

ತರೌಬಾ (ಟ್ರಿನಿಡಾಡ್): ಟ್ರಿನಿಬಾಗೊ ನೈಟ್ ರೈಡರ್ಸ್ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ಸತತ 10ನೇ ಜಯ ದಾಖಲಿಸಿತು. ಭಾನುವಾರ ನಡೆದ ಲೀಗ್ ಹಂತದ 10ನೇ ಹಾಗೂ ಕಡೇ ಪಂದ್ಯದಲ್ಲಿ ಟಿಎನ್‌ಆರ್ ತಂಡ, ವಾದ್ ಅಹಮದ್ (21ಕ್ಕೆ4) ಮಾರಕ ದಾಳಿ ಹಾಗೂ ಟಿಯೊನ್ ವೆಬ್‌ಸ್ಟರ್ (41*) ಬಿರುಸಿನ ಬ್ಯಾಟಿಂಗ್ ಲವಾಗಿ 9 ವಿಕೆಟ್‌ಗಳಿಂದ ಸೇಂಟ್ ಕೀಟ್ಸ್ ಹಾಗೂ ನೆವಿಸ್ ಪೇಟ್ರಿಯೊಟ್ಸ್ ತಂಡವನ್ನು ಮಣಿಸಿತು. ಇದರೊಂದಿಗೆ ಲೀಗ್ ಹಂತದಲ್ಲಿ ಆಡಿದ 10 ಪಂದ್ಯಗಳಲ್ಲೂ ಜಯ ದಾಖಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಕೀಟ್ಸ್ ತಂಡ, 18.2 ಓವರ್‌ಗಳಲ್ಲಿ 77 ರನ್‌ಗಳಿಗೆ ಸರ್ವಪತನ ಕಂಡರೆ, ಪ್ರತಿಯಾಗಿ ಟ್ರಿನಿಬಾಗೊ ನೈಟ್ ರೈಡರ್ಸ್ ತಂಡ 11.3 ಓವರ್‌ಗಳಲ್ಲಿ 1 ವಿಕೆಟ್‌ಗೆ 78 ರನ್ ಪೇರಿಸಿ ಗೆಲುವಿನ ದಡ ಸೇರಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಟ್ರಿನಿಬಾಗೊ ನೈಟ್ ರೈಡರ್ಸ್ ತಂಡ ಸೆಮಿಫೈನಲ್‌ಗೇರಿದ್ದಾರೆ. ಮಂಗಳವಾರ (ಸೆ.8) ಲೀಗ್‌ನ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ.
ಸೇಂಟ್ ಕೀಟ್ಸ್ ಹಾಗೂ ನೆವಿಸ್ ಪೇಟ್ರಿಯೊಟ್ಸ್: 18.2 ಓವರ್‌ಗಳಲ್ಲಿ 77 (ಲೆವಿಸ್ 12, ರಾಮದಿನ್ 19, ವಾದ್ ಅಹಮದ್ 21ಕ್ಕೆ 4), ಟ್ರಿನ್‌ಬಾಗೊ ನೈಟ್ ರೈಡರ್ಸ್: 11.3 ಓವರ್‌ಗಳಲ್ಲಿ 1 ವಿಕೆಟ್‌ಗೆ 78 (ಟಿಯೊನ್ ವೆಬ್‌ಸ್ಟರ್ 41*, ಜಾಂಗೂ 19, ಎಮ್ರಿಟ್ 14ಕ್ಕೆ 1).