ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧ್ಯಕ್ಷರಾಗಲಿರುವ ಆರ್ಯಮಾನ್ ಬಿರ್ಲಾ, ದೊಡ್ಡ ಉದ್ಯಮಿ ಮಾತ್ರವಲ್ಲದೆ ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡದ ಸದಸ್ಯರೂ ಆಗಿದ್ದಾರೆ. ಆರ್ಯಮಾನ್ ಅವರು ಓರ್ವ ಕ್ರಿಕೆಟಿಗ ಕೂಡ ಹೌದು. ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡಕ್ಕಾಗಿ ಆಡಿದ್ದ ಆರ್ಯಮನ್ ಬಿರ್ಲಾ, ಈ ಹಿಂದೆ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರ ಆರ್ಯಮನ್ ಬಿರ್ಲಾ ಈಗ ಉದ್ಯಮದಲ್ಲಿ ಸಂಪೂರ್ಣ ತೊಡಗಿಕೊಂಡಿದ್ದಾರೆ. ಅವರು ಆದಿತ್ಯ ಬಿರ್ಲಾ ಗ್ರೂಪ್‌ನಲ್ಲಿ ಸಿಂಡಾಲ್ಕೊ ಮತ್ತು ಗ್ರಾಸಿಂಗ್‌ನಂತಹ ದೊಡ್ಡ ಕಂಪನಿಗಳ ನಿರ್ದೇಶಕರೂ ಆಗಿದ್ದಾರೆ. ಈಗ, ಆರ್ಯಮನ್ ಬಿರ್ಲಾ ಬೆಂಗಳೂರು ತಂಡವನ್ನು ಖರೀದಿಸಿದ ನಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆರ್ಯಮನ್ ಬಿರ್ಲಾ ಅವರು 1,75,000 ಕೋಟಿ ರೂ.ಗಳ ಉತ್ತರಾಧಿಕಾರಿ ಎಂದು ಹೇಳಲಾಗುತ್ತದೆ.