ಐಪಿಎಲ್​ ಬ್ಯಾನ್​! ಕರೊನಾ ವೈರಸ್​ನಿಂದಾಗಿ ಐಪಿಎಲ್​ ನಿಷೇಧ ಎಂದ ದೆಹಲಿ ಡಿಸಿಎಂ

IPL
Published on

ನವದೆಹಲಿ: ದೇಶದಲ್ಲಿ ಕರೊನಾ ವೈರಸ್​ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕ ಕಾರ್ಯಕ್ರಮಗಳು ಸೇರಿ ಎಲ್ಲಾ ರೀತಿಯ ಸಭೆ ಸಮಾರಂಭಗಳನ್ನು ರದ್ದುಗೊಳಿಸಲಾಗುತ್ತಿದೆ. ಪ್ರಸಿದ್ಧ ಐಪಿಎಲ್​ ಕ್ರಿಕೆಟ್​ ಪಂದ್ಯಾವಳಿಗೂ ಸಹ ಕರೊನಾ ಪರಿಣಾಮ ಬೀರಿದ್ದು, ದೆಹಲಿಯಲ್ಲಿ ಐಪಿಎಲ್​ ಪಂದ್ಯವನ್ನು ರದ್ದು ಮಾಡಿರುವ ಮಾಹಿತಿ ಇದೀಗ ಹೊರಬಿದ್ದಿದೆ.

ಐಪಿಎಲ್​ ವಿಚಾರವಾಗಿ ಇಂದು ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ದೆಹಲಿಯ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ, ರಾಜ್ಯದಲ್ಲಿ ಐಪಿಎಲ್​ ಪಂದ್ಯ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಕರೊನಾ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಐಪಿಎಲ್​ ಸೇರಿದಂತೆ ಎಲ್ಲಾ ಕ್ರೀಡಾಕೂಟಗಳು, ಸೆಮಿನಾರ್​ಗಳು, ಸಮಾವೇಶಗಳನ್ನು ದೆಹಲಿ ಸರ್ಕಾರ ನಿಷೇಧಿಸಿದೆ. ಎಲ್ಲಾ ಡಿಎಂ, ಎಸ್​ಡಿಎಂ ತಮ್ಮ ಪ್ರದೇಶದಲ್ಲಿ ಕರೊನಾ ಸಂಬಂಧಿಯ ಆದೇಶಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಹಲವು ರಾಜ್ಯಗಳು ಐಪಿಎಲ್​ನ್ನು ನಿಷೇಧಿಸಬೇಕು ಎಂದು ಕೇಂದ್ರದಲ್ಲಿ ಮನವಿ ಮಾಡಿಕೊಂಡಿದ್ದವು. ಮಹಿಳಾ ಟಿ20 ವಿಶ್ವಕಪ್​ ಪಂದ್ಯದಲ್ಲಿಯೂ ಒಬ್ಬ ಅಭಿಮಾನಿಯಲ್ಲಿ ಕರೊನಾ ಪತ್ತೆಯಾಗಿದ್ದು ಧೃಢವಾಗಿತ್ತು. ಆ ಕಾರಣದಿಂದಾಗಿ ಐಪಿಎಲ್​ನ್ನು ಕೇವಲ ಟಿವಿಯಲ್ಲಿ ಮಾತ್ರ ನೋಡಲು ಅವಕಾಶ ಮಾಡಿಕೊಡಲಾಗುವುದು ಎನ್ನುವ ವಿಚಾರ ಕೇಳಿಬಂದಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net