Vaibhav Suryavanshi : ವೈಭವ್ ಸೂರ್ಯವಂಶಿ, ಟೀಮ್ ಇಂಡಿಯಾದ ಭವಿಷ್ಯದ ಭರವಸೆ ಆಟಗಾರ ಅನ್ನೋದು ಎಲ್ಲರಿಗೂ ತಿಳಿದಿದೆ. ಮೈದಾನದಲ್ಲಿ ಅಬ್ಬರಿಸಿ ಬೊಬ್ಬಿರಿಯುವ ಈ ಯುವ ಪ್ರತಿಭೆ, ಕೇವಲ 14ನೇ ವಯಸ್ಸಿನಲ್ಲಿ ದಾಖಲೆಗಳ ಸರಮಾಲೆಯನ್ನೇ ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳುತ್ತಿದ್ದಾರೆ. ನಿನ್ನೆಯವರೆಗೂ ಮೈದಾನದಲ್ಲಿ ಬೌಂಡರಿ ಮತ್ತು ಸಿಕ್ಸರ್ಗಳ ಸುರಿಮಳೆಗೈದು ಬೌಲರ್ಗಳ ಬೆವರಿಳಿಸುತ್ತಿದ್ದ ವೈಭವ್, ಇದೀಗ ತರಗತಿಯಲ್ಲಿ ಕುಳಿತು ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.