More

    ರಾಮಮಂದಿರ ಲೋಕಾರ್ಪಣೆ: ಭಾರತದಾದ್ಯಂತ ಮುಗಿಲು ಮುಟ್ಟಿದ ಸಂಭ್ರಮ: ನೀರಸ ಯಾತ್ರೆಗಳಲ್ಲಿ ಮುಳುಗಿದ ‘INDIA’!

    ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಮತ್ತು ಬಾಲರಾಮದೇವರ ವಿಗ್ರಹದ ಪ್ರಾಣಪ್ರತಿಷ್ಠೆ ಸಮಾರಂಭ ನಡೆಯುತ್ತಿದ್ದು, ಬಿಜೆಪಿ ಮತ್ತು ಸಂಘಪರಿವಾರ ಸಾರ್ಜನಿಕರೊಂದಿಗೆ ದೇಶಾದ್ಯಂತ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಎಲ್ಲೆಲ್ಲೂ ಜೈಶ್ರೀರಾಂ ಘೋಷಣೆಗಳು ಮುಗಿಲು ಮುಟ್ಟಿವೆ. ಆದರೆ ಸಮಾರಂಭಕ್ಕೆ ಆಹ್ವಾನವಿದ್ದರೂ, ಅಯೋಧ್ಯೆಯಿಂದ ದೂರ ಉಳಿದಿರುವ ‘ಇಂಡಿಯಾ’ ಕೂಟದ ನಾಯಕರು ಏನು ಮಾಡುತ್ತಿದ್ದಾರೆ ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಈ ಕುರಿತು ಮಾಹಿತಿ ಇಲ್ಲಿದೆ.

    ಇದನ್ನೂ ಓದಿ: ರಾಮಲಲ್ಲಾ ಪ್ರಾಣ ಪ್ರತಿಷ್ಠಾ ನೇರಪ್ರಸಾರ ನಿಷೇಧಿಸುವಂತಿಲ್ಲ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಚಾಟಿ

    ಅಸ್ಸಾಂನಲ್ಲಿ ರಾಹುಲ್ ಗಾಂಧಿ ಯಾತ್ರೆ:
    ಭಾರತ್ ಜೋಡೋ ನ್ಯಾಯ್ ಯಾತ್ರೆಗಾಗಿ ಈಶಾನ್ಯದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 15 ನೇ ಶತಮಾನದ ಸಮಾಜ ಸುಧಾರಕ ಶಂಕರದೇವ್ ಅವರ ಜನ್ಮಸ್ಥಳದ ಥಾನ್‌ ದೇವಸ್ಥಾನಕ್ಕೆ ಭೇಟಿ ನೀಡಲು ತೆರಳಿದ್ದರು. ಆದರೆ ದೇವಾಲಯ ಆಡಳಿತ ಅವರನ್ನು ತಡೆದಿದ್ದು, “ನಾನು ದೇವಸ್ಥಾನಕ್ಕೆ ಭೇಟಿ ನೀಡಲು ಬಂದಿದ್ದೇನೆ. ದೇವಸ್ಥಾನಕ್ಕೆ ಭೇಟಿ ನೀಡಲಾಗದಷ್ಟು ಅಪರಾಧ ಏನು ಮಾಡಿದ್ದೇನೆ?” ಎಂದು ಪ್ರಶ್ನಿಸಿದ್ದಾರೆ.
    ಇನ್ನು ರಾಹುಲ್ ಯಾತ್ರೆ ಮಾರ್ಗದಲ್ಲಿ ಬಿಜೆಪಿ ವಿರೋಧಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆ ಯೋಜಿಸಿದ್ದು, ಯಾತ್ರೆ ವೇಳೆ ಜನರು ‘ಜೈ ಶ್ರೀ ರಾಮ್’ ಮತ್ತು ‘ಮೋದಿ, ಮೋದಿ’ ಘೋಷಣೆ ಕೂಗುತ್ತಿರುವುದಕ್ಕೆ ದ್ವೇಷದ ಮೇಲೆ ಪ್ರೀತಿಯು ಜಯಗಳಿಸುತ್ತದೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ. ಅದರ ವಿಡಿಯೋ ವೈರಲ್ ಆಗಿದೆ.ಸೋನಿಯಾ ಗಾಂಧಿಯವರೊಂದಿಗೆ ಅಯೋಧ್ಯೆ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ರಾಹುಲ್​ ಯಾತ್ರೆಯ ಮುಂಚೂಣಿಯಲ್ಲಿದ್ದಾರೆ.

    ಮಮತಾ ಬ್ಯಾನರ್ಜಿಯವರ ‘ಆಲ್-ಫೈತ್ ರ್‍ಯಾಲಿ’: ಅಯೋಧ್ಯೆ ಸಮಾರಂಭ ಸಂದರ್ಭದಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕೋಲ್ಕತ್ತಾದಲ್ಲಿ ಸಮಾನಂತರ ರ್‍ಯಾಲಿಯನ್ನು ನಡೆಸಿ ಧಾರ್ಮಿಕ ಸಾಮರಸ್ಯಕ್ಕೆ ಕರೆ ನೀಡಲಿದ್ದಾರೆ.

    ಆರತಿ ಬೆಳಗಲು ಮುಂದಾದ ಎಎಪಿ: ಶೋಭಾ ಯಾತ್ರೆಗಳು, ಭಂಡಾರಗಳು, ಸುಂದರ್ ಕಂಡ್ ವಾಚನಗಳು ಮತ್ತು ಆರತಿ ಬೆಳಗುವುದರ ಮೂಲಕ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಸಮುದಾಯದ ಕಾರ್ಯಕ್ರಮಗಳಲ್ಲಿ ಪಕ್ಷದ ಸಚಿವರು, ಶಾಸಕರು ಮತ್ತು ಕೌನ್ಸಿಲರ್‌ಗಳು ಭಾಗವಹಿಸಲಿದ್ದಾರೆ. “ಭಗವಾನ್ ರಾಮನು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ” ಎಂದು ಎಎಪಿ ಸಮರ್ಥಿಸಿಕೊಂಡಿದೆ.

    ತಮಿಳುನಾಡಿನಲ್ಲಿ ಡಿಎಂಕೆ ಯುವ ಸಮಾವೇಶ: ಸ್ಟಾಲಿನ್ ನೇತೃತ್ವದ ಡಿಎಂಕೆ “ಮಸೀದಿ ಕೆಡವಿ” ನಂತರ ಮಂದಿರ ನಿರ್ಮಾಣವನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೆ, ಅಯೋಧ್ಯೆ ಕಾರ್ಯಕ್ರಮದ ಸಾರ್ವಜನಿಕ ಪ್ರದರ್ಶನಕ್ಕೆ ಅನುಮತಿ ನಿರಾಕರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಸೇಲಂನಲ್ಲಿ ಯುವ ಸಮಾವೇಶ ಆಯೋಜಿಸಿದೆ. ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ “ಅಲ್ಲಿ ದೇವಸ್ಥಾನ ಬರುವುದರಿಂದ ನಮಗೆ ಸಮಸ್ಯೆ ಇಲ್ಲ, ಮಸೀದಿ ಕೆಡವಿದ ನಂತರ ಮಂದಿರ ನಿರ್ಮಾಣಕ್ಕೆ ನಾವು ಒಪ್ಪುವುದಿಲ್ಲ. ಎಂದಿದ್ದಾರೆ.

    ಶರದ್ ಪವಾರ್, ಲಾಲು ಯಾದವ್ ಸ್ಕಿಪ್: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ದೇವಾಲಯದ ಟ್ರಸ್ಟ್‌ಗೆ ಧನ್ಯವಾದ ಸಲ್ಲಿಸಿದ್ದಾರೆ, ಆದರೆ ಸಮಾರಂಭದ ನಂತರ ಕಡಿಮೆ ಜನಸಂದಣಿ ಇರುವಾಗ ಅಯೋಧ್ಯೆ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
    ಶಿವಸೇನೆ ದೂರ: ಶಿವಸೇನೆ(ಯುಬಿಟಿ) ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಅಯೋಧ್ಯೆ ಕಾರ್ಯಕ್ರಮದಿಂದ ದೂರ ಉಳಿಯಲಿದ್ದಾರೆ. ಠಾಕ್ರೆ ಅವರು ನಾಸಿಕ್‌ನ ಕಲಾರಾಮ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಗೋದಾವರಿ ನದಿಯ ದಡದಲ್ಲಿ ‘ಮಹಾ ಆರತಿ’ ಮಾಡುತ್ತಾರೆ ಎಂದು ಅವರ ಸಹಾಯಕ ಮತ್ತು ಪಕ್ಷದ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.

    ಸಿಪಿಎಂ ತಿರಸ್ಕಾರ: ಈ ಹಿಂದೆ ಕಾರ್ಯಕ್ರಮವನ್ನು ತಿರಸ್ಕರಿಸುವುದಾಗಿ ಸಿಪಿಎಂ ಹೇಳಿತ್ತು, ಇದು ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತದೆ, ಆದರೆ ಬಿಜೆಪಿಯು “ರಾಜಕೀಯದೊಂದಿಗೆ ಧರ್ಮವನ್ನು ಸಂಯೋಜಿಸುವುದು” “ಸರಿಯಲ್ಲ” ಎಂದು ಹೇಳಿದೆ.

    VIDEO| ಶ್ರೀರಾಮನಿಗೂ ರಾಮೇಶ್ವರಕ್ಕೂ ಇರುವ ನಂಟೇನು? ಅಚ್ಚರಿ ಸಂಗತಿ ವಿಡಿಯೋ ಇಲ್ಲಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts