ಭಾರತದ ವಿರುದ್ಧ ಹೀನಾಯ ಸೋಲು ಬೇಡ ಅಂದ್ರೆ ಈ ಒಂದು ಕೆಲ್ಸ ಮಾಡಿ... ಪಾಕ್​ಗೆ ಕ್ರಿಸ್​ ಶ್ರೀಕಾಂತ್​ ಟಿಪ್ಸ್​! Kris Srikkanth

ಪಾಕ್​ಗೆ ಕ್ರಿಸ್​ ಶ್ರೀಕಾಂತ್​ ಟಿಪ್ಸ್
ಪಾಕ್​ಗೆ ಕ್ರಿಸ್​ ಶ್ರೀಕಾಂತ್​ ಟಿಪ್ಸ್
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾ ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದೆ
  • ನ್ಯೂಜಿಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಭಾರತ, ಅಬ್ಬರದ ಪ್ರದರ್ಶನ ನೀಡುತ್ತಿದೆ
  • 200 ರನ್ ಟಾರ್ಗೆಟ್​ ಅನ್ನು ಕೇವಲ 15 ಓವರ್​ಗಳಲ್ಲಿ ಟೀಮ್​ ಇಂಡಿಯಾ ನೀರು ಕುಡಿದಂತೆ ಮುಟ್ಟುತ್ತಿದೆ
Kris Srikkanth: ಟೀಮ್​ ಇಂಡಿಯಾ ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಸದ್ಯ ನಡೆಯುತ್ತಿರುವ ಪ್ರವಾಸಿ ನ್ಯೂಜಿಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಭಾರತ, ಅಬ್ಬರದ ಪ್ರದರ್ಶನ ನೀಡುತ್ತಿದೆ. 200 ರನ್ ಟಾರ್ಗೆಟ್​ ಅನ್ನು ಕೇವಲ 15 ಓವರ್​ಗಳಲ್ಲಿ ಟೀಮ್​ ಇಂಡಿಯಾ ನೀರು ಕುಡಿದಂತೆ ಮುಟ್ಟುತ್ತಿದೆ. ಹೀಗಾಗಿ, ಫೆಬ್ರವರಿ 7 ರಿಂದ ಪ್ರಾರಂಭವಾಗುವ ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾವನ್ನು ಎದುರಿಸಲು ಎಲ್ಲ ತಂಡಗಳು ಭಯಪಡುತ್ತಿವೆ ಎಂದು ಟೀಮ್​ ಇಂಡಿಯಾ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ಹೇಳಿದ್ದಾರೆ.
ಬಾಂಗ್ಲಾದೇಶವನ್ನು ಬೆಂಬಲಿಸಿರುವ ಪಾಕಿಸ್ತಾನ, ಟಿ20 ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ. ಬಾಂಗ್ಲಾ ತಂಡವನ್ನು ಟಿ20 ವಿಶ್ವಕಪ್‌ನಿಂದ ಹೊರಗಿಟ್ಟಿರುವ ಐಸಿಸಿ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ತಂಡ ಟಿ20 ವಿಶ್ವಕಪ್​ ಪಂದ್ಯಾವಳಿಯಲ್ಲಿ ಆಡುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತದೆ. ಸರ್ಕಾರ ಹೇಳಿದಂತೆ ನಾವು ಕಾರ್ಯನಿರ್ವಹಿಸುತ್ತೇವೆ ಎಂದಿದ್ದಾರೆ.
ನಖ್ವಿಯವರ ಹೇಳಿಕೆಯನ್ನು ಟೀಕಿಸಿರುವ ಕ್ರಿಸ್​ ಶ್ರೀಕಾಂತ್, ಟಿ20 ವಿಶ್ವಕಪ್‌ನಲ್ಲಿ ಆಡದೇ ಇರುವುದು ಪಾಕಿಸ್ತಾನಕ್ಕೆ ಒಳ್ಳೆಯದು ಎಂದಿದ್ದಾರೆ. ಒಂದು ವೇಳೆ ಆಡಿದರೆ ಟೀಮ್ ಇಂಡಿಯಾ ವಿರುದ್ಧ ಹೀನಾಯ ಸೋಲು ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಎರಡನೇ ಟಿ20 ಪಂದ್ಯದಲ್ಲಿ ಭಾರತ ಕೇವಲ 15 ಓವರ್‌ಗಳಲ್ಲಿ 209 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಮೂರನೇ ಟಿ20ಯಲ್ಲಿ 10 ಓವರ್‌ಗಳಲ್ಲಿ 150 ರನ್‌ಗಳ ಗುರಿಯನ್ನು ಬೆನ್ನಟ್ಟಿತು. ಭಾರತ ಇಷ್ಟು ಉತ್ತಮ ಫಾರ್ಮ್‌ನಲ್ಲಿರುವುದನ್ನು ನೋಡಿ, ಅನೇಕ ತಂಡಗಳು ಮೆಗಾ ಟೂರ್ನಮೆಂಟ್‌ಗೆ ಬರಲು ಹೆದರುತ್ತಿವೆ. ಕಪ್ ಅನ್ನು ನೀವೇ ಇಟ್ಟುಕೊಳ್ಳಿ ಎನ್ನುತ್ತಿವೆ ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
2026ರ ಟಿ20 ವಿಶ್ವಕಪ್‌ನಲ್ಲಿ ಕೊಲಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯದ ಕುರಿತು ಮಾತನಾಡಿದ ಅವರು, ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರೀ ಸೋಲನ್ನು ಅನುಭವಿಸಲಿದೆ ಎಂದು ಹೇಳಿದರು. ಆಗ ತಂಡವು ತನ್ನ ಎಲ್ಲಾ ವೈಭವವನ್ನು ಕಳೆದುಕೊಳ್ಳುತ್ತದೆ. ಅದರ ಬದಲು, ಅವರು ಪಂದ್ಯಾವಳಿಯನ್ನು ಆಡದಿರಲು ಒಂದು ನೆಪ ಕಂಡುಕೊಳ್ಳಬೇಕು ಎಂದರು.
ಟೀಮ್ ಇಂಡಿಯಾ ಬಗ್ಗೆ ಮಾತನಾಡಿದ ಅವರು, ಟಿ20 ಕ್ರಿಕೆಟ್‌ನಲ್ಲಿ ಈ ರೀತಿಯ ಸ್ಫೋಟಕ ಬ್ಯಾಟಿಂಗ್​ ತಂಡವನ್ನು ನಾನು ಎಂದಿಗೂ ನೋಡಿಲ್ಲ ಎಂದು ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net