More

    ಆಂಡ್ರೆ ರಸೆಲ್ ಐಪಿಎಲ್‌ನಲ್ಲಿ ದ್ವಿಶತಕ ಸಿಡಿಸಬಲ್ಲರು, ಆದರೆ ಷರತ್ತು ಅನ್ವಯ!

    ಅಬುಧಾಬಿ: ವೆಸ್ಟ್ ಇಂಡೀಸ್ ಆಲ್ರೌಂಡರ್ ಆಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್‌ಗೂ ಹೆಸರುವಾಸಿ. ಕಳೆದ ಐಪಿಎಲ್ ಟೂರ್ನಿಯಲ್ಲಿ ಅವರು ಕೋಲ್ಕತ ನೈಟ್‌ರೈಡರ್ಸ್‌ ತಂಡಕ್ಕೆ ಸ್ಫೋಟಕ ಆಟದ ಮೂಲಕವೇ ಆಸರೆಯಾಗಿದ್ದರು. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಸೆಲ್ ದ್ವಿಶತಕವನ್ನೂ ಸಿಡಿಸಬಲ್ಲರು ಎಂದು ಕೆಕೆಆರ್ ತಂಡದ ಮೆಂಟರ್ ಡೇವಿಡ್ ಹಸ್ಸೆ ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇದೇ ವೇಳೆ ಒಂದು ಷರತ್ತು ಕೂಡ ಅನ್ವಯಿಸಲಿದೆ ಎಂದಿದ್ದಾರೆ. ಅದೇನು ಗೊತ್ತೇ?

    ಐಪಿಎಲ್‌ನಲ್ಲಿ ರಸೆಲ್ ದ್ವಿಶತಕ ಸಿಡಿಸುವುದು ಸಾಧ್ಯವಾಗಬೇಕಾದರೆ ಮಧ್ಯಮ ಕ್ರಮಾಂಕದಿಂದ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆಯಬೇಕಾಗುತ್ತದೆ ಎಂದು ಡೇವಿಡ್ ಹಸ್ಸೆ ಹೇಳಿದ್ದಾರೆ. ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕ್ಕಲಂ ಈಗಾಗಲೆ ರಸೆಲ್ ಅವರನ್ನು ಕೆಕೆಆರ್ ತಂಡದ ಪರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸುವ ಚಿಂತನೆಯನ್ನೂ ನಡೆಸಿದ್ದಾರೆ ಎಂದು ಡೇವಿಡ್ ಹಸ್ಸೆ ತಿಳಿಸಿದ್ದಾರೆ.

    ‘ಆಂಡ್ರೆ ರಸೆಲ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರೆ 60 ಎಸೆತಗಳನ್ನು ಎದುರಿಸುವ ಅವಕಾಶ ಪಡೆಯುತ್ತಾರೆ. ಆಗ ಅವರು ದ್ವಿಶತಕವನ್ನೂ ಬಾರಿಸಬಹುದು. ಆಂಡ್ರೆ ರಸೆಲ್ ಸ್ಫೋಟಕ ಆಟವಾಡುವಾಗ ಏನು ಬೇಕಾದರೂ ಸಾಧ್ಯವಾಗಬಹುದು’ ಎಂದು ಡೇವಿಡ್ ಹಸ್ಸೆ ಹೇಳಿದ್ದಾರೆ. ರಸೆಲ್ ಕಳೆದ ಐಪಿಎಲ್‌ನಲ್ಲಿ ಕೆಕೆಆರ್ ಪರ 13 ಇನಿಂಗ್ಸ್‌ಗಳಲ್ಲಿ 56.66ರ ಸರಾಸರಿಯಲ್ಲಿ 510 ರನ್ ಬಾರಿಸಿದ್ದರು. ಜತೆಗೆ 11 ವಿಕೆಟ್ ಕೂಡ ಕಬಳಿಸಿ ಬೌಲಿಂಗ್‌ನಲ್ಲೂ ಮಿಂಚಿದ್ದರು.

    ಇದನ್ನೂ ಓದಿ: ಸೆಪ್ಟೆಂಬರ್ 21 ರಂದು ಆರ್‌ಸಿಬಿ ಮೊದಲ ಪಂದ್ಯ, ಎದುರಾಳಿ ಯಾರು ಗೊತ್ತಾ..?

    ರಸೆಲ್ ಕೆಕೆಆರ್ ತಂಡದ ಹೃದಯಬಡಿತ ಎಂದೂ ಬಣ್ಣಿಸಿರುವ ಡೇವಿಡ್ ಹಸ್ಸೆ, ನಾವು ಸಮತೋಲನದ ತಂಡವನ್ನು ಹೊಂದಿದ್ದು, ಯಾರು ಯಾವ ಕ್ರಮಾಂಕದಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡಬಲ್ಲರು ಎಂದಿದ್ದಾರೆ. ಆಸ್ಟ್ರೇಲಿಯಾದವರಾದ ಡೇವಿಡ್ ಹಸ್ಸೆ ಹೊರತಾಗಿ ತಂಡದ ಮತ್ತೆಲ್ಲ ತರಬೇತಿ ಸಿಬ್ಬಂದಿ ನ್ಯೂಜಿಲೆಂಡ್‌ನವರಾಗಿದ್ದಾರೆ. ಕಿವೀಸ್‌ನ ಮಾಜಿ ವೇಗಿ ಕೈಲ್ ಮಿಲ್ಸ್ ಬೌಲಿಂಗ್ ಕೋಚ್ ಆಗಿದ್ದಾರೆ.

    ನಾಯಕ ದಿನೇಶ್ ಕಾರ್ತಿಕ್‌ಗೆ ಇಂಗ್ಲೆಂಡ್ ನಾಯಕ ಇವೊಯಿನ್ ಮಾರ್ಗನ್ ಉಪನಾಯಕರಾಗಿ ಬೆಂಬಲ ಒದಗಿಸಲಿದ್ದಾರೆ. ಏಕದಿನ ವಿಶ್ವಕಪ್ ಗೆಲುವಿನ ಅನುಭವವನ್ನು ಮಾರ್ಗನ್ ಅವರಿಂದ ಬಳಸಿಕೊಳ್ಳಬಹುದು ಎಂದು ಡೇವಿಡ್ ಹಸ್ಸೆ ಹೇಳಿದ್ದಾರೆ. ಕೆಕೆಆರ್ ತಂಡ ಐಪಿಎಲ್‌ನಲ್ಲಿ ಸೆಪ್ಟೆಂಬರ್ 23ರಂದು ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

    ಕೊನೆಗೂ ಪ್ರಕಟಗೊಂಡಿತು ಐಪಿಎಲ್ ವೇಳಾಪಟ್ಟಿ; ಮುಂಬೈ-ಚೆನ್ನೈ ಮೊದಲ ಪಂದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts