ಬೆಂಗಳೂರಿನಲ್ಲಿ ಮುಖಾಮುಖಿಯಾಗುವ ಮುನ್ನ ಶ್ರೀಲಂಕಾ-ಇಂಗ್ಲೆಂಡ್​ ತಂಡಗಳಿಗೆ ಹೊಸ ಆಟಗಾರರ ಬಲ!

wc sl vs eng web
Published on

ಬೆಂಗಳೂರು: ಏಕದಿನ ವಿಶ್ವಕಪ್​ನಲ್ಲಿ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿರುವ ಶ್ರೀಲಂಕಾ ಮತ್ತು ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡಗಳಲ್ಲಿ ತಲಾ ಒಂದು ಬದಲಾವಣೆ ಮಾಡಲಾಗಿದೆ.

ವೇಗಿ ಮಥೀಶ ಪಥಿರಣ ಭುಜದ ಗಾಯದಿಂದ ಬಳಲುತ್ತಿರುವ ಕಾರಣ ಅವರ ಬದಲಿಗೆ ಮಾಜಿ ನಾಯಕ ಹಾಗೂ ಆಲ್ರೌಂಡರ್​ ಏಂಜೆಲೊ ಮ್ಯಾಥ್ಯೂಸ್​ಗೆ ಶ್ರೀಲಂಕಾ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. 36 ವರ್ಷದ ಮ್ಯಾಥ್ಯೂಸ್​ 221 ಏಕದಿನ ಪಂದ್ಯ ಆಡಿರುವ ಅನುಭವಿಯಾಗಿದ್ದು, ಇದು ಅವರಿಗೆ ಸತತ 4ನೇ ವಿಶ್ವಕಪ್​ ಆಗಿರಲಿದೆ.

ಇಂಗ್ಲೆಂಡ್​ ತಂಡದಲ್ಲಿ ಗಾಯಾಳು ವೇಗಿ ರೀಸ್​ ಟಾಪ್ಲೆ ಬದಲಿಗೆ ಅನನುಭವಿ ವೇಗಿ ಬೆಡನ್​ ಕಾರ್ಸ್​ಗೆ ಸ್ಥಾನ ನೀಡಲಾಗಿದೆ. ಕಾರ್ಸ್​ ಇದುವರೆಗೆ 12 ಏಕದಿನ ಪಂದ್ಯಗಳನ್ನಷ್ಟೇ ಆಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net