

ಭಾರತ: ಭಾರತೀಯರು ಅತೀ ಹೆಚ್ಚಾಗಿ ಯಾವುದಾದರೂ ಒಂದು ಕ್ರೀಡೆಯನ್ನು ಆಸಕ್ತಿಯಿಂದ ನೋಡುತ್ತಾರೆ ಅಂದರೆ ಅದು ಕ್ರಿಕೆಟ್. ಇತರೆ ಕ್ರೀಡೆಗಳಿಗೆ ಹೋಲಿಸಿದರೆ ಈ ಕ್ರೀಡೆಗೆ ಇರುವ ವೀಕ್ಷಕರು ಹಾಗೂ ಅಭಿಮಾನಿಗಳ ಸಂಖ್ಯೆ ಅಗಣಿತ ಎಂದೇ ಹೇಳಬಹುದು. ಯಾಕಂದ್ರೆ ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಈ ಸ್ಪೋರ್ಟ್ಸ್ನ ವೀಕ್ಷಿಸಲಾಗುತ್ತದೆ. ಅದರಲ್ಲೂ ಇಂದಿನ ಯುವಜನತೆಯಂತೂ ಕ್ರಿಕೆಟ್ ಆಟಕ್ಕೆ ಸಂಪೂರ್ಣವಾಗಿ ಮಾರುಹೋಗಿದ್ದು, ತಮ್ಮ ದಿನನಿತ್ಯದ ಕೆಲಸಗಳನ್ನು ಬಿಟ್ಟಾದರೂ ಈ ಕ್ರೀಡೆಯನ್ನು ನೋಡುತ್ತಾರೆ.
ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಟೆಸ್ಟ್, ಏಕದಿನ ಹಾಗೂ ಟಿ-20 ಫಾರ್ಮೆಟ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಬೇರೂರುವಲ್ಲಿ ಇಂದು ಯಶಸ್ವಿಯಾಗಿದ್ದಾರೆ. ಅದರಲ್ಲೂ ಅತೀ ಮುಖ್ಯವಾಗಿ ಟೀಮ್ ಇಂಡಿಯಾ ಪರ ಆಡುವ ದಾಖಲೆಗಳ ಸರದಾರ, ರನ್ ಮಷಿನ್ ವಿರಾಟ್ ಕೊಹ್ಲಿ ಅವರ ಆಟದ ವೈಖರಿಯನ್ನು ನೋಡಲು ಮುಗಿಬೀಳುವ ಕ್ರಿಕೆಟ್ ಅಭಿಮಾನಿಗಳು, ಈ ಕ್ರೀಡೆಯನ್ನು ಅಧಿಕ ಸಂಖ್ಯೆಯಲ್ಲಿ ನೋಡಲು ಇರುವ ಪ್ರಮುಖ ಆಕರ್ಷಣೆ ಎಂದೇ ಹೇಳಬಹುದು.
ಏಕದಿನವೇ ಆಗಿರಲಿ ಅಥವಾ ಟಿ-20ಯೇ ಇರಲಿ ತಮ್ಮ ದೇಶ ಯಾವ ರ‍್ಯಾಂಕಿಂಗ್‌ನಲ್ಲಿದೆ? ಎಂಬುದನ್ನು ತಿಳಿಯುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಸದಾ ಕಾಡುತ್ತಿರುತ್ತದೆ. ಇದೀಗ 'ವರ್ಲ್ಡ್ ಆಫ್ ಸ್ಟಾಟಸ್ಟಿಕ್ಸ್' ಪ್ರಕಟಿಸಿರುವ ಮಾಹಿತಿ ಪ್ರಕಾರ, ಪುರುಷರ ಏಕದಿನ ಕ್ರಿಕೆಟ್ ತಂಡದ ರ‍್ಯಾಂಕಿಂಗ್ ಪಟ್ಟಿ ಈ ಕೆಳಕಂಡಂತಿದೆ.
1. ಭಾರತ
2. ಆಸ್ಟ್ರೇಲಿಯಾ
3. ದಕ್ಷಿಣ ಆಫ್ರಿಕಾ
4. ಪಾಕಿಸ್ತಾನ
5. ನ್ಯೂಜಿಲೆಂಡ್
6. ಇಂಗ್ಲೆಂಡ್
7. ಶ್ರೀಲಂಕಾ
8. ಬಾಂಗ್ಲಾದೇಶ
9. ಅಫ್ಘಾನಿಸ್ತಾನ
10. ವೆಸ್ಟ್ ಇಂಡೀಸ್
11. ಜಿಂಬಾಬ್ವೆ
12. ಸ್ಕಾಟ್ಲೆಂಡ್
13. ಐರ್ಲೆಂಡ್
14. ನೆದರ್ಲ್ಯಾಂಡ್ಸ್
15. ನೇಪಾಳ
16. ನಮೀಬಿಯಾ
17. ಅಮೆರಿಕಾ
18. ಒಮಾನ್
19. ಯುಎಇ