ಸಿಪಿಎಲ್​: ಟ್ರಿನ್​ಬಾಗೊ ನೈಟ್​ ರೈಡರ್ಸ್​ಗೆ ಸತತ 4ನೇ ಜಯ

bravo for web new
Published on

ಪೋರ್ಟ್​ ಆಫ್​ ಸ್ಪೇನ್​: ಟ್ರಿನ್​ಬಾಗೊ ನೈಟ್​ ರೈಡರ್ಸ್​ (ಟಿಕೆಆರ್​) ತಂಡ ಹೀರೋ ಕೆರಿಬಿಯನ್​ ಪ್ರೀಮಿಯರ್​ ಲೀಗ್​ (ಸಿಪಿಎಲ್​) ಟಿ20 ಟೂನಿರ್ಯಲ್ಲಿ ಸತತ 4ನೇ ಜಯ ದಾಖಲಿಸಿತು. ಕ್ವೀನ್ಸ್​ ಪಾರ್ಕ್​ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಿಕೆಆರ್​ ತಂಡ ಡಕ್​ವರ್ತ್​ ಲೂಯಿಸ್​ ನಿಯಮದನ್ವಯ (ಡಿಎಲ್​) 6 ವಿಕೆಟ್​ಗಳಿಂದ ಸೇಂಟ್​ ಲೂಸಿಯಾ ಜೌಕ್ಸ್​ ತಂಡವನ್ನು ಮಣಿಸಿತು. ಇದರೊಂದಿಗೆ ಟಿಕೆಆರ್​ ತಂಡ ಸತತ 4ನೇ ಜಯ ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಅಜೇಯ ಸಾಧನೆಯೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿತು. ದಿನದ ಮತ್ತೊಂದು ಪಂದ್ಯದಲ್ಲಿ ಬಾರ್ಬಡೊಸ್​ ಟ್ರಿಡೆಂಟ್ಸ್​ 36 ರನ್​ಗಳಿಂದ ಜಮೈಕಾ ತಲ್ಲಾವಾಸ್​ ತಂಡದ ಎದುರು ಜಯ ದಾಖಲಿಸಿತು.

ಮೊದಲು ಬ್ಯಾಟಿಂಗ್​ ಮಾಡಿದ ಸೇಂಟ್​ ಲೂಸಿಯಾ ಜೌಕ್ಸ್​ ತಂಡ 17.1 ಓವರ್​ಗಳಲ್ಲಿ 6 ವಿಕೆಟ್​ಗೆ 111 ರನ್​ಗಳಿಸಿತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದ ಕಾರಣ ಟಿಕೆಆರ್​ ತಂಡಕ್ಕೆ 9 ಓವರ್​ಗಳಲ್ಲಿ 72 ರನ್​ ಗೆಲುವಿನ ಗುರಿ ನೀಡಲಾಗಿತು. ಡ್ವೇನ್​ ಬ್ರಾವೊ (23ಅಜೇಯ, 13 ಬೌಂಡರಿ, 2 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ಫಲವಾಗಿ 8 ಓವರ್​ಗಳಲ್ಲಿ 4 ವಿಕೆಟ್​ಗೆ 72 ರನ್​ ಗಳಿಸಿ ಜಯದ ನಗೆ ಬೀರಿತು. ಈ ಪಂದ್ಯದಲ್ಲಿ ಪ್ರವೀಣ್​ ತಂಬೆ ಟಿಕೆಆರ್​ ಪರ ಕಣಕ್ಕಿಳಿಯುವ ಮೂಲಕ ಸಿಪಿಎಲ್​ಗೆ ಪದಾರ್ಪಣೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು. ಜತೆಗೆ ಡ್ವೇನ್​ ಬ್ರಾವೊ ಟಿ20 ಕ್ರಿಕೆಟ್​ನಲ್ಲಿ 500 ವಿಕೆಟ್​ ಕಬಳಿಸಿದ ವಿಶ್ವದ ಮೊದಲ ಬೌಲರ್​ ಎನಿಸಿಕೊಂಡರು. ಅಲ್ಲದೆ, ಸಿಪಿಎಲ್​ನಲ್ಲಿ 100 ವಿಕೆಟ್​ ಹಾಗೂ 100 ಸಿಕ್ಸರ್​ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡರು.

ಸೇಂಟ್​ ಲೂಸಿಯಾ ಜೌಕ್ಸ್​ : 17.1 ಓವರ್​ಗಳಲ್ಲಿ 6 ವಿಕೆಟ್​ಗೆ 111 (ಮೊಹಮದ್​ ನಬಿ 30, ನಜಿಬುಲ್ಲಾ ರ್ಜದಾನ್​ 21, ಡ್ವೇನ್​ ಬ್ರಾವೊ 7ಕ್ಕೆ 2), ಟ್ರಿನಿಬಾಗೊ ನೈಟ್​ ರೈಡರ್ಸ್​ : 8 ಓವರ್​ಗಳಲ್ಲಿ 4 ವಿಕೆಟ್​ಗೆ 72 (ಬ್ರಾವೊ 23, ಕೆಸ್ರಿಕ್​ ವಿಲಿಯಮ್ಸ್​ 17ಕ್ಕೆ 2). 

ಇಂದಿನ ಪಂದ್ಯ: ಸೇಂಟ್​ ಕೀಟ್ಸ್​  - ನೆವಿಸ್​ ಪ್ಯಾಟ್ರಿಯೊಟ್ಸ್​ & ಸೇಂಟ್​ ಲೂಸಿಯಾ ಜೌಕ್ಸ್​

ಪಂದ್ಯ ಆರಂಭ: ಭಾರತೀಯ ಕಾಲಮಾನ ರಾತ್ರಿ 7.30

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net