

ಮುಂಬೈ: ಯುವ ವೇಗಿ ಟಿಟಾಸ್ ಸಾಧು (17ಕ್ಕೆ 4) ಬಿಗಿ ಬೌಲಿಂಗ್ ದಾಳಿ ಮತ್ತು ಆರಂಭಿಕರಾದ ಸ್ಮ$ತಿ ಮಂದನಾ (54 ರನ್, 52 ಎಸೆತ, 7 ಬೌಂಡರಿ, 1 ಸಿಕ್ಸರ್), ಶೆಾಲಿ ವರ್ಮ (64*ರನ್, 44 ಎಸೆತ, 6 ಬೌಂಡರಿ, 3 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಮಹಿಳೆಯರ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೆಲಿಯಾ ಎದುರು 9 ವಿಕೆಟ್ಗಳಿಂದ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ ಹರ್ಮಾನ್ಪ್ರೀತ್ ಕೌರ್ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಏಕದಿನ ಸರಣಿಯ ವೈಟ್ವಾಷ್ ಮುಖಭಂಗಕ್ಕೆ ಸೇಡು ತೀರಿಸುವ ನಿಟ್ಟಿನಲ್ಲಿ ಶುಭಾರಂಭ ಕಂಡಿದೆ.
ಡಾ. ಡಿವೈ ಪಾಟೀಲ್ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆಸೀಸ್ ಆರಂಭದಲ್ಲಿ 33 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ತತ್ತರಿಸಿತು. ನಂತರ ಎಲ್ಲಿಸ್ ಪೆರ್ರಿ (37) ಮತ್ತು ಫೋಬ್ ಲಿಚ್ಫೀಲ್ಡ್ (49) ಹೋರಾಟದ ನಡುವೆ 19.2 ಓವರ್ಗಳಲ್ಲಿ 141 ರನ್ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಸ್ಮ$ತಿ ಮಂದನಾ ಮತ್ತು ಶೆಫಾಲಿ ವರ್ಮ ಮೊದಲ ವಿಕೆಟ್ಗೆ 93 ಎಸೆತಗಳಲ್ಲೇ 137 ರನ್ ಸೇರಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. ಅಂತಿಮವಾಗಿ ಭಾರತ 17.4 ಓವರ್ಗಳಲ್ಲಿ 1 ವಿಕೆಟ್ಗೆ 145 ರನ್ ಪೇರಿಸಿ ಜಯದ ದಡ ಸೇರಿತು.
ಆಸ್ಟ್ರೆಲಿಯಾ: 19.2 ಓವರ್ಗಳಲ್ಲಿ 141 (ಅಲಿಸ್ಸಾ ಹೀಲಿ 8, ಮೂನಿ 17, ಎಲ್ಲಿಸ್ ಪೆರ್ರಿ 37, ಲಿಚ್ಫೀಲ್ಡ್ 49, ಸುದರ್ಲ್ಯಾಂಡ್ 12, ಟಿಟಾಸ್ ಸಾಧು 17ಕ್ಕೆ 4, ಶ್ರೇಯಾಂಕಾ 19ಕ್ಕೆ 2, ದೀಪ್ತಿ ಶರ್ಮ 24ಕ್ಕೆ 2). ಭಾರತ: 17.4 ಓವರ್ಗಳಲ್ಲಿ 1 ವಿಕೆಟ್ಗೆ 145 (ಸ್ಮೃತಿ 54, ಶೆಫಾಲಿ 64*, ಜೆಮೀಮಾ 6*, ವರೆಹ್ಯಾಂ 20ಕ್ಕೆ 1).
2ನೇ ಟಿ20 ಪಂದ್ಯ
ಯಾವಾಗ: ಭಾನುವಾರ
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಪೋರ್ಟ್ಸ್18
ಸ್ಮೃತಿ 3 ಸಾವಿರ ರನ್ ಸಾಧನೆ
ಭಾರತದ ಎಡಗೈ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಮಹಿಳೆಯರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 3 ಸಾವಿರ ರನ್ ಪೂರೈಸಿದ 2ನೇ ಭಾರತೀಯರೆನಿಸಿದರು. ಒಟ್ಟಾರೆಯಾಗಿ ಅವರು ವಿಶ್ವದ 6ನೇ ಸಾಧಕಿಯಾಗಿದ್ದಾರೆ. ಸ್ಮೃತಿ (3,041) ತಾನಾಡಿದ 126ನೇ ಪಂದ್ಯದಲ್ಲಿ ಈ ಮೈಲಿಗಲ್ಲು ನೆಟ್ಟರು. ಹರ್ಮಾನ್ಪ್ರೀತ್ ಕೌರ್ (3,195) ಈ ಸಾಧನೆ ಮಾಡಿರುವ ಮೊದಲ ಭಾರತೀಯ ಆಟಗಾರ್ತಿಯಾಗಿದ್ದಾರೆ.