

ಲಖನೌ: ಜೀವಂತವಾಗಿ ಹೂಳಲ್ಪಟ್ಟಿದ್ದ ನವಜಾತ ಶಿಶುವನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಸಿದ್ಧಾರ್ಥ ನಗರ ಜಿಲ್ಲೆಯ ಸೋನಾರ್ ಗ್ರಾಮದಲ್ಲಿ ಅಪರಿಚಿತರು ನವಜಾತ ಗಂಡು ಶಿಶುವನ್ನು ನೆಲದಲ್ಲಿ ಹೂಳಿದ್ದರು. ಹೊಲದಲ್ಲಿ ಕೆಲಸ ಮಾಡುವ ವೇಳೆ ರೈತ ಮಗುವನ್ನು ನೋಡಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಗ್ರಾಮಸ್ಥರು ಮಗುವನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಪ್ರಜ್ಞಾಹೀನವಾಗಿದೆ.
ಇದನ್ನೂ ಓದಿ ಮಾವಿನ ಹಣ್ಣಿನಿಂದ ಕರೊನಾ ಬರೋದಿಲ್ಲ; ನಾರಾಯಣಗೌಡ
ಸೋನಾರ್ ಗ್ರಾಮದಲ್ಲಿ ರೈತ ಮನೋಜ್ ಎಂಬುವವರು ಟ್ಟ್ಯಾಕ್ಟರ್ನಲ್ಲಿ ಹೊಲ ಉಳುಮೆ ಮಾಡುತ್ತಿದ್ದರು. ಈ ವೇಳೆ ಅಲ್ಲಿ ಮಣ್ಣಿನ ಗುಡ್ಡೆ ಕಾಣಿಸಿತು. ಗುಡ್ಡೆಯಲ್ಲಿ ಮಗುವಿನ ಕೈಬೆರಳುಗಳು ಕೂಡ ಕಾಣಿಸುತ್ತಿದ್ದವು. ಕೂಡಲೇ ಮನೋಜ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮಗುವನ್ನು ಜೀವಂತವಾಗಿ ಹೂಳಿರುವುದು ತಿಳಿಯಿತು. ಕೂಡಲೇ ಅವರು ಗ್ರಾಮಸ್ಥರ ನೆರವಿನಿಂದ ಮಗುವನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದರು.
ಮಗುವಿನ ಹೊಕ್ಕಳ ಬಳ್ಳಿ ಹಾಗೆ ಇರುವುದು ಪತ್ತೆಯಾಗಿದೆ. ಪೊಲೀಸರು ಕೇಸು ದಾಖಲಿಸಿದ್ದಾರೆ.(ಏಜೆನ್ಸೀಸ್)