ಇಂದಿನಿಂದ ಕೆರಿಬಿಯನ್ ಟಿ20 ಹಬ್ಬ, ಭಾರತದಲ್ಲಿ ನೇರಪ್ರಸಾರವಾಗುವ ಚಾನಲ್ ಯಾವುದು ಗೊತ್ತೇ?

Guyana Amazon Warriors v Barbados Tridents - 2019 Hero Caribbean Premier League Final (CPL)
TAROUBA, TRINIDAD AND TOBAGO - OCTOBER 12: In this handout image provided by CPL T20, Jason Holder captain of Barbados Tridents lifts the Hero CPL trophy during the Hero Caribbean Premier League Final between Guyana Amazon Warriors and Barbados Tridents at Brian Lara Stadium on October 12, 2019 in Tarouba, Trinidad And Tobago. (Photo by Ashley Allen - CPL T20/CPL T20 via Getty Images)
Published on

ಟರೌಬ (ಟ್ರಿನಿಡಾಡ್): ಕರೊನಾ ಹಾವಳಿಯ ನಡುವೆ ಪ್ರತಿಷ್ಠಿತ ಐಪಿಎಲ್ ಟೂರ್ನಿಗೆ ಪೂರ್ವಭಾವಿಯಾಗಿ ವೆಸ್ಟ್ ಇಂಡೀಸ್‌ನಲ್ಲಿ ಟಿ20 ಕ್ರಿಕೆಟ್ ಹಬ್ಬ ಶುರುವಾಗಲಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟೂರ್ನಿಗೆ ಮಂಗಳವಾರ ಚಾಲನೆ ಸಿಗಲಿದ್ದು, ಟ್ರಿನಿಬಾಗೊ ನೈಟ್‌ರೈಡರ್ಸ್‌ ಮತ್ತು ಗಯಾನಾ ಅಮೆಜಾನ್ ವಾರಿಯರ್ಸ್‌ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಟೂರ್ನಿಯ ಪಂದ್ಯಗಳು ಭಾರತದಲ್ಲೂ ನೇರಪ್ರಸಾರ ಕಾಣಲಿವೆ.

ಸಿಪಿಎಲ್ ಪಂದ್ಯಗಳು ಕೂಡ ಭಾರತೀಯ ಕಾಲಮಾನದ ಪ್ರಕಾರ ಐಪಿಎಲ್ ಸಮಯದಲ್ಲೇ ನೇರಪ್ರಸಾರ ಕಾಣಲಿರುವುದು ವಿಶೇಷವಾಗಿದೆ. ಟೂರ್ನಿಯ ಉದ್ಘಾಟನಾ ಪಂದ್ಯ ಮಂಗಳವಾರ ರಾತ್ರಿ 7.30ಕ್ಕೆ ಆರಂಭಗೊಳ್ಳಲಿವೆ. ಸಿಪಿಎಲ್ ಪಂದ್ಯಗಳು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ನೇರಪ್ರಸಾರ ಕಾಣಲಿವೆ.

6 ತಂಡಗಳ ಟೂರ್ನಿಯ ಎಲ್ಲ 33 ಪಂದ್ಯಗಳು ಟ್ರಿನಿಡಾಡ್-ಟೊಬಾಗೋ ದ್ವೀಪದ 2 ತಾಣಗಳಲ್ಲಿ ನಡೆಯಲಿವೆ. 2 ಪಂದ್ಯಗಳು ಇದ್ದ ದಿನಗಳಲ್ಲಿ ಮೊದಲ ಪಂದ್ಯ ಭಾರತೀಯ ಕಾಲಮಾನದಂತೆ ಸಂಜೆ 7.30ಕ್ಕೆ ಆರಂಭಗೊಳ್ಳಲಿವೆ. 2ನೇ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಮುಂಜಾನೆ 3 ಗಂಟೆಗೆ ಆರಂಭಗೊಳ್ಳಲಿವೆ. ಇನ್ನು ಕೆಲ ದಿನಗಳಲ್ಲಿ ರಾತ್ರಿ 11.45ಕ್ಕೆ ಪಂದ್ಯ ಆರಂಭಗೊಳ್ಳಲಿದೆ. ಸೆಮಿಫೈನಲ್, ಫೈನಲ್ ಪಂದ್ಯಗಳು ಕೂಡ ಭಾರತೀಯ ವೀಕ್ಷಕರಿಗೆ ಅನುಕೂಲವಾಗುವ ರೀತಿಯಲ್ಲಿ ರಾತ್ರಿ 7.30ಕ್ಕೆ ಆರಂಭಗೊಳ್ಳಲಿವೆ.

ಮಾರ್ಚ್‌ನಲ್ಲಿ ಕರೊನಾ ವೈರಸ್ ಹಾವಳಿ ಶುರುವಾದ ಬಳಿಕ ನಡೆಯುತ್ತಿರುವ ಮೊದಲ ಟಿ20 ಲೀಗ್ ಇದಾಗಿದೆ. ಟೂರ್ನಿಗೆ 2 ವಾರ ಮುನ್ನವೇ ಎಲ್ಲರೂ ದ್ವೀಪರಾಷ್ಟ್ರದಲ್ಲಿ ಸೇರಿದ್ದು, ಕರೊನಾ ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿ ಪಡೆದುಕೊಂಡಿದ್ದಾರೆ.

ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ, ಅ್ಘಾನಿಸ್ತಾನದ ಆಟಗಾರರೂ ಆಡಬೇಕಾಗಿದ್ದರೂ, ಪ್ರಯಾಣ ನಿರ್ಬಂಧಗಳಿಂದಾಗಿ ವಿಂಡೀಸ್‌ಗೆ ತೆರಳಲು ಸಾಧ್ಯವಾಗಿಲ್ಲ. ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ವೈಯಕ್ತಿಕ ಕಾರಣಗಳಿಂದ ಟೂರ್ನಿಯಲ್ಲಿ ಆಡುತ್ತಿಲ್ಲ. ಆದರೆ ಮುಂದೆ ಐಪಿಎಲ್‌ಗೆ ಬರಲಿದ್ದಾರೆ. ಟೂರ್ನಿಯ ಫೈನಲ್ ಪಂದ್ಯ ಸೆಪ್ಟೆಂಬರ್ 10ರಂದು ನಡೆಯಲಿದ್ದು, ಬಳಿಕ ಐಪಿಎಲ್‌ನಲ್ಲಿ ಆಡಲಿರುವ ಆಟಗಾರರು ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ. ಭಾರತದ ಹಿರಿಯ ಸ್ಪಿನ್ನರ್ ಪ್ರವೀಣ್ ತಂಬೆ ಟೂರ್ನಿಯಲ್ಲಿ ಕೋಲ್ಕತ ನೈಟ್‌ರೈಡರ್ಸ್‌ನ ಸಿಸ್ಟರ್ ಫ್ರಾಂಚೈಸಿ ಟ್ರಿನಿಬಾಗೊ ನೈಟ್‌ರೈಡರ್ಸ್‌ ಪರ ಕಣಕ್ಕಿಳಿಯಲಿದ್ದಾರೆ.

*ಮಂಗಳವಾರದ ಪಂದ್ಯ

ಟ್ರಿನಿಬಾಗೊ ನೈಟ್‌ರೈಡರ್ಸ್‌-ಗಯಾನಾ ಅಮೆಜಾನ್ ವಾರಿಯರ್ಸ್‌

ಆರಂಭ: ಸಂಜೆ 7.30 (ಭಾರತೀಯ ಕಾಲಮಾನ)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಂಡಗಳು (ಪ್ರಮುಖ ಆಟಗಾರರು):

ಟ್ರಿನಿಬಾಗೊ ನೈಟ್‌ರೈಡರ್ಸ್‌: ಡ್ವೇನ್ ಬ್ರಾವೊ, ಕೈರಾನ್ ಪೊಲ್ಲಾರ್ಡ್, ಸುನೀಲ್ ನಾರಾಯಣ್, ಕಾಲಿನ್ ಮನ್ರೊ, ಪ್ರವೀನ್ ತಂಬೆ.

ಜಮೈಕಾ ತಲ್ಲವಾಹ್ಸ್: ಆಂಡ್ರೆ ರಸೆಲ್, ಸಂದೀಪ್ ಲಮಿಚನ್ನೆ, ಕಾರ್ಲೋಸ್ ಬ್ರಾಥ್‌ವೇಟ್, ಒಶಾನೆ ಥಾಮಸ್.

ಸೇಂಟ್ ಲೂಸಿಯಾ ಜೌಕ್ಸ್: ರೋಸ್ಟನ್ ಚೇಸ್, ಡರೇನ್ ಸ್ಯಾಮ್ಮಿ, ಆಂಡ್ರೆ ್ಲೆಚರ್, ಕೇಸ್ರಿಕ್ ವಿಲಿಯಮ್ಸ್.

ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್: ಕ್ರಿಸ್ ಲ್ಯಾನ್, ಎವಿನ್ ಲೆವಿಸ್, ಇಶ್ ಸೋಧಿ, ಶೆಲ್ಡನ್ ಕಾಟ್ರೆಲ್, ಅಲ್ಜಾರಿ ಜೋಸ್ೆ.

ಬಾರ್ಬಡೋಸ್ ಟ್ರೈಡೆಂಟ್ಸ್: ಜೇಸನ್ ಹೋಲ್ಡರ್, ಕೋರಿ ಆಂಡರ್‌ಸನ್, ಮಿಚೆಲ್ ಸ್ಯಾಂಟ್ನರ್, ಶೈ ಹೋಪ್.

ಗಯಾನಾ ಅಮೆಜಾನ್ ವಾರಿಯರ್ಸ್‌: ಇಮ್ರಾನ್ ತಾಹಿರ್, ನಿಕೋಲಸ್ ಪೂರನ್, ರಾಸ್ ಟೇಲರ್, ಶಿಮ್ರೋನ್ ಹೆಟ್ಮೆಯರ್, ಕೀಮೊ ಪೌಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net