

ನವದೆಹಲಿ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಸಕ್ತ ವರ್ಷವೇ ನಡೆಯುವ ವಿಶ್ವಾಸವಿದೆ ಎಂದು ಭಾರತ ತಂಡದ ಮಾಜಿ ನಾಯಕ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಖಾಲಿ ಸ್ಟೇಡಿಯಂನಲ್ಲಿ ಟೂರ್ನಿ ನಡೆಸುವುದಾದರೆ, 3ರಿಂದ 4 ಸ್ಥಳಗಳಲ್ಲಿ ಟೂರ್ನಿ ಆಯೋಜಿಸಬಹುದು, ಟೂರ್ನಿ ನಡೆಯುವ ವಿಶ್ವಾಸವಿದೆ ಎಂದು ಐಸಿಸಿ ಕ್ರಿಕೆಟ್ ಸಮಿತಿ ಚೇರ್ಮನ್ ಕೂಡ ಆಗಿರುವ ಕುಂಬ್ಳೆ ತಿಳಿಸಿದ್ದಾರೆ.
ಇದೇ ಅಭಿಪ್ರಾಯವನ್ನು ಭಾರತದ ಮತ್ತೋರ್ವ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದರು. ಹಲವು ಸ್ಟೇಡಿಯಂಗಳಲ್ಲಿ ಟೂರ್ನಿ ಸಂಘಟಿಸುವ ಬದಲಿಗೆ ಪ್ರವಾಸ ಕಡಿತಗೊಳಿಸುವ ದೃಷ್ಟಿಯಿಂದ ಕೆಲ ಸ್ಟೇಡಿಯಂಗಳಲ್ಲಿ ಟೂರ್ನಿ ಆಯೋಜಿಸಬಹುದು ಎಂದಿದ್ದರು. ಖಾಲಿ ಸ್ಟೇಡಿಯಂಗಳಲ್ಲಿ ಟೂರ್ನಿ ಆಯೋಜಿಸುವುದಾದರೆ 3-4 ಸ್ಟೇಡಿಯಂಗಳು ಸಾಕು. ಟೂರ್ನಿ ನಡೆಯುವ ಬಗ್ಗೆ ವಿಶ್ವಾಸವಿದೆ ಎಂದು ಮಾಜಿ ಸ್ಪಿನ್ನರ್ ಕುಂಬ್ಳೆ ಹೇಳಿದ್ದಾರೆ.