ಮೊಹಮ್ಮದ್​ ಶಮಿ ವಿಚಾರದಲ್ಲಿ ಬಿಸಿಸಿಐ ಯೂ ಟರ್ನ್: ಇದು ನಡೆದ್ರೆ ಗಂಭೀರ್​ಗೆ ಭಾರಿ ಮುಖಭಂಗ​​ ಗ್ಯಾರಂಟಿ! Mohammed Shami

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮತ್ತು ಮುಖ್ಯ ಕೋಚ್​ ಗೌತಮ್​ ಗಂಭೀರ್​
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮತ್ತು ಮುಖ್ಯ ಕೋಚ್​ ಗೌತಮ್​ ಗಂಭೀರ್​
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೊಸ ಮಾರ್ಗ ಆರಿಸಿಕೊಂಡಿರುವಂತೆ ಕಾಣುತ್ತಿದೆ
  • ಹಳೆಯ ಆಟಗಾರರಿಗೆ ಮತ್ತೆ ಅವಕಾಶಗಳನ್ನು ನೀಡಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ
  • ತಂಡದಿಂದ ದೂರವಿದ್ದ ಎಲ್ಲ ಆಟಗಾರರನ್ನು ಮರಳಿ ಕರೆತರಲು ಬಿಸಿಸಿಐ ಪ್ಲಾನ್​ ಮಾಡಿದೆ
  • ಮೊಹಮ್ಮದ್ ಶಮಿ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಬಿಸಿಸಿಐ ಮುಂದಾಗಿದೆ ಎಂಬ ಸುದ್ದಿ ಬಂದಿದೆ
Mohammed Shami : ಹೊಸ ವರ್ಷಕ್ಕೂ ಮುನ್ನವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹೊಸ ಮಾರ್ಗವನ್ನು ಆರಿಸಿಕೊಂಡಿರುವಂತೆ ಕಾಣುತ್ತಿದೆ. ಏಕೆಂದರೆ, ಹಳೆಯ ಆಟಗಾರರಿಗೆ ಮತ್ತೆ ಅವಕಾಶಗಳನ್ನು ನೀಡಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಮುಖ್ಯ ಕೋಚ್​ ಗೌತಮ್ ಗಂಭೀರ್ ಕಾರಣದಿಂದಾಗಿ ತಂಡದಿಂದ ದೂರವಿದ್ದ ಎಲ್ಲ ಆಟಗಾರರನ್ನು ಮರಳಿ ಕರೆತರಲು ಬಿಸಿಸಿಐ ಪ್ಲಾನ್​ ಮಾಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿವೆ.
ಸದ್ಯದ ಮಾಹಿತಿ ಪ್ರಕಾರ, ದೀರ್ಘಕಾಲದವರೆಗೆ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದ ಮೊಹಮ್ಮದ್ ಶಮಿ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಬಿಸಿಸಿಐ ಮುಂದಾಗಿದೆ ಎಂಬ ಸುದ್ದಿ ಬಂದಿದೆ. ಒಂದು ವೇಳೆ ಇದು ನಡೆದಿದ್ದೇ ಆದಲ್ಲಿ ಗಂಭೀರ್‌ಗೆ ಭಾರಿ ಮುಖಭಂಗ ಆಗುವ ಸಾಧ್ಯತೆಯಿದೆ.
ಅಂದಹಾಗೆ, ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಆಸ್ಟ್ರೇಲಿಯಾದ ಬೌಲರ್‌ಗಳಂತೆ ವೇಗವಾಗಿ ಹಾಗೂ ಕರಾರುವೊಕ್ಕಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ, ತಂಡಕ್ಕೆ ಅಗತ್ಯವಿದ್ದ ಸಮಯದಲ್ಲಿ, ನಿರ್ಣಾಯಕ ವಿಕೆಟ್ ಕಬಳಿಸುವಲ್ಲಿಯೂ ಶಮಿ ನಿಪುಣರು. ಅದಕ್ಕೆ ಉತ್ತಮ ಉದಾಹರಣೆ 2023ರ ಏಕದಿನ ವಿಶ್ವಕಪ್‌. ಈ ಮೆಗಾ ಟೂರ್ನಿಯಲ್ಲಿ ಶಮಿ ಅವರು ಅತ್ಯಧಿಕ ವಿಕೆಟ್​ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
ವಿಶ್ವಕಪ್​ ಬಳಿಕ ಮೊಹಮ್ಮದ್ ಶಮಿ ಗಾಯಗೊಂಡು ತಂಡವನ್ನು ತೊರೆದರು. ಅಂದಿನಿಂದ, ಬಿಸಿಸಿಐ ಅವರಿಗೆ ಸರಿಯಾದ ಅವಕಾಶಗಳನ್ನು ನೀಡುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಲೇ ಇದೆ. ಇದೀಗ ಬಿಸಿಸಿಐ, ಗಂಭೀರ್ ಅಧಿಕಾರವನ್ನು ಮೊಟಕುಗೊಳಿಸಿ ಮೊಹಮ್ಮದ್ ಶಮಿಗೆ ಅವಕಾಶ ನೀಡುವ ಬಗ್ಗೆ ಚಿಂತಿಸುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.
ಬಹಳ ಸಮಯದಿಂದ ತಂಡದಿಂದ ಹೊರಗುಳಿದಿದ್ದ ಶಮಿ ಅವರ ಮೇಲೆ ಬಿಸಿಸಿಐ ಇತ್ತೀಚೆಗೆ ಯು-ಟರ್ನ್ ತೆಗೆದುಕೊಂಡಂತೆ ತೋರುತ್ತಿದೆ. ಆಯ್ಕೆದಾರರು 2027ರ ಏಕದಿನ ವಿಶ್ವಕಪ್‌ಗೆ ಶಮಿ ಅವರನ್ನು ಪರಿಗಣಿಸುತ್ತಿದ್ದಾರೆ ಎಂದು ವರದಿಯಾಗಿದೆ. ದೇಶಕ್ಕಾಗಿ ಇದುವರೆಗೂ ಶಮಿ ಅವರು ನೀಡಿದ ಪ್ರದರ್ಶನ ಅದ್ಭುತವಾಗಿದೆ. ಇದನ್ನು ಪರಿಗಣಿಸಿರುವ ಬಿಸಿಸಿಐ ಮತ್ತೆ ಶಮಿಗೆ ಮಣೆ ಹಾಕಲಿದೆ ಎಂದು ಬಿಸಿಸಿಐ ಮೂಲಗಳು ಹೇಳುತ್ತಿವೆ ಎಂಬ ವರದಿಗಳಿವೆ.
ನ್ಯೂಜಿಲೆಂಡ್ ಸರಣಿಗೆ ಶಮಿ ಅವರನ್ನು ಆಯ್ಕೆ ಮಾಡಬಹುದು ಎಂದು ಹೇಳಲಾಗುತ್ತಿದೆ. ಶಮಿಯನ್ನು ಏಕೆ ಆಯ್ಕೆ ಮಾಡುತ್ತಿಲ್ಲ ಎಂದು ಗೌತಮ್ ಗಂಭೀರ್ ಮತ್ತು ಅಗರ್ಕರ್ ಜತೆ ಬಿಸಿಸಿಐ ಸಾಕಷ್ಟು ಬಾರಿ ವಾದಿಸಿದ್ದು, ಅಂತಿಮವಾಗಿ ಅವರಿಬ್ಬರ ಅಭಿಪ್ರಾಯವನ್ನು ಪಕ್ಕಕ್ಕಿಟ್ಟು, ಶಮಿ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಚಿಂತಿಸಿದೆ ಎಂದು ಹೇಳಲಾಗುತ್ತಿದೆ.
ಅಂದಹಾಗೆ, ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಇತ್ತೀಚಿನ ದಿನಗಳಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಬಂಗಾಳ ತಂಡವನ್ನು ಪ್ರತಿನಿಧಿಸುವ ಮೊಹಮ್ಮದ್ ಶಮಿ ರಾಷ್ಟ್ರೀಯ ತಂಡಕ್ಕೆ ಬರಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾರೆ. ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಇದುವರೆಗೆ 94 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 339 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಪೈಕಿ 79 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದು ಅವರ ಅತ್ಯುತ್ತಮ ಸಾಧನೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನವೂ ಅತ್ಯುತ್ತಮವಾಗಿದೆ. ಐಪಿಎಲ್ 2025ರಲ್ಲಿ ಸನ್‌ರೈಸರ್ಸ್ ತಂಡಕ್ಕಾಗಿ ಆಡಿದ್ದ ಮೊಹಮ್ಮದ್ ಶಮಿ ಮುಂದಿನ ವರ್ಷ ಲಖನೌ ಪರ ಆಡಲಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net