More

    ಕೊನೆಗೂ ಪ್ರಕಟಗೊಂಡಿತು ಐಪಿಎಲ್ ವೇಳಾಪಟ್ಟಿ; ಮುಂಬೈ-ಚೆನ್ನೈ ಮೊದಲ ಪಂದ್ಯ

    ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 13ನೇ ಆವೃತ್ತಿಯ ವೇಳಾಪಟ್ಟಿ ಕೊನೆಗೂ ಭಾನುವಾರ ಬಿಡುಗಡೆಯಾಗಿದೆ. ಸೆಪ್ಟೆಂಬರ್ 19ರಂದು ಅಬುಧಾಬಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.

    ಟೂರ್ನಿಗೆ ಇನ್ನು 12 ದಿನಗಳಷ್ಟೇ ಬಾಕಿ ಉಳಿದಿದ್ದು, ನವೆಂಬರ್ 3ರವರೆಗೆ ನಡೆಯಲಿರುವ ಲೀಗ್​ ಹಂತದ ಎಲ್ಲ 56 ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪ್ಲೇಆಫ್​ ಹಂತದ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 10ರಂದು ನಿಗದಿಯಾಗಿದೆ.

    ವಿರಾಟ್​ ಕೊಹ್ಲಿ ಸಾರಥ್ಯದ ಆರ್​​ಸಿಬಿ ತಂಡ ಸೆಪ್ಟೆಂಬರ್​ 21ರಂದು ಸನ್​ರೈಸರ್ಸ್ ತಂಡದ ವಿರುದ್ಧ ದುಬೈನಲ್ಲಿ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಸೆಪ್ಟೆಂಬರ್​ 20ರಂದು ಟೂರ್ನಿಯ 2ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಗಳು ಸೆಣಸಲಿವೆ.

    ಒಟ್ಟಾರೆ 10 ದಿನಗಳಲ್ಲಿ ತಲಾ 2 ಪಂದ್ಯಗಳು (ಡಬಲ್​ ಹೆಡರ್​) ನಡೆಯಲಿವೆ. ದುಬೈನಲ್ಲಿ 24, ಅಬುಧಾಬಿಯಲ್ಲಿ 20 ಮತ್ತು ಶಾರ್ಜಾದಲ್ಲಿ 12 ಲೀಗ್​ ಪಂದ್ಯಗಳು ನಡೆಯಲಿವೆ. ರಾತ್ರಿಯ ಪಂದ್ಯಗಳು ಭಾರತೀಯ ಕಾಲಮಾನದಂತೆ ರಾತ್ರಿ 7.30ಕ್ಕೆ ಆರಂಭಗೊಳ್ಳಲಿವೆ. ಸಂಜೆ ನಡೆಯಲಿರುವ ಪಂದ್ಯಗಳು 3.30ರಿಂದ ನಡೆಯಲಿವೆ.

    ಇದನ್ನೂ ಓದಿ:  ಚೆಂಡಿಗೆ ಸ್ಯಾನಿಟೈಸರ್ ಹಚ್ಚಿ ಅಮಾನತುಗೊಂಡ ಕ್ರಿಕೆಟಿಗ!

    53 ದಿನಗಳ ಟೂರ್ನಿಯಲ್ಲಿ 60 ಪಂದ್ಯಗಳು ಶಾರ್ಜಾ, ಅಬುಧಾಬಿ ಮತ್ತು ದುಬೈನಲ್ಲಿ ನಡೆಯಲಿವೆ. ಎಂದಿನಂತೆ ಡಬಲ್ ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಿ ನಡೆಯಲಿದ್ದು, ಅಗ್ರ 4 ತಂಡಗಳು ಪ್ಲೇಆಫ್​ ಹಂತಕ್ಕೇರಲಿವೆ.

     

    VIDEO | ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಯಿಂದ ಜನ್ಮದಿನದಂದು ನೇತ್ರದಾನ ಸಂಕಲ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts