Champion Tropy 2025; ತಂಡ ಆಯ್ಕೆ ಮಾಡುವಲ್ಲಿ ಆಯ್ಕೆ ಸಮಿತಿ ವಿಫಲ: ಮಾಜಿ ಆಟಗಾರ ರವಿಚಂದ್ರನ್​ ಅಶ್ವಿನ್​ ಬೇಸರ

dk - 2025-02-16T165915.175
Published on

Champion Tropy 2025:ಇದೇ ಫೆ.19ರಿಂದ ಪಾಕಿಸ್ತಾನದಲ್ಲಿ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ​ ಮಂಡಳಿ(BCCI)ಯ ಆಯ್ಕೆ ಸಮತಿ ಮೇಲೆ ಟೀಮ್​ ಇಂಡಿಯಾದ ಮಾನಜಿ ಆಟಗಾರ ರವಿಚಂದ್ರನ್​ ಅಶ್ವಿನ್​​ ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು, ಟ್ರೋಫಿ ಸರಣಿಗೆ ಸರಿಯಾದ ತಂಡವನ್ನು ಆಯ್ಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿರುವ ಅಶ್ವಿನ್​, ತಮ್ಮ ಯೂಟ್ಯೂಬ್​​ ಚಾನಲ್​ ಮೂಲಕ ಟ್ರೋಫಿ ತಂಡದ ಬಗ್ಗೆ ಮಾನಾಡಿದ್ದಾರೆ. ಇದೀಗ ಚಾಂಪಿಯನ್ಸ್​ ಟ್ರೋಫಿ ಸರಣಿಗೆ ಆಯ್ಕೆಯಾದ ತಂಡದಲ್ಲಿ ಇಬ್ಬರು ಹೆಚ್ಚುವರಿ ಸ್ಪಿನ್​ ಬೌಲರ್ಸ್​ಗಳು ಇದ್ದಾರೆ. ಯಶಸ್ವಿ ಜೈಸ್ವಾಲ್​​ ಅವರನ್ನು ಮಿಸಲು ಪಟ್ಟಿಯನ್ನು ಸೇರಿಸಿದ್ದನ್ನು ಟೀಕಿಸಿದ್ದಾರೆ.

ಅಶ್ವಿನ್​ ಹೇಳಿದ್ದೇನು..?

ಸಾಮಾನ್ಯವಾಗಿ ಇತರೆ ಪ್ರವಾಸಗಳಲ್ಲಿ 3 ಅಥವಾ 4 ಸ್ಪೀನ್ನರ್ಸ್​ಗಳನ್ನು ಕೊಂಡೊಯ್ಯತ್ತೇವೆ. ಆದರೆ, ಚಾಂಪಿಯನ್ಸ್​ ಟ್ರೋಫಿಗೆ 5 ಸ್ಪೀನರ್ಸ್​ಗಳನ್ನು ಏಕೆ ಕರೆದೊಯ್ಯುತ್ತಿದ್ದಾರೆ ಎಂಬುವುದು ನನಗೆ ಅರ್ಥವಾಗತ್ತಿಲ್ಲ. ಅಲ್ಲದೆ, ಮೀಸಲು ಪಟ್ಟಿಯಲ್ಲಿ ಯುವ ಆಟಗಾರ ಜೈಸ್ವಾಲ್​​ ಅವರನ್ನೂ ತಗೆದುಕೊಂಡಿದ್ದಾರೆನ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

''ನಮ್ಮ ಅತ್ಯುತ್ತಮ ಇಬ್ಬರು ಎಡಗೈ ಬೌಲರ್​ಗಳಾದ ಅಕ್ಷಯ್​​, ಜಡೇಜಾ ಜತೆ ಹಾರ್ದಿಕ್ ಪಾಂಡ್ಯ ಇದ್ದಾನೆ. ಅಲ್ಲದೆ, ಕುಲದೀಪ್​ ಕೂಡ ಇದ್ದಾರೆ. ಇವೆಲ್ಲರ ನಡುವೆ ಇದೀಗ, ವರಣ್​ ಚರ್ಕ್ರವರ್ತಿ ಆಡಲು ಬಯಸಿದರೆ ಇದರಲ್ಲಿ ಒಬ್ಬ ಬೌಲರ್ ಹೊರಗುಳಿಯಬೇಕಾಗತ್ತದೆ. ಹಾರ್ದಿಕ್​ ಪಾಂಡ್ಯ ಎರಡನೇ ಸ್ಪೀಡ್​ ಬೌಲರ್​ ಆಗಿ ಯಶಸ್ವಿ ಪಾತ್ರ ನಿರ್ವಹಿಸುತ್ತಾರೆ. ಇದೆಲ್ಲದರ ನಡುವೆ ಸ್ಪೀನ್ನರ್ಸ್​ ಇಳಿಸಿದರೆ ಮಿಕ್ಕಿದವರಿಗೆ ಸ್ಥಾನ ಲಭಿಸಲ್ಲ'' ಎಂದು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net