

ನವದೆಹಲಿ: ಪ್ರಸ್ತುತ ಜಿಂಬಾಬ್ವೆ ವಿರುದ್ಧ ಐದು ಟಿ20 ಪಂದ್ಯಗಳ ಸರಣಿಯಲ್ಲಿ ತೊಡಗಿರುವ ಟೀಮ್ ಇಂಡಿಯಾ, ನಿನ್ನೆ (ಜು.10) ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 23 ರನ್ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಒಂದೆಡೆ ಸರಣಿಯನ್ನು ಗೆಲ್ಲುವ ತವಕದಲ್ಲಿರುವ ಭಾರತ ತಂಡದ ಬಗ್ಗೆ ಅಭಿಮಾನಿಗಳು ಸಂತಸ ಹೊರಹಾಕಿದ್ದೇ ಆದರೂ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಶುಭಮನ್ ಗಿಲ್ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಲಿಕಾ ಗುಣಮಟ್ಟ ಸುಧಾರಣೆಯಾಗಲಿ
ಜಿಂಬಾಬ್ವೆ ಸರಣಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಅಭಿಷೇಕ್ ಶರ್ಮ, ಮೊದಲ ಪಂದ್ಯದಲ್ಲಿ ಡಕ್ ಔಟ್ ಆಗಿ ಭಾರೀ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದ್ದರು. ಬಳಿಕ ಎರಡನೇ ಮ್ಯಾಚ್ನಲ್ಲಿ 47 ಎಸೆತಗಳಲ್ಲಿ 100 ರನ್ ಸಿಡಿಸಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದ ಅವರು, ತಮ್ಮ ಅಂತಾರಾಷ್ಟ್ರೀಯ ಕರಿಯರ್ನಲ್ಲಿ ಹೊಸ ದಾಖಲೆಗೆ ಸಾಕ್ಷಿಯಾದರು. ಇದೇ ರೀತಿ ನಿಮ್ಮ ಫಾರ್ಮ್ ಮುಂದುವರೆಸಿ ಎಂದಿದ್ದ ಅಭಿಷೇಕ್ ಅಭಿಮಾನಿಗಳ ಬಳಗಕ್ಕೆ ಗಿಲ್ ತೆಗೆದುಕೊಂಡ ನಿರ್ಧಾರವು ಕಿಂಚಿತ್ತು ಸರಿ ಅನಿಸಲಿಲ್ಲ.
ಅತ್ಯುತ್ತಮ ಪರ್ಫಾಮೆನ್ಸ್ ನೀಡಿದ್ದ ಅಭಿಷೇಕ್ ಶರ್ಮರನ್ನು ಓಪನಿಂಗ್ ಆರ್ಡರ್ನಿಂದ ಕೈಬಿಟ್ಟು, ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಆರಂಭಿಕ ಆಟಗಾರರಾಗಿ ಗಿಲ್ ಕ್ರೀಸ್ಗೆ ಬಂದರು. ಇದರಿಂದ ತೀವ್ರ ಅಸಮಾಧಾನಗೊಂಡ ಕ್ರಿಕೆಟ್ ಅಭಿಮಾನಿಗಳು, ದಿಢೀರ್ ಬದಲಾವಣೆಗೆ ಕಾರಣವೇನು? ಓಪನಿಂಗ್ ಬರುತ್ತಿದ್ದ ಅಭಿಷೇಕ್ರಿಂದ ಏಕೆ ಸ್ಥಾನ ಕಿತ್ತುಕೊಂಡಿದ್ದೀರಿ ಎಂದು ಗಿಲ್ಗೆ ಸರಣಿ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕೇಳಿದ್ದಾರೆ.
ಇದನ್ನೂ ಓದಿ: ಶ್ರೀಮೂರೂರಮ್ಮ ದೇವಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ
ಮೂರನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 49 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳಿಂದ 66 ರನ್ ಗಳಿಸಿದ ಗಿಲ್, ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿ ಹೊರಹೊಮ್ಮಿದರು. ಇದನ್ನು ಲೆಕ್ಕಕ್ಕೆ ಪರಿಗಣಿಸದ ಅಭಿಮಾನಿಗಳು, ನಾಯಕನಾಗಿ ಇಂತಹ ನಿರ್ಧಾರ ಕೈಗೊಂಡಿದ್ದು ಸರಿಯಲ್ಲ ಎಂದು ವ್ಯಾಪಕವಾಗಿ ಟೀಕಿಸಿ, ಛೀಮಾರಿ ಹಾಕಿದ್ದಾರೆ.