ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ದಿನದಂದು ಮೋಡ ಕವಿದ ವಾತಾವರಣ ಮತ್ತು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಭಾರೀ ಮಳೆಯಾದರೆ, ಪಂದ್ಯ ರದ್ದಾಗುವ ಸಾಧ್ಯತೆಯಿದೆ. ಸಾಧಾರಣ ಮಳೆ ಬಂದು ಅಡ್ಡಿಯಾದರೆ, ಕಡಿಮೆ ಓವರ್ಗಳೊಂದಿಗೆ ಪಂದ್ಯವನ್ನು ಆಡಲಾಗುತ್ತದೆ. ಸಂಪೂರ್ಣ ಪಂದ್ಯ ರದ್ದಾದರೆ, ಎರಡೂ ತಂಡಗಳಿಗೆ ತಲಾ ಒಂದು ಅಂಕ ಸಿಗುತ್ತದೆ. ಇಲ್ಲಿ ಇನ್ನೊಂದು ಸಂಗತಿ ಏನೆಂದರೆ, ಪಾಕಿಸ್ತಾನ ಮತ್ತು ಭಾರತ ಪಂದ್ಯವು ಗ್ರೂಪ್ ಹಂತದ ಪಂದ್ಯವಾಗಿರುವುದರಿಂದ ಪಂದ್ಯ ರದ್ದಾದರೂ ಯಾವುದೇ ಮೀಸಲು ದಿನಗಳು ಇರುವುದಿಲ್ಲ. ಪ್ರತಿ ತಂಡಕ್ಕೂ ಒಂದು ಪಾಯಿಂಟ್ ನೀಡಲಾಗುತ್ತದೆ, (ಏಜೆನ್ಸೀಸ್).