ಹೌದು, ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮ ತೋರಿಸಿದ ಬೆನ್ನಲ್ಲೇ ವೈಭವ್ ಸೂರ್ಯವಂಶಿ ಅವರ ಬ್ರ್ಯಾಂಡ್ ವ್ಯಾಲ್ಯೂ ರಾಕೆಟ್ ವೇಗದಲ್ಲಿ ಜಿಗಿದಿದೆ. ದೇಶದ ಪ್ರಮುಖ ಟೈರ್ ತಯಾರಕ ಕಂಪನಿಗಳು ಸೇರಿದಂತೆ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಈ ಯುವ ಆಟಗಾರನ ಬ್ಯಾಟ್ ಪ್ರಾಯೋಜಕತ್ವ (Vaibhav Suryavanshi Bat Sponsorship) ಪಡೆಯಲು ಮುಗಿಬಿದ್ದಿವೆ. ಸದ್ಯ ಸಿಗುತ್ತಿರುವ ಆಫರ್‌ಗಳನ್ನು ನೋಡಿದರೆ ವಿರಾಟ್ ಕೊಹ್ಲಿ, ಶುಭ್‌ಮನ್ ಗಿಲ್ ಅವರಂತಹ ಸೂಪರ್‌ಸ್ಟಾರ್‌ಗಳ ದಾಖಲೆಯೇ ಬ್ರೇಕ್ ಆಗಲಿವೆ ಎಂಬ ಸುದ್ದಿ ಹರಡಿದೆ.