೇಕ್ಷಕರು ನನ್ನನ್ನು ಅವಮಾನಿಸುತ್ತಿದ್ದರು. ಹೇ ಕರಿಯಾ ಏನಾಯಿತು ನಿನಗೆ ಎಂದು ಜೋರಾಗಿ ಅರಚುತ್ತಾ ನನ್ನನ್ನು ಹೀಯಾಳಿಸುತ್ತಿದ್ದರು ಎಂದಿದ್ದಾರೆ.

ಯಾರ್ಯಾರ ಮೇಲಾಗಿತ್ತು ವರ್ಣಬೇಧ ಮತ್ತು ಜನಾಂಗೀಯ ತಾರತಮ್ಯ?

ಕ್ರೀಡಾ ಲೋಕದಲ್ಲಿ ವರ್ಣಬೇಧ ಅಥವಾ ಜನಾಂಗೀಯ ತಾರತಮ್ಯ ಅನುಭವಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ತಮಿಳುನಾಡಿನ ಅಭಿನವ್​ ಮುಕುಂದ್​ ಹಾಗೂ ಮಾಜಿ ವೇಗಿ ಇರ್ಫಾನ್​ ಪಠಾಣ್​ ಅವರಿಗೂ ಕೂಡ ಬಣ್ಣದ ಬಗ್ಗೆ ಅವಮಾನ ಮಾಡಲಾಗಿತ್ತು. ಬಣ್ಣದ ಆಧಾರದ ಮೇಲೆ ಟೀಕೆಗಳನ್ನು ಅನುಭವಿಸಿದ್ದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net