More

    ಸೆಪ್ಟೆಂಬರ್ 21 ರಂದು ಆರ್‌ಸಿಬಿ ಮೊದಲ ಪಂದ್ಯ, ಎದುರಾಳಿ ಯಾರು ಗೊತ್ತಾ..?

    ಬೆಂಗಳೂರು: ಅಂತು ಇಂತು 13ನೇ ಐಪಿಎಲ್ ವೇಳಾಪಟ್ಟಿ ಪ್ರಕಟಗೊಂಡಿದೆ. ಕಳೆದ ಒಂದು ವಾರಗಳ ಊಹಾಪೋಹಗಳಿಗೆ ಬಿಸಿಸಿಐ ತೆರೆ ಎಳೆದಿದೆ. ಲೀಗ್ ಹಂತದ 56 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಪ್ಲೇ-ಆಫ್ ಹಂತದ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಸೆಪ್ಟೆಂಬರ್ 21 ರಂದು ಮಾಜಿ ಚಾಂಪಿಯನ್ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ದುಬೈನಲ್ಲಿ ಎದುರಿಸಲಿದೆ. ಆರ್‌ಸಿಬಿ ತಂಡ 3 ಪಂದ್ಯಗಳನ್ನು ಮಧ್ಯಾಹ್ನದ ವೇಳೆ ಆಡಲಿದೆ. ಭಾರತದಲ್ಲಿ ನಡೆಯುವಂತೆ ಯುಎಇಯಲ್ಲೂ ತವರು ಹಾಗೂ ಹೊರಗಿನ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ.

    – ಆರ್‌ಸಿಬಿ ವೇಳಾಪಟ್ಟಿ 
    ದಿನಾಂಕ, ಎದುರಾಳಿ, ಸಮಯ (ಭಾರತೀಯ ಕಾಲಮಾನ)
    ಸೆ.21, ಸನ್‌ರೈಸರ್ಸ್‌, ರಾ.7.30ಕ್ಕೆ
    ಸೆ.24, ಕಿಂಗ್ಸ್ ಇಲೆವೆನ್, ರಾ.7.30ಕ್ಕೆ
    ಸೆ.28, ಮುಂಬೈ ಇಂಡಿಯನ್ಸ್, ರಾ.7.30ಕ್ಕೆ*
    ಅ.3, ರಾಜಸ್ಥಾನ್ ರಾಯಲ್ಸ್, ಮ.3.30ಕ್ಕೆ *
    ಅ.5, ಡೆಲ್ಲಿ ಕ್ಯಾಪಿಟಲ್ಸ್, ರಾ.7.30ಕ್ಕೆ*
    ಅ.10, ಸಿಎಸ್‌ಕೆ, ರಾ.7.30ಕ್ಕೆ
    ಅ.12, ಕೆಕೆಆರ್, ರಾ.7.30ಕ್ಕೆ *
    ಅ.15, ಕಿಂಗ್ಸ್ ಇಲೆವೆನ್, ರಾ.7.30ಕ್ಕೆ*
    ಅ.17, ರಾಜಸ್ಥಾನ್ ರಾಯಲ್ಸ್, ಮ.3.30ಕ್ಕೆ
    ಅ.21, ಕೆಕೆಆರ್, ರಾ.7.30ಕ್ಕೆ
    ಅ.25, ಸಿಎಸ್‌ಕೆ, ಮ.3.30ಕ್ಕೆ*,
    ಅ.28, ಮುಂಬೈ ಇಂಡಿಯನ್ಸ್, ರಾ.7.30ಕ್ಕೆ
    ಅ.31, ಸನ್‌ರೈಸರ್ಸ್‌, ರಾ.7.30ಕ್ಕೆ *
    ನ.2, ಡೆಲ್ಲಿ ಕ್ಯಾಪಿಟಲ್ಸ್, ರಾ.7.30ಕ್ಕೆ

    (* ತವರು ನೆಲದ ಪಂದ್ಯಗಳು).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts