ಐಪಿಎಲ್​ ಮುಂದೂಡಿದ ಬೆನ್ನಲ್ಲೇ ಭಾರತ-ಆಫ್ರಿಕಾ ನಡುವಿನ ಏಕದಿನ ಸರಣಿಗೂ ಕರೊನಾ ಕಂಟಕ

Cricket Corona
Published on

ನವದೆಹಲಿ: ಪ್ರಸ್ತುತ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನು ಕರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ. ಈಗಾಗಲೇ ಐಪಿಎಲ್​ ಪಂದ್ಯಾವಳಿಯನ್ನು ಏಪ್ರಿಲ್​ 15ರವರೆಗೆ ಮುಂದೂಡಲಾಗಿದೆ.

ಗುರುವಾರ ಹಿಮಾಚಲ ಪ್ರದೇಶದಲ್ಲಿ ನಡೆಯಬೇಕಿದ್ದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯವು ನಿರಂತರ ಮಳೆಯಿಂದಾಗಿ ರದ್ದಾಯಿತು. ಇನ್ನುಳಿದ ಎರಡು ಪಂದ್ಯಗಳನ್ನು ಆರೋಗ್ಯ ಸಚಿವಾಲಯ ನೀಡಿರುವ ಸಲಹೆ ಮೇರೆಗೆ ರದ್ದು ಪಡಿಸಲಾಗಿದೆ.

ಜನಸಮೂಹ ಸೇರುವಂತಹ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಆರೋಗ್ಯ ಸಚಿವಾಲಯ ಸಲಹೆ ನೀಡಿದೆ. ಹೀಗಿದ್ದರೂ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಮೊದಲು ತೀರ್ಮಾನಿಸಲಾಗಿತ್ತು. ಆದರೆ, ಇದೀಗ ಮುಂಜಾಗ್ರತ ಕ್ರಮವಾಗಿ ಏಕದಿನ ಸರಣಿಯನ್ನೇ ನಿಷೇಧಿಸಲಾಗಿದೆ.

ಕರೊನಾ ಭೀತಿಯಿಂದ ರದ್ದಾದ ಎರಡನೇ ಅಂತಾರಾಷ್ಟ್ರೀಯ ಸರಣಿ ಇದಾಗಿದೆ. ಇದಕ್ಕೂ ಮುನ್ನಾ ಶ್ರೀಲಂಕಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​- ಲಂಕಾ ನಡುವಿನ ಟೆಸ್ಟ್​ ಸರಣಿಯನ್ನು ನಿಷೇಧಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net