ಹೌದು, ಮೊನಾಲಿಸಾ, ಇತ್ತೀಚೆಗೆ ಉತ್ತರ ಪ್ರದೇಶ ಮೂಲದ ಫರ್ಮಾನ್ ಖಾನ್ ಎಂಬ ಯುವಕನನ್ನು ಮದುವೆಯಾಗಿದ್ದಾಳೆ. ಇಬ್ಬರದು ಪ್ರೇಮ ವಿವಾಹ. ಕೇರಳದಲ್ಲಿ ಮದುವೆಯಾದರು. ಇದೊಂದು ಅಂತರ್ಧಮೀಯ ಮದುವೆಯಾಗಿದ್ದು, ಲವ್ ಜಿಹಾದ್ ಎಂಬ ಆರೋಪದಿಂದಾಗಿ ವಿವಾದಕ್ಕೆ ಗುರಿಯಾಯಿತು. ಆದರೆ, ತಾನು ಇಷ್ಟಪಟ್ಟು ಮದುವೆಯಾಗಿದ್ದೇನೆ ಎಂದು ಮೊನಾಲಿಸಾ ಹೇಳಿಕೆ ನೀಡಿದ ಬಳಿಕ ವಿವಾದ ತಣ್ಣಾಗಾಗಿದೆ. ಇದರ ನಡುವೆ ಮೊನಾಲಿಸಾ ಅವರು ನಿರ್ದೇಶಕ ಸನೋಜ್ ಮಿಶ್ರಾ ಹಾಗೂ ತಮ್ಮ ಕುಟುಂಬದ ವಿರುದ್ಧ ಒಂದು ಗಂಭೀರ ಆರೋಪ ಮಾಡಿದ್ದಾರೆ.