ಅಭಿಷೇಕ್ ಮಿಂಚಿನ ಶತಕದ ಆರ್ಭಟಕ್ಕೆ ನಲುಗಿದ ನ್ಯೂಜಿಲೆಂಡ್​: ಭಾರತಕ್ಕೆ ರೋಚಕ ಜಯ, ಸರಣಿ ಗೆಲುವು! Abhishek Sharma

Abhishek Sharma
ಟೀಮ್​ ಇಂಡಿಯಾ ಟಿ20 ಆಟಗಾರ ಅಭಿಷೇಕ್​ ಶರ್ಮಾ
Published on: 

ವೆಲ್ಲಿಂಗ್ಟನ್​: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟೀಮ್​ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 3-0 ಅಂತರದ ಮುನ್ನಡೆ ಸಾಧಿಸಿ, ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬರಿದ ಅಭಿಷೇಕ್​ ಶರ್ಮಾ ( Abhishek Sharma ) ಕೇವಲ 38 ಎಸೆತಗಳಲ್ಲಿ 11 ಸಿಕ್ಸರ್​ ಹಾಗೂ 9 ಬೌಂಡರಿ ನೆರವಿನಿಂದ 113 ರನ್​ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ವೆಲ್ಲಿಂಗ್ಟನ್​ನ ಹೆನ್ರಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಕಿವೀಸ್ ಪರ ಡೆರಿಲ್ ಮಿಚೆಲ್ 52 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಅಜೇಯ 89 ರನ್ ಸಿಡಿಸಿ ಮಿಂಚಿದರು. ಅವರಿಗೆ ಉತ್ತಮ ಸಾಥ್ ನೀಡಿದ ಫಿನ್ ಅಲೆನ್ 40 ರನ್ (25 ಎಸೆತ) ಹಾಗೂ ಬೆವನ್ ಜೇಕಬ್ಸ್ ಅಜೇಯ 39 ರನ್ (23 ಎಸೆತ) ಬಾರಿಸಿ ತಂಡದ ಮೊತ್ತವನ್ನು 190ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

Also Read
ಕ್ರಿಕೆಟ್​, ಗ್ಲಾಮರ್ ಜಗತ್ತಿನಿಂದ ದೂರಾಗಿ ಆಧ್ಯಾತ್ಮದ ಹಾದಿ ಹಿಡಿದ ವಿರುಷ್ಕಾ ದಂಪತಿ..! Virat Kohli Anushka Sharma
Abhishek Sharma

199 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತ ತಂಡ ಕೇವಲ 13. 2 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 199 ರನ್​ ಕಲೆ ಹಾಕಿ 6 ವಿಕೆಟ್​ಗಳ ರೋಚಕ ಜಯ ದಾಖಲಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ಸರಣಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು, ಕಿವೀಸ್​ ಪಡೆಯನ್ನು ಅವರದ್ದೇ ನೆಲದಲ್ಲಿ ವೈಟ್​ವಾಶ್​ ಮಾಡುವತ್ತ ಟೀಮ್​ ಇಂಡಿಯಾ ಮುನ್ನುಗ್ಗುತ್ತಿದೆ.

ತಂಡದ ಪರ ಆರಂಭಿಕ ಆಟಗಾರರಾದ ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಬಿರುಗಾಳಿಯಂತಹ ಶುಭಾರಂಭ ನೀಡಿದರು. ಯುವ ಆಟಗಾರ ವೈಭವ್ ಸೂರ್ಯವಂಶಿ ಕೇವಲ 19 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 45 ರನ್ ಬಾರಿಸಿ ಔಟಾದರು. ಮೊದಲ ವಿಕೆಟ್‌ಗೆ ಈ ಜೋಡಿ ಅತ್ಯಲ್ಪ ಓವರ್‌ಗಳಲ್ಲಿ 133 ರನ್‌ಗಳ ಬೃಹತ್ ಪಾಲುದಾರಿಕೆ ಜೋಡಿಸಿ ತಂಡದ ಗೆಲುವಿನ ಹಾದಿಯನ್ನು ಅತ್ಯಂತ ಸುಗಮಗೊಳಿಸಿತು.

Also Read
ಕಿವೀಸ್​ ವಿರುದ್ಧ ಹ್ಯಾಟ್ರಿಕ್​ ಗೆಲುವಿನ ಮೇಲೆ ಕಣ್ಣಿಟ್ಟಿರುವ ಟೀಮ್ ಇಂಡಿಯಾಗೆ ಕಾಡುತ್ತಿದೆ ಇದೊಂದು ತಲೆಬಿಸಿ! IND vs NZ T20
Abhishek Sharma

ಇನ್ನೊಂದೆಡೆ ಕಿವೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅಭಿಷೇಕ್ ಶರ್ಮಾ ಶತಕದ ಸವಿಯೂಟ ಉಣ ಬಡಿಸಿದರು. ಅಭಿಷೇಕ್ ಕೇವಲ 38 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 9 ಬೌಂಡರಿಗಳ ನೆರವಿನಿಂದ 113 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡಿ ವೀಕ್ಷಕರನ್ನು ರಂಜಿಸಿದರು. ಕೇವಲ 10 ಓವರ್‌ಗಳ ವೇಳೆಗೆ ಭಾರತ 2 ವಿಕೆಟ್ ನಷ್ಟಕ್ಕೆ 178 ರನ್ ಬಾರಿಸಿ ಗೆಲುವಿನ ಸಮೀಪ ತಲುಪಿತ್ತು.

ಕೊನೆಯಲ್ಲಿ ಸಂಜು ಸ್ಯಾಮ್ಸನ್ (18 ರನ್) ಹಾಗೂ ಶ್ರೇಯಸ್ ಅಯ್ಯರ್ (5), ತಿಲಕ್​ ವರ್ಮಾ ( ಅಜೇಯ 1 ರನ್​) ಹಾಗೂ ನಮನ್​ ಧೀರ್​ (ಅಜೇಯ 4 ರನ್​) ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಟೀಮ್​ ಇಂಡಿಯಾ 4 ವಿಕೆಟ್​ ನಷ್ಟಕ್ಕೆ 40 ಬಾಲ್​ಗಳು ಬಾಕಿ ಇರುವಾಗಲೇ ಕಿವೀಸ್​ ವಿರುದ್ಧ 6 ವಿಕೆಟ್​ಗಳ ರೋಚಕ ಜಯ ದಾಖಲಿಸಿತು.

ಕೊನೆಯಲ್ಲಿ ಸಂಜು ಸ್ಯಾಮ್ಸನ್ (18 ರನ್) ಹಾಗೂ ಶ್ರೇಯಸ್ ಅಯ್ಯರ್ (5), ತಿಲಕ್​ ವರ್ಮಾ ( ಅಜೇಯ 1 ರನ್​) ಹಾಗೂ ನಮನ್​ ಧೀರ್​ (ಅಜೇಯ 4 ರನ್​) ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಟೀಮ್​ ಇಂಡಿಯಾ 4 ವಿಕೆಟ್​ ನಷ್ಟಕ್ಕೆ 40 ಬಾಲ್​ಗಳು ಬಾಕಿ ಇರುವಾಗಲೇ ಕಿವೀಸ್​ ವಿರುದ್ಧ 6 ವಿಕೆಟ್​ಗಳ ರೋಚಕ ಜಯ ದಾಖಲಿಸಿತು. ಕಿವೀಸ್​ ಪರ ಕೈಲಿ ಜೆಮಿಸನ್​ ಎರಡು ವಿಕೆಟ್​ ಪಡೆದರೆ, ಮ್ಯಾಥೀವ್​ ಫಿಶರ್​ ಹಾಗೂ ಮಿಚೆಲ್​ ಸ್ಯಾಂಟ್ನರ್​ ತಲಾ ಒಂದೊಂದು ವಿಕೆಟ್​ ಪಡೆದರು, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net