ಶ್ರೀಮೂರೂರಮ್ಮ ದೇವಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ

HUN-JULY-11-3(YASHODHARAPURA PROGRAMME)
ಹುಣಸೂರು ತಾಲೂಕಿನ ಯಶೋಧರಪುರ ಗ್ರಾಮದಲ್ಲಿ ದೇವಾಲಯದ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಭೂಮಿಪೂಜೆ ನೆರವೇರಿಸಿದರು. ಗ್ರಾಪಂ ಸದಸ್ಯರಾದ ಕೆ.ಸುಭಾಷಿಣಿ, ರಾಮೇಗೌಡ, ಮಂಜುನಾಥ್, ಎಂ.ಕೃಷ್ಣಯ್ಯ ಇತರರಿದ್ದರು.
Published on

ಹುಣಸೂರು: ತಾಲೂಕಿನ ಯಶೋಧರಪುರ ಗ್ರಾಮದ ಶ್ರೀಮೂರೂರಮ್ಮ ದೇವಿ ದೇವಸ್ಥಾನದ ನಿರ್ಮಾಣಕ್ಕೆ ಶಾಸಕ ಜಿ.ಡಿ.ಹರೀಶ್‌ಗೌಡ ಗುರುವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಕಾರ್ಯಗಳಿಗೆ ಜನರು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿರುವುದು ನಮ್ಮ ಸಂಸ್ಕೃತಿ, ಪರಂಪರೆ ಇಂದಿಗೂ ಉಳಿಯಲು ಕಾರಣವಾಗಿದೆ. ದೇವಸ್ಥಾನದೊಂದಿಗೆ ಶಿಕ್ಷಣವನ್ನು ನೀಡುವ ಸರಸ್ವತಿ ದೇಗುಲವನ್ನು ಉತ್ತಮ ಸ್ಥಿತಿಯಲ್ಲಿಡಲು ಎಲ್ಲರೂ ಗಮನಹರಿಸಬೇಕು ಎಂದರು ಸಲಹೆ ನೀಡಿದರು.

ದೇವಾಲಯದ ಜೀರ್ಣೋದ್ಧಾರಕ್ಕಾಗಿ 15 ಲಕ್ಷ ರೂ.ಗಳನ್ನು ನೀಡಿರುವ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿ ಅಬಿನಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಸುಭಾಷಿಣಿ, ರಾಮೇಗೌಡ, ಶೈಲಾ, ಮಂಜುನಾಥ, ಗ್ರಾಮದ ಮುಖಂಡರಾದ ಪಾಲಾಕ್ಷ, ನಿಂಗಪ್ಪ, ಮಂಜುನಾಥ, ಜಗದೀಶ, ಅಶೋಕ, ಗಿರೀಶ್, ರಾಜು, ಹರೀಶ, ವೆಂಕಟೇಶ್, ಬಿ.ನಾಗ, ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಎಂ ಕೃಷ್ಣಯ್ಯ, ಡಿ.ನಾರಾಯಣ, ರಮೇಶ, ಮನೋಜ, ರಾಮಮ್ಮ, ಮಹಾದೇವಮ್ಮ, ಎನ್.ವೆಂಕಟೇಶ, ಕೀರ್ತಿಕುಮಾರ್, ಆರ್.ಕೃಷ್ಣ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net