ಎಷ್ಟೇ ದಾಖಲೆಗಳನ್ನು ಬರೆದರೂ ಈ ಒಂದು ದಾಖಲೆ ಮುರಿಯಲು ನನ್ನಿಂದ ಅಸಾಧ್ಯ: ಅಭಿಷೇಕ್ ಅಚ್ಚರಿ ಹೇಳಿಕೆ! Abhishek Sharma
ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ದಾಖಲೆ
ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಚಂಡಮಾರುತವನ್ನೇ ಸೃಷ್ಟಿಸಿದ ಅಭಿಷೇಕ್
ಅವರು 7 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 68 ರನ್ ಗಳಿಸಿ ಅಜೇಯರಾಗಿ ಉಳಿದ ಎಡಗೈ ದಾಂಡಿಗ
Abhishek Sharma : ಗುವಾಹಟಿಯಲ್ಲಿ ಭಾನುವಾರ (ಜ.25) ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಚಂಡಮಾರುತವನ್ನೇ ಸೃಷ್ಟಿ ಮಾಡಿದರು. ಕೇಲವ 20 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 68 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಪಂದ್ಯದಲ್ಲಿ ಅಭಿಷೇಕ್, ಕೇವಲ 14 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತಕ್ಕಾಗಿ ಅತಿ ವೇಗದ ಅರ್ಧಶತಕ ಗಳಿಸಿದ ಎರಡನೇ ಆಟಗಾರ ಎಂಬ ದಾಖಲೆಯನ್ನು ಬರೆದರು.
ಅಂದಹಾಗೆ, ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಆಟಗಾರ ಯುವರಾಜ್ ಸಿಂಗ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಅತಿ ವೇಗದ ಅರ್ಧಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ನಿನ್ನೆ ಪಂದ್ಯದ ಬಳಿಕ ಯುವರಾಜ್ ಸಿಂಗ್ ಅವರ ದಾಖಲೆಯ ಬಗ್ಗೆ ಮಾತನಾಡಿದ ಅಭಿಷೇಕ್, ಆ ದಾಖಲೆಯನ್ನು ಮುರಿಯುವುದು ಬಹುತೇಕ ಅಸಾಧ್ಯ ಎಂದರು. ಆದರೆ, ಭವಿಷ್ಯದಲ್ಲಿ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಅಂತಾನೂ ಹೇಳಿದರು. ತಂಡವು ನನ್ನಿಂದ ವಿನಾಶಕಾರಿ ಬ್ಯಾಟಿಂಗ್ ಅನ್ನು ನಿರೀಕ್ಷಿಸುತ್ತದೆ. ಆದರೆ, ಪ್ರತಿ ಬಾರಿಯೂ ಈ ರೀತಿ ಆಡಲು ಸಾಧ್ಯವಿಲ್ಲ. ಆಕ್ರಮಣಕಾರಿಯಾಗಿ ಆಡುವುದು ಮಾನಸಿಕ ಸ್ಥಿತಿ ಮತ್ತು ತಂಡದ ಆಟಗಾರರಿಂದ ಪಡೆಯುವ ಬೆಂಬಲವನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ ಎಂದರು.
ಈ ಸರಣಿಯಲ್ಲಿ ಉಳಿದಿರುವ ಪಂದ್ಯಗಳು ಆಸಕ್ತಿದಾಯಕವಾಗಿರುತ್ತವೆ. ಪಿಚ್ ಸ್ಥಿತಿಯನ್ನು ಆಧರಿಸಿ ಶಾಟ್‌ಗಳನ್ನು ಆಡುತ್ತೇನೆ. ಲೆಗ್ ಸೈಡ್‌ನಲ್ಲಿ ಮಾತ್ರವಲ್ಲದೆ, ಅವಕಾಶ ಸಿಕ್ಕಾಗ ಆಫ್-ಸೈಡ್‌ನಲ್ಲಿಯೂ ಶಾಟ್‌ಗಳನ್ನು ಆಡುತ್ತೇನೆ ಎಂದು ಅಭಿಷೇಕ್ ಹೇಳಿದರು.
ಪಂದ್ಯದ ವಿಚಾರಕ್ಕೆ ಬರುವುದಾದರೆ, ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ಗ್ಲೆನ್ ಫಿಲಿಪ್ಸ್ (48) ಮತ್ತು ಮಾರ್ಕ್ ಚಾಪ್ಮನ್ (32) ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 153 ರನ್ ಗಳಿಸಿತು. ಟೀಮ್ ಇಂಡಿಯಾ ಪರ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್, ರವಿ ಬಿಷ್ಣೋಯ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಮತ್ತು ಹರ್ಷಿತ್ ರಾಣಾ ಒಂದು ವಿಕೆಟ್ ಪಡೆದರು.
ಆ ನಂತರ, ಅಭಿಷೇಕ್ ಶರ್ಮಾ (ಅಜೇಯ 68 ರನ್, 20 ಎಸೆತ, 7 ಬೌಂಡರಿ, 5 ಸಿಕ್ಸರ್) ಮತ್ತು ಸೂರ್ಯಕುಮಾರ್ (ಅಜೇಯ 57 ರನ್, 26 ಎಸೆತ, 6 ಬೌಂಡರಿ, 3 ಸಿಕ್ಸರ್) ವಿಧ್ವಂಸಕ ಇನ್ನಿಂಗ್ಸ್ ಆಡಿದರು. ಭಾರತ ಕೇವಲ 10 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 154 ರನ್‌ಗಳ ಗುರಿಯನ್ನು ತಲುಪಿತು, (ಏಜೆನ್ಸೀಸ್).